Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಬೆಚ್ಚಗಿರುವ ಉಪ್ಪಿನ ನೀರನ್ನು ಏಕೆ ಕುಡಿಯಬೇಕು? ಈ ಬಗ್ಗೆ ತಜ್ಞರ ಅಭಿಪ್ರಾಯವೇನು?

ಜನರು ತಾವು ಕುಡಿಯುವ ನೀರಿಗೆ ಉಪ್ಪನ್ನು ಏಕೆ ಸೇರಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ಬೆಚ್ಚಗಿರುವ ಉಪ್ಪಿನ ನೀರಲ್ಲಿ ಆರೋಗ್ಯ ಪ್ರಯೋಜನಗಳು ಹೇರಳವಾಗಿವೆ. ಜೊತೆಗೆ ಇದನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅದಲ್ಲದೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಯಾವುದು ಎಂದು ತಿಳಿದಿದೆಯಾ? ಇಲ್ಲಿದೆ ಮಾಹಿತಿ.

ಪ್ರತಿದಿನ ಬೆಚ್ಚಗಿರುವ ಉಪ್ಪಿನ ನೀರನ್ನು ಏಕೆ ಕುಡಿಯಬೇಕು? ಈ ಬಗ್ಗೆ ತಜ್ಞರ ಅಭಿಪ್ರಾಯವೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 17, 2023 | 12:26 PM

ಜನರು ತಾವು ಕುಡಿಯುವ ನೀರಿಗೆ ಉಪ್ಪನ್ನು ಏಕೆ ಸೇರಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಉಪ್ಪು ನೀರನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ ಕುಡಿಯುವುದರಿಂದ ಶೀತ ಮತ್ತು ಅಲರ್ಜಿಯಿಂದ ಉಂಟಾಗುವ ಗಂಟಲು ನೋವು ನಿವಾರಣೆ ಯಾಗುತ್ತದೆ. ದೇಹದಲ್ಲಿ ಸರಿಯಾದ ದ್ರವ ಕಾರ್ಯ ಮತ್ತು ಎಲೆಕ್ಟ್ರೋಲೈಟ್ ಮಟ್ಟವನ್ನು ಕಾಪಾಡಿಕೊಳ್ಳಲು ನಮಗೆಲ್ಲರಿಗೂ ಸ್ವಲ್ಪ ಪ್ರಮಾಣದ ಸೋಡಿಯಂ ಅಥವಾ ಉಪ್ಪು ಬೇಕು. ಆದ್ದರಿಂದ, ನೀರಿನಲ್ಲಿ ಉಪ್ಪನ್ನು ಬೆರೆಸಿ ಕುಡಿಯುವುದು ಜಲಸಂಚಯನ, ಎಲೆಕ್ಟ್ರೋಲೈಟ್ ಸಮತೋಲನ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಉಪ್ಪು ನೀರು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಯಾವುದು ಎಂದು ತಿಳಿದಿದೆಯಾ? ಇಲ್ಲಿದೆ ಮಾಹಿತಿ.

ಉಪ್ಪು ನೀರು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು ಎಂದು ನೋಯ್ಡಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಜನರಲ್ ಫಿಸಿಶಿಯನ್ ಡಾ. ಸುಮೋಲ್ ರತ್ನಾ ಹೇಳುತ್ತಾರೆ. ಅವರು ಕೆಲವು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿದ್ದು ಉಪ್ಪು ನೀರು ಯಾವ ರೀತಿಯಲ್ಲಿ ಪ್ರಯೋಜನಕಾರಿ ಎಂಬುದನ್ನು ತಿಳಿಸಿದ್ದಾರೆ.

1. ಮರುಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಸಮತೋಲನ

ಯಾವುದೇ ರೂಪದಲ್ಲಿ ನೀರು ಕುಡಿಯುವುದು ನಿಮಗೆ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ ಆದರೆ ಉಪ್ಪು ನೀರು ಸರಿಯಾದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಡಾ. ಸುಮೋಲ್ ರತ್ನಾ ಹೇಳುತ್ತಾರೆ, “ಮಾನವ ದೇಹವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು, ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ ಎಲೆಕ್ಟ್ರೋಲೈಟ್ಗಳ ನಿಖರವಾದ ಸಮತೋಲನದ ಅಗತ್ಯವಿದೆ. ಆದ್ದರಿಂದ, ನೀವು ಉಪ್ಪು ನೀರನ್ನು ಮಿತವಾಗಿ ಸೇವಿಸಿದಾಗ, ದೈಹಿಕ ಚಟುವಟಿಕೆಯ ಸಮಯದಲ್ಲಿ, ಅನಾರೋಗ್ಯದ ಸಮಯದಲ್ಲಿ ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಎಲೆಕ್ಟ್ರೋಲೈಟ್ಗಳನ್ನು ಮರುಪೂರಣ ಮಾಡಲು ಇದು ಸಹಾಯ ಮಾಡುತ್ತದೆ. ನೀವು ಉಪ್ಪು ನೀರನ್ನು ಕುಡಿದರೆ ನಿಮ್ಮ ಸ್ನಾಯುಗಳು, ನರಗಳು ಮತ್ತು ದೈಹಿಕ ವ್ಯವಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ.

2. ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ

ಉಪ್ಪು ನೀರನ್ನು ಮಿತವಾಗಿ ಕುಡಿಯುವುದರಿಂದ ಉತ್ತಮ ಜೀರ್ಣ ಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಜರ್ನಲ್ ಆಫ್ ಆಲ್ಟರ್ನೇಟಿವ್ ಅಂಡ್ ಕಾಂಪ್ಲಿಮೆಂಟರಿ ಮೆಡಿಸಿನ್ ನಲ್ಲಿ 2010 ರಲ್ಲಿ ಪ್ರಕಟವಾದ ಅಧ್ಯಯನವು ಉಪ್ಪು ನೀರು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ ಎಂದು ತೋರಿಸಿ ಕೊಟ್ಟಿದೆ. ಇದು ಜೀರ್ಣಕಾರಿ ದ್ರವಗಳ ಸ್ರವಿಸುವಿಕೆಯನ್ನು ಹೆಚ್ಚಿಸಬಹುದು, ಜೊತೆಗೆ ಇದು ಆಹಾರದಲ್ಲಿರುವ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ಹೊಟ್ಟೆಯ ಪಿಎಚ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಉತ್ತಮ ಜೀರ್ಣಕ್ರಿಯೆಗೆ ಅಗತ್ಯವಾಗಿದೆ.

3. ನಿರ್ವಿಷೀಕರಣ

ಉಪ್ಪು ನೀರಲ್ಲಿ ನಿರ್ವಿಷಗೊಳಿಸುವ ಗುಣಗಳು ಇರಬಹುದು, ಇದು ಬೆವರುವ ಮೂಲಕ ನಿಮ್ಮ ದೇಹದಿಂದ ವಿಷಕಾರಿ ಸಂಯುಕ್ತಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಉಪ್ಪು ನೀರು ಮೂತ್ರಪಿಂಡಗಳು ಮತ್ತು ಯಕೃತ್ತನ್ನು ಸಕ್ರಿಯಗೊಳಿಸುತ್ತದೆ, ಇದು ದೇಹವು ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಕಾರಣವಾಗಬಹುದು.

4. ಚರ್ಮಕ್ಕೆ ಒಳ್ಳೆಯದು

ಉಪ್ಪು ನೀರು ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಸಮಕಾಲಿಕವಾಗಿ ಉಪ್ಪು ನೀರನ್ನು ಸೇವನೆ ಮಾಡುವುದರಿಂದ, ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ, ಮೊಡವೆ, ಸೋರಿಯಾಸಿಸ್ ಮತ್ತು ಎಸ್ಜಿಮಾ ರೋಗ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಉಪ್ಪು ನೀರನ್ನು ಕುಡಿದಾಗ, ಅದು ದೇಹದ ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ವಿಷವನ್ನು ಹೊರ ಹಾಕಲು ಸಹಾಯ ಮಾಡುವ ಮೂಲಕ ಉತ್ತಮ ಮತ್ತು ಆರೋಗ್ಯಕರ ಚರ್ಮಕ್ಕೆ ಕೊಡುಗೆ ನೀಡುತ್ತದೆ.

5. ಉಸಿರಾಟದ ತೊಂದರೆಗಳನ್ನು ತಡೆಯುತ್ತದೆ

ನಮ್ಮ ಗಂಟಲಲ್ಲಿ ಸ್ವಲ್ಪ ಕಿರಿಕಿರಿ ಅನುಭವಿಸಿದಾಗ, ನಮ್ಮ ಅಮ್ಮಂದಿರು ಯಾವಾಗಲೂ ಬೆಚ್ಚಗಿರುವ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಲು ಮತ್ತು ಅದನ್ನು ಕುಡಿಯಲು ಹೇಳುತ್ತಿದ್ದರು, ಇದಕ್ಕೆ ಪೂರಕವೆಂಬಂತೆ ಇನ್ ವಿವೋ ಅಧ್ಯಯನದ ಪ್ರಕಾರ, ಉಪ್ಪು ನೀರು ಇಮ್ಯುನೊಗ್ಲೋಬುಲಿನ್ ಇ (ಐಜಿಇ), ಹಿಸ್ಟಮೈನ್ ಮತ್ತು ಪ್ರೊಇನ್ಫ್ಲಾಮೇಟರಿ ಸೈಟೋಕಿನ್ಗಳ ಪ್ರತಿಕ್ರಿಯೆಗಳನ್ನು ನಿರ್ಬಂಧಿಸುತ್ತದೆ, ಇದು ಅಲರ್ಜಿಯ ಪ್ರತಿಕ್ರಿಯೆಗೆ ಕಾರಣವಾಗಬಹುದು. ಉಪ್ಪು ನೀರು ಲೋಳೆಯನ್ನು ಸ್ವಚ್ಛಗೊಳಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಒಟ್ಟಾರೆ ಶ್ವಾಸಕೋಶ ಮತ್ತು ಉಸಿರಾಟದ ಕಾರ್ಯವನ್ನು ಹೆಚ್ಚಿಸುತ್ತದೆ, ಇದು ಶೀತ, ಅಲರ್ಜಿ ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಸಂಭಾವ್ಯ ಮನೆಮದ್ದಾಗಿದೆ ಎಂದಿದೆ.

6. ತೂಕ ನಷ್ಟವನ್ನು ಹೆಚ್ಚಿಸುತ್ತದೆ

ನೇರವಾಗಿ ಅಲ್ಲ ಆದರೆ ಉಪ್ಪು ನೀರನ್ನು ಮಿತವಾಗಿ ಕುಡಿಯುವುದರಿಂದ ತೂಕ ನಿರ್ವಹಣೆಗೆ ಪರೋಕ್ಷವಾಗಿ ಸಹಾಯ ಮಾಡುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ವಿಷ ಮತ್ತು ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತದೆ, ಜೊತೆಗೆ ಇದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

7. ಒತ್ತಡವನ್ನು ಕಡಿಮೆ ಮಾಡುತ್ತದೆ

ಉಪ್ಪು ನೀರಿನ ಕೆಲವು ಪರಿಣಾಮಕಾರಿ ಗುಣಗಳ ಬಗ್ಗೆ ಎಲ್ಲರಿಗೂ ತಿಳಿದಿವೆ. ಇದು ದೇಹಕ್ಕೆ ವಿಶ್ರಾಂತಿಯನ್ನು ಉತ್ತೇಜಿಸಲು ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡಾ. ರತ್ನಾ ಹೇಳುತ್ತಾರೆ, ಉಪ್ಪು ನೀರಿನಲ್ಲಿರುವ ಮೆಗ್ನೀಸಿಯಮ್ ನಂತಹ ಖನಿಜಗಳು ನರ ಮಂಡಲವನ್ನು ಶಾಂತಗೊಳಿಸುತ್ತವೆ, ನಿಮಗೆ ಹೆಚ್ಚು ಆರಾಮದಾಯಕವಾಗಿರಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ.

ಇದನ್ನೂ ಓದಿ:ರೋಗಗಳಿಂದ ಮುಕ್ತಿ ಹೊಂದಲು ಪ್ರತಿದಿನ ಕಪ್ಪು ಉಪ್ಪಿನ ನೀರು ಕುಡಿಯಿರಿ..!

ಸಾಮಾನ್ಯ ಉಪ್ಪು ನೀರಿಗಿಂತ, ಬೆಚ್ಚಗಿರುವ ಉಪ್ಪಿನ ನೀರು ಉತ್ತಮವೇ?

ಉಪ್ಪು ನೀರು ಕುಡಿಯುವುದು ಸಾಮಾನ್ಯವಾಗಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಬೆಚ್ಚಗಿರುವ ಉಪ್ಪು ನೀರನ್ನು ಅದರ ಹಿತವಾದ ಮತ್ತು ಚಿಕಿತ್ಸಕ ಪರಿಣಾಮಗಳಿಗಾಗಿ ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಇದು ಜೀರ್ಣಕ್ರಿಯೆ, ಉಸಿರಾಟದ ಸಮಸ್ಯೆಗಳು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲರ್ಜಿ ಅಥವಾ ಶೀತದಿಂದಾಗಿ ಗಂಟಲು ನೋವು ಮತ್ತು ಕಿರಿಕಿರಿಗೆ ಚಿಕಿತ್ಸೆ ನೀಡಲು ಇದನ್ನು ಮನೆಮದ್ದಾಗಿ ಬಳಸಬಹುದು. ಯಾವುದೇ ಅಸ್ವಸ್ಥತೆ ಅಥವಾ ಕಿರಿಕಿರಿಯನ್ನು ತಪ್ಪಿಸಲು ಕುಡಿಯುವ ಮೊದಲು ಉಪ್ಪು ಸಂಪೂರ್ಣವಾಗಿ ಕರಗಿದೆ ಎಂದು ಖಚಿತಪಡಿಸಿಕೊಳ್ಳಿ. ಅಲ್ಲದೆ, ಇದನ್ನು ಮಿತವಾಗಿ ಕುಡಿಯಿರಿ. ಸಮುದ್ರದ ನೀರನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆಯಾದರೂ, ಮಿತಗೊಳಿಸುವುದು ಮುಖ್ಯವಾಗಿದೆ. ಅತಿಯಾದ ಉಪ್ಪಿನ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಕಾರ್ಯಕ್ಷಮತೆ ಕಡಿಮೆಯಾಗುವಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:30 pm, Mon, 13 November 23

ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ
ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ