Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಆರೋಗ್ಯ ತಜ್ಞರ ಪ್ರಕಾರ ಟೀ, ಕಾಫಿ ಕುಡಿಯುವ ಎಷ್ಟು ಗಂಟೆಯ ಮೊದಲು ನೀರು ಕುಡಿಯಬೇಕು?

ಟೀ ಅಥವಾ ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದು ಸ್ವಲ್ಪ ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಸ್ವಲ್ಪ ಮಟ್ಟಿಗೆ ಅಪಾಯವನ್ನು ಕಡಿಮೆ ಮಾಡುತ್ತದೆ. ಕಾಫಿ ಮತ್ತು ಚಹಾದ ಮೊದಲು ನೀರನ್ನು ಕುಡಿಯುವುದು ಕರುಳಿನಲ್ಲಿ ಒಂದು ಪದರವನ್ನು ಸೃಷ್ಟಿಸುತ್ತದೆ ಅದು ಚಹಾ ಮತ್ತು ಕಾಫಿಯಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.

Health Tips: ಆರೋಗ್ಯ ತಜ್ಞರ ಪ್ರಕಾರ ಟೀ, ಕಾಫಿ ಕುಡಿಯುವ ಎಷ್ಟು ಗಂಟೆಯ ಮೊದಲು ನೀರು ಕುಡಿಯಬೇಕು?
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Nov 11, 2023 | 1:12 PM

ಬೆಳಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಬೇಕೇ ಬೇಕು, ಇಲ್ಲದಿದ್ದರೆ ದಿನವೇ ಪ್ರಾರಂಭವಾಗುವುದಿಲ್ಲ ಎಂದು ಅನ್ನುವವರು ಸಾಕಷ್ಟಿದ್ದಾರೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದು ಎಷ್ಟು ಅಪಾಯಕಾರಿ ಎಂಬುದನ್ನು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿ ಕುಡಿಯುವ ಚಹಾ ಮತ್ತು ಕಾಫಿ ಎರಡೂ ಹೊಟ್ಟೆಗೆ ಹಾನಿಕಾರಕ. ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಕುಡಿದಾಗ ಹೊಟ್ಟೆಯಲ್ಲಿ ಆಮ್ಲವು ಉತ್ಪತ್ತಿಯಾಗುತ್ತದೆ. ಇದು ದೇಹದಲ್ಲಿ ಅನೇಕ ಅಪಾಯಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಲ್ಲದೇ ಹುಣ್ಣು ಮತ್ತು ಕ್ಯಾನ್ಸರ್‌ನಂತಹ ರೋಗಗಳ ಅಪಾಯವೂ ಹೆಚ್ಚು.

ಆದ್ದರಿಂದ ಟೀ ಅಥವಾ ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದು ಸ್ವಲ್ಪ ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.ಇದು ಸ್ವಲ್ಪ ಮಟ್ಟಿಗೆ ಅಪಾಯವನ್ನು ಕಡಿಮೆ ಮಾಡುತ್ತದೆ. ಕಾಫಿ ಮತ್ತು ಚಹಾದ ಮೊದಲು ನೀರನ್ನು ಕುಡಿಯುವುದು ಕರುಳಿನಲ್ಲಿ ಒಂದು ಪದರವನ್ನು ಸೃಷ್ಟಿಸುತ್ತದೆ ಅದು ಚಹಾ ಮತ್ತು ಕಾಫಿಯಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಅಲ್ಲದೆ, ಬೆಡ್ ಟೀ ಅಥವಾ ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವುದು ತುಂಬಾ ಹಾನಿಕಾರಕವಾಗಿದೆ. ಇದು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ. ಜೊತೆಗೆ ಹಲ್ಲುಗಳಿಗೂ ಹಾನಿಯುಂಟು ಮಾಡುತ್ತದೆ. ಇದಲ್ಲದೇ ಹಲ್ಲಿನ ಕೊಳೆಯುವಿಕೆಯು ಕಾರಣವಾಗಬಹುದು.

ಇದನ್ನೂ ಓದಿ: ಹಲ್ಲಿನ ಸೆನ್ಸಿಟಿವಿಟಿಯಿಂದ ಬಳಲುತ್ತಿದ್ದೀರಾ?; ಈ 6 ಆಹಾರಗಳನ್ನೆಂದೂ ಸೇವಿಸಬೇಡಿ

ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿದಾಗ ಅದರಲ್ಲಿರುವ ಕೆಫೀನ್ ಅಂಶ ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು.ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಆದ್ದರಿಂದಲೇ ಟೀ ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ನಿಮಗೆ ಟೀ-ಕಾಫಿ ಕುಡಿಯುವ ಅಭ್ಯಾಸವಿದ್ದರೆ ಅದಕ್ಕೂ 15 ನಿಮಿಷ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಅಭ್ಯಾಸವು ನಿಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: