ಸತ್ತ ವ್ಯಕ್ತಿ 45 ನಿಮಿಷಗಳ ಬಳಿಕ ಪವಾಡದಂತೆ ಕಣ್ತೆರೆದ ಕತೆಯಿದು!
30 ವರ್ಷದ ರೋಗಿಗೆ ಹೃದಯ ಬಡಿತ ಏರುಪೇರಾಗಿತ್ತು. ಹೀಗಾಗಿ, ಶಾರ್ಜಾದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಆದರೆ, ಅಲ್ಲಿ ಅವರಿಗೆ ಹೃದಯ ಸ್ತಂಭನವಾಗಿತ್ತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಅವರು ಅದಕ್ಕೆ ಸ್ಪಂದಿಸಲಿಲ್ಲ.
ಶಾರ್ಜಾ: ಜೀವನವೆಂಬುದು ಹಲವು ಸಸ್ಪೆನ್ಸ್ಗಳನ್ನು ಹೊತ್ತುಕೊಂಡೇ ಇರುತ್ತದೆ. ನಾಳೆ ನಮ್ಮ ಜೀವನದಲ್ಲಿ ಇಂಥದ್ದೇ ನಡೆಯುತ್ತದೆ ಎಂದು ಮೊದಲೇ ಊಹಿಸಲು ಸಾಧ್ಯವೇ ಇಲ್ಲ. ನಾಳೆಯ ಕತೆ ಆಚೆಗಿರಲಿ ಇನ್ನೊಂದು ನಿಮಿಷದ ನಂತರ ಏನಾಗುತ್ತದೆ ಎಂಬುದನ್ನು ಕೂಡ ಹೇಳಲು ಸಾಧ್ಯವಿಲ್ಲ. ಜೊತೆಯಲ್ಲೇ ಕುಳಿತು ಹರಟುತ್ತಿದ್ದ ವ್ಯಕ್ತಿ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆಯೂ ಬೇಕಾದಷ್ಟು ನಡೆದಿವೆ. ಶಾರ್ಜಾದಲ್ಲಿ ವೈದ್ಯರು ಸತ್ತಿದ್ದಾರೆಂದು ಘೋಷಿಸಿದ್ದ ರೋಗಿಯೊಬ್ಬರು 45 ನಿಮಿಷಗಳ ಬಳಿಕ ಪವಾಡದಂತೆ ಕಣ್ಣು ಬಿಟ್ಟಿರುವ ಆಶ್ಚರ್ಯಕರ ಘಟನೆ ನಡೆದಿದೆ.
30 ವರ್ಷದ ರೋಗಿಗೆ ಹೃದಯ ಬಡಿತ ಏರುಪೇರಾಗಿತ್ತು. ಹೀಗಾಗಿ, ಶಾರ್ಜಾದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಆದರೆ, ಅಲ್ಲಿ ಅವರಿಗೆ ಹೃದಯ ಸ್ತಂಭನವಾಗಿತ್ತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಅವರು ಅದಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ, ಆ ರೋಗಿ ಸಾವನ್ನಪ್ಪಿದ್ದಾರೆಂದು ಘೋಷಿಸಿದ ವೈದ್ಯರು ಅವರ ಮೃತದೇಹವನ್ನು ತೆಗೆದುಕೊಂಡು ಹೋಗಲು ಕುಟುಂಬಸ್ಥರಿಗೆ ತಿಳಿಸಿದ್ದರು.
ಇದನ್ನೂ ಓದಿ: Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?
ಆದರೆ, ಆಶ್ಚರ್ಯಕರವೆಂಬಂತೆ ಅದಾದ 45 ನಿಮಿಷಗಳಲ್ಲಿ ಆ ರೋಗಿ ಕಣ್ಣು ಬಿಟ್ಟಿದ್ದಾರೆ. ಸಾವಿನ ಬಾಗಿಲು ಬಡಿದು ಬಂದ ಆ ರೋಗಿಯನ್ನು ಕಂಡು ವೈದ್ಯರೇ ಆಶ್ಚರ್ಯಚಕಿತರಾಗಿದ್ದಾರೆ. ಶಾರ್ಜಾದ ಖೋರ್ಫಕ್ಕನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಹೃದಯ ಸ್ತಂಭನದಿಂದ ಬಳಲುತ್ತಿದ್ದ ವ್ಯಕ್ತಿ 45 ನಿಮಿಷಗಳ ನಂತರ ಮರುಜೀವ ಪಡೆದಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ಆ ರೋಗಿಗೆ ತಕ್ಷಣವೇ ವೈದ್ಯರು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಮಾಡಲು ಪ್ರಾರಂಭಿಸಿದರು. ಪರಿಧಮನಿಯ ಥ್ರಂಬೋಸಿಸ್ನಿಂದ ಬಳಲುತ್ತಿದ್ದ ಆ ರೋಗಿಗೆ 17 ಎಲೆಕ್ಟ್ರಿಕ್ ಶಾಕ್ ಮತ್ತು 15 ಡೋಸ್ ಹೃದಯ-ಉತ್ತೇಜಿಸುವ ಅಡ್ರಿನಾಲಿನ್ ಅನ್ನು ನೀಡಲಾಗಿತ್ತು. ಹೃದಯದ ಪುನರುಜ್ಜೀವನದ ಜೊತೆಗೆ ಹೆಪ್ಪುಗಟ್ಟುವಿಕೆಯನ್ನು ಕರಗಿಸುವ ಏಜೆಂಟ್ ಅನ್ನು ರೋಗಿಗೆ ನೀಡಲಾಗಿತ್ತು. ಆದರೆ, ಅದಕ್ಕೆ ಆ ರೋಗಿ ಸ್ಪಂದಿಸಿರಲಿಲ್ಲ.
ಇದನ್ನೂ ಓದಿ: ನಿಮ್ಮ ದೇಹಕ್ಕಷ್ಟೇ ಅಲ್ಲ ಹೃದಯಕ್ಕೂ ಬೇಕು ಸೂರ್ಯನ ಬೆಳಕು!
ಇದೆಲ್ಲ ಆದ 45 ನಿಮಿಷಗಳ ಬಳಿಕ ಆ ರೋಗಿ ಮತ್ತೆ ಉಸಿರಾಡಲಾರಂಭಿಸಿದ್ದಾರೆ. ರೋಗಿಯ ಹೃದಯದ ಸ್ಥಿರತೆಯನ್ನು ತಿಳಿದ ನಂತರ ಅವರನ್ನು ತೀವ್ರ ನಿಗಾ ಘಟಕಕ್ಕೆ (ICU) ವರ್ಗಾಯಿಸಲಾಯಿತು. ಅಲ್ಲಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಪರಿಧಮನಿಯ ಆಂಜಿಯೋಗ್ರಫಿ ಕಾರ್ಯವಿಧಾನಕ್ಕಾಗಿ ಅವರನ್ನು ಫುಜೈರಾ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಫುಜೈರಾ ಆಸ್ಪತ್ರೆಯ ಕಾರ್ಡಿಯಾಲಜಿ ತಂಡವು ಪರಿಧಮನಿಯು ಹೆಪ್ಪುಗಟ್ಟುವಿಕೆಯನ್ನು ತೋರಿಸಿಲ್ಲ ಎಂದು ದೃಢಪಡಿಸಿತು.
ಬಳಿಕ ಆ ರೋಗಿಯು ಮತ್ತೆ ಖೋರ್ಫಕ್ಕನ್ ಆಸ್ಪತ್ರೆಯಲ್ಲಿ ಒಟ್ಟು 8 ದಿನಗಳು ಅಡ್ಮಿಟ್ ಆದರು. ನಂತರ ಅವರು ಉತ್ತಮ ಆರೋಗ್ಯದಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಇದೀಗ ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ