AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ, ಇಲ್ಲಿದೆ ಕಾರಣ

ದೇಹದಾರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿ ಕೆಲವರು ಹಸಿ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಸೇವನೆ ಮಾಡುತ್ತಾರೆ. ಆದರೆ ಕೆಲವು ತರಕಾರಿಗಳನ್ನು ಹಸಿಯಾಗಿ ಸೇವನೆ ಮಾಡುವುದರಿಂದ ಆರೋಗ್ಯ ಹದಗೆಡುವ ಸಾಧ್ಯತೆಯಿದೆ.

Health Tips: ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ, ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 13, 2023 | 6:13 PM

ಆರೋಗ್ಯಕರವಾಗಿರಲು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ. ಏಕೆಂದರೆ ಇದು ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುತ್ತವೆ. ತರಕಾರಿಗಳನ್ನು ಬೇಯಿಸುವುದರಿಂದ ಅದರ ಪೋಷಕಾಂಶಗಳು ಕಳೆದುಹೋಗುತ್ತವೆ ಎಂಬ ಮಾತನ್ನು ನಾವೆಲ್ಲರೂ ಕೇಳಿರಬಹುದು. ಇದಕ್ಕಾಗಿ ಹೆಚ್ಚಿನವರು ತರಕಾರಿಗಳನ್ನು ಬೇಯಿಸದೆ, ಹಸಿಯಾಗಿ ಸಲಾಡ್ ರೂಪದಲ್ಲಿ ಸೇವನೆ ಮಾಡುತ್ತಾರೆ. ಆದರೆ ಎಲ್ಲಾ ಬಗೆಯ ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೌದು ಕೆಲವು ತರಕಾರಿಗಳನ್ನು ಹಸಿಯಾಗಿ ಸೇವನೆ ಮಾಡುವುದರಿಂದ ಆರೋಗ್ಯವು ಹದಗೆಡುವ ಸಾಧ್ಯತೆ ಇರುತ್ತದೆ. ತಜ್ಞರ ಪ್ರಕಾರ ಹೊಟ್ಟೆಯೊಳಗೆ ಸಹ ಬದುಕಬಲ್ಲ ಅನೇಕ ಬ್ಯಾಕ್ಟೀರಿಯಾಗಳಿವೆ. ಹಸಿ ತರಕಾರಿಗಳು ಪರಾವಲಂಬಿಗಳು ಮತ್ತು ಇ.ಕೋಲಿ, ಗಿಯಾರ್ಡಿಯಾ, ಟೇಪ್ವರ್ಮ್, ಟೊಕ್ಸೊಪ್ಲಾಸ್ಮಾ, ಆಸ್ಕರಿಸ್, ಫ್ಲಾಟ್ವರ್ಮ್ಗಳಂತಹ ಕೆಲವು ಬಗೆಯ ಬ್ಯಾಕ್ಟೀರಿಯಾಗಳಿಗೆ ನೆಲೆಯಾಗಿದೆ. ಅವು ಮಾನವನ ಹೊಟ್ಟೆಯೊಳಗೆ ಬದುಕಬಲ್ಲವು ಮತ್ತು ಅವುಗಳು ಕರುಳು ಅಥವಾ ಮೆದುಳನ್ನು ಪ್ರವೇಶಿಸಿದರೆ ಸಿಸ್ಟಿಸರ್ಕೋಸಿಸ್, ತಲೆನೋವು, ಯಕೃತ್ತಿನ ಹಾನಿಯಂತಹ ಗಂಭೀರ ಕಾಯಿಲೆಗಳು ಉಂಟಾಗಬಹುದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಈ ಕೆಲವು ತರಕಾರಿಗಳನ್ನು ಹಸಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ.

ಈ ಕೆಲವು ತರಕಾರಿಗಳನ್ನು ಹಸಿಯಾಗಿ ಸೇವನೆ ಮಾಡದಿರಿ:

ಆಲೂಗಡ್ಡೆ: ಹಸಿ ಆಲೂಗಡ್ಡೆಯನ್ನು ಯಾವತ್ತೂ ತಿನ್ನಬಾರದು. ಏಕೆಂದರೆ ಇದರಲ್ಲಿ ಸೋಲನೈಲ್ ಎಂಬ ವಿಷಕಾರಿ ಅಂಶವಿದೆ. ಹಾಗಾಗಿ ಇದನ್ನು ಹಸಿಯಾಗಿ ತಿನ್ನುವುದರಿಂದ ಗ್ಯಾಸ್, ವಾಂತಿ, ತಲೆನೋವು, ವಾಕರಿಕೆ ಮತ್ತು ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿ ಯಾವಾಗಲೂ ಆಲೂಗಡ್ಡೆಯನ್ನು ಹಸಿಯಾಗಿ ತಿನ್ನುವುದಕ್ಕಿಂತ ಫ್ರೈ ಮಾಡಿ ಅಥವಾ ಬೇಯಿಸಿ ತಿನ್ನುವುದು ಉತ್ತಮ.

ಎಲೆಕೋಸು, ಹೂಕೋಸು, ಬ್ರೋಕೋಲಿ: ಹೂಕೋಸು, ಎಲೆಕೋಸು ಮತ್ತು ಬ್ರೊಕೊಲಿಯಂತಹ ತರಕಾರಿಗಳನ್ನು ಹಸಿಯಾಗಿ ಸೇವನೆ ಮಾಡಬಾರದು. ಈ ತರಕಾರಿಗಳು ಜೀರ್ಣಿಸಿಕೊಳ್ಳಲು ಕಷ್ಟಕರವಾದ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದು ಬೇಯಿಸಿದ ಹೊರತು ಹೊಟ್ಟೆಯಲ್ಲಿ ಕರಗುವುದಿಲ್ಲ.ಅಲ್ಲದೆ ಇದನ್ನು ಹಸಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು.

ಹಸಿರು ಎಲೆ ತರಕಾರಿಗಳು: ಪಾಲಕ್ ಇತ್ಯಾದಿ ಹಸಿರು ಎಲೆ ತರಕಾರಿಗಳನ್ನು ಹಸಿಯಾಗಿ ಸಲಾಡ್ ರೂಪದಲ್ಲಿ ಕೆಲವರು ಸೇವನೆ ಮಾಡುತ್ತಾರೆ. ಹಸಿರು ಎಲೆ ತರಕಾರಿಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ನಿಜ. ಆದರೆ ಅವುಗಳನ್ನು ಹಸಿಯಾಗಿ ಸೇವನೆ ಮಡಬಾರದು ಏಕೆಂದರೆ ಇವುಗಳು ಮೂತ್ರಪಿಂಡದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಆದರೆ ಸಣ್ಣ ಪ್ರಮಾಣದಲ್ಲಿ ಎಲೆ ತರಕಾರಿಗಳನ್ನು ಹಸಿಯಾಗಿ ಸೇವಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.

ಇದನ್ನೂ ಓದಿ:ಆರೋಗ್ಯ ತಜ್ಞರ ಪ್ರಕಾರ ಟೀ, ಕಾಫಿ ಕುಡಿಯುವ ಎಷ್ಟು ಗಂಟೆಯ ಮೊದಲು ನೀರು ಕುಡಿಯಬೇಕು?

ಅಣಬೆ: ಅಣಬೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆದರೆ ಅದನ್ನು ಹಸಿಯಾಗಿ ಯಾವತ್ತೂ ಸೇವನೆ ಮಾಡಬಾರದು. ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡಿಸಬಹುದು. ಅಣಬೆಗಳನ್ನು ಬೇಯಿಸಿ ತಿನ್ನುವುದರಿಂದ ಅವುಗಳ ಪೋಷಕಾಂಶಗಳ ಮೌಲ್ಯವೂ ಹೆಚ್ಚಾಗುವುದರ ಜೊತೆಗೆ ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ.

ಕೆಂಪು ಕಿಡ್ನಿ ಬೀನ್ಸ್: ಹಸಿ ಅಥವಾ ಬೇಯಿಸದ ಕೆಂಪು ಕಿಡ್ನಿ ಬೀನ್ಸ್ ಹೆಚ್ಚಿನ ಪ್ರಮಾಣದಲ್ಲಿ ಟಾಕ್ಸಿನ್, ಗ್ಲೈಕೊಪ್ರೋಟೀನ್ ಲೆಕ್ಟಿನ್ ಅಂಶವನ್ನು ಹೊಂದಿರುತ್ತದೆ. ಇದನ್ನು ಹಸಿಯಾಗಿ ಸೇವಿಸುವುದರಿಂದ, ಸೇವಿಸಿದ ಕೆಲವೇ ಗಂಟೆಗಳ ನಂತರ ವಾಕರಿಕೆ, ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳು ಉಂಟಾಗಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: