Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ಲಿನ ಸೆನ್ಸಿಟಿವಿಟಿಯಿಂದ ಬಳಲುತ್ತಿದ್ದೀರಾ?; ಈ 6 ಆಹಾರಗಳನ್ನೆಂದೂ ಸೇವಿಸಬೇಡಿ

ಕೆಲವರು ಬಿಸಿ, ತಣ್ಣನೆಯ, ಆಮ್ಲೀಯ, ಜಿಗುಟಾದ ಅಥವಾ ಸಕ್ಕರೆಯ ಆಹಾರವನ್ನು ತಿನ್ನುವಾಗ ಅಥವಾ ಕುಡಿಯುವಾಗ ತಮ್ಮ ಹಲ್ಲುಗಳಲ್ಲಿ ಸ್ವಲ್ಪ ನೋವನ್ನು ಅನುಭವಿಸುತ್ತಾರೆ. ನಿಮಗೂ ಈ ಲಕ್ಷಣಗಳಿದ್ದರೆ ಈ 6 ಆಹಾರಗಳನ್ನು ಸೇವಿಸದಿರುವುದು ಉತ್ತಮ.

ಹಲ್ಲಿನ ಸೆನ್ಸಿಟಿವಿಟಿಯಿಂದ ಬಳಲುತ್ತಿದ್ದೀರಾ?; ಈ 6 ಆಹಾರಗಳನ್ನೆಂದೂ ಸೇವಿಸಬೇಡಿ
ಹಲ್ಲು ನೋವುImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 10, 2023 | 5:40 PM

ನಿಮ್ಮ ಹಲ್ಲುಗಳು ಸೆನ್ಸಿಟಿವ್ ಆಗಿದೆಯೇ? ಹಲ್ಲುಗಳಲ್ಲಿ ಈ ಲಕ್ಷಣ ಸಾಮಾನ್ಯವಾಗಿದೆ. ಅಕಾಡೆಮಿ ಆಫ್ ಜನರಲ್ ಡೆಂಟಿಸ್ಟ್ರಿ (AGD) ಪ್ರಕಾರ, 40 ಮಿಲಿಯನ್ ಅಮೆರಿಕನ್ನರು ಬಿಸಿ, ತಣ್ಣನೆಯ, ಆಮ್ಲೀಯ, ಜಿಗುಟಾದ ಅಥವಾ ಸಕ್ಕರೆಯ ಆಹಾರವನ್ನು ತಿನ್ನುವಾಗ ಅಥವಾ ಕುಡಿಯುವಾಗ ತಮ್ಮ ಹಲ್ಲುಗಳಲ್ಲಿ ಸ್ವಲ್ಪ ನೋವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಕೂಡ ಹಲ್ಲಿನ ಸೆನ್ಸಿಟಿವಿಟಿ ಸಮಸ್ಯೆ ಸಾಮಾನ್ಯವಾಗಿದೆ. ಈ ಸಮಸ್ಯೆ ಇದ್ದರೆ ತುಂಬಾ ಬಿಸಿಯಾದ ಅಥವಾ ತಣ್ಣನೆಯ ಆಹಾರಗಳು ಹಲ್ಲು ನೋವನ್ನು ಉಂಟುಮಾಡಬಹುದು. ನಿಮಗೂ ಈ ಲಕ್ಷಣಗಳಿದ್ದರೆ ಈ 6 ಆಹಾರಗಳನ್ನು ಸೇವಿಸದಿರುವುದು ಉತ್ತಮ.

1. ಸೋಡಾ:

ಸಂವೇದನಾಶೀಲ ಹಲ್ಲುಗಳಿದ್ದರೆ ಸೋಡಾವನ್ನು ಸೇವಿಸಬೇಡಿ. ಸೋಡಾವು ನಿಮ್ಮ ಹಲ್ಲಿನ ನರಗಳನ್ನು ಕೆರಳಿಸುವ 2 ಅಂಶಗಳನ್ನು ಹೊಂದಿದೆ. ಸೋಡಾದಲ್ಲಿ ಸಕ್ಕರೆ ಮತ್ತು ಆಮ್ಲ ಇದೆ. ಇವೆರಡೂ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

2. ಐಸ್ ಕ್ರೀಮ್:

ಐಸ್‌ಕ್ರೀಂ ಕೇವಲ ಶೀತವಾದ ವಸ್ತುವಲ್ಲ, ಇದು ಹಲ್ಲುಗಳನ್ನು ಹೆಚ್ಚು ಸೂಕ್ಷ್ಮವಾಗಿಸಬಹುದು. ಸೆನ್ಸಿಟಿವ್ ಹಲ್ಲುಗಳನ್ನು ಹೊಂದಿರುವ ಜನರು ದಂತಕವಚ ಪದರವನ್ನು ಹೊಂದಿರುವುದಿಲ್ಲ. ಇದರಿಂದ ತಣ್ಣನೆಯ ಪದಾರ್ಥಗಳು ಹಲ್ಲಿನ ನೋವಿಗೆ ಕಾರಣವಾಗಬಹುದು.

ಇದನ್ನೂ ಓದಿ: ಬೇವಿನ ಟೂತ್ ಪೇಸ್ಟ್​​ನಿಂದ ಹಲ್ಲುಜ್ಜುವುದರಿಂದ ಲಭಿಸುವ ಪ್ರಯೋಜನಗಳು

3. ಬಿಸಿ ಕಾಫಿ:

ಬಿಸಿ ಆಹಾರಗಳು ಕೂಡ ನಿಮ್ಮ ಹಲ್ಲುಗಳನ್ನು ನೋಯಿಸಲು ಕಾರಣವಾಗಬಹುದು. ನಿಮ್ಮ ಹಬೆಯಾಡುವ ಕಾಫಿಗೆ ಸಕ್ಕರೆ ಹಾಕಿ ಕುಡಿಯುವುದರಿಂದ ನೋವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಹೀಗಾಗಿ, ನಿಮ್ಮ ಕಾಫಿಗೆ ಸ್ವಲ್ಪ ಹಾಲನ್ನು ಸೇರಿಸುವುದು ಉತ್ತಮ. ಹಾಲು ಕಾಫಿಯ ಉಷ್ಣತೆಯನ್ನು ಮತ್ತು ಅದರ ಆಮ್ಲೀಯತೆಯನ್ನು ಸ್ವಲ್ಪ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದ್ದರಿಂದ ಇದು ನಿಮ್ಮ ಹಲ್ಲುಗಳಿಗೆ ಕಡಿಮೆ ಹಾನಿ ಮಾಡುತ್ತದೆ.

4. ಗಟ್ಟಿಯಾದ ಕ್ಯಾಂಡಿ:

ನಿಮ್ಮ ಹಲ್ಲುಗಳು ಸೆನ್ಸಿಟಿವ್ ಆಗಿದ್ದರೆ ಲಾಲಿಪಾಪ್‌ಗಳು, ಮಿಂಟ್ ಚಾಕೋಲೇಟ್ ಮುಂತಾದ ಗಟ್ಟಿಯಾದ ಕ್ಯಾಂಡಿಗಳನ್ನು ಬಿಟ್ಟುಬಿಡಿ. ಅವುಗಳು ಹಲ್ಲಿನ ನೋವನ್ನು ಉಂಟುಮಾಡುವ ಸಕ್ಕರೆಯಿಂದ ತುಂಬಿರುತ್ತವೆ. ಹಾಗೂ ಗಟ್ಟಿಯಾಗಿರುವುದರಿಂದ ಅವು ಹಲ್ಲುಗಳ ನೋವಿಗೆ ಕಾರಣವಾಗಬಹುದು.

ಇದನ್ನೂ ಓದಿ: ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಸಿಂಪಲ್​​ ಮನೆಮದ್ದು

5. ಸಿಟ್ರಸ್ ಹಣ್ಣುಗಳು:

ಅನಾನಸ್, ದ್ರಾಕ್ಷಿ ಹಣ್ಣು, ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣುಗಳು ಎಲ್ಲಾ ಹೆಚ್ಚು ಆಮ್ಲೀಯ ಅಂಶವಿರುವ ಹಣ್ಣುಗಳಾಗಿವೆ. ಆ ಆಮ್ಲವು ನಿಮ್ಮ ಹಲ್ಲುಗಳನ್ನು ಇನ್ನಷ್ಟು ಸೂಕ್ಷ್ಮವಾಗಿ ಮಾಡಬಹುದು. ಹಲ್ಲಿನ ದಂತಕವಚದಲ್ಲಿ ಅವು ಸವೆಯುವುದೇ ಇದಕ್ಕೆ ಕಾರಣ. ಈ ಹಣ್ಣುಗಳನ್ನು ತಿನ್ನುವುದು ಮತ್ತು ಹಣ್ಣಿನ ರಸವನ್ನು ಕುಡಿಯುವುದರಿಂದ ಹಲ್ಲಿನ ಸೂಕ್ಷ್ಮತೆ ಮತ್ತು ನೋವು ಹೆಚ್ಚಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

6. ಟೊಮ್ಯಾಟೊ:

ಟೊಮ್ಯಾಟೊಗಳು ವಿಟಮಿನ್‌ಗಳ ಉತ್ತಮ ಮೂಲವಾಗಿದ್ದರೂ, ವಿಶೇಷವಾಗಿ ವಿಟಮಿನ್ ಸಿಯನ್ನು ಹೊಂದಿದೆ. ಅಂದರೆ ಹೆಚ್ಚು ಆಮ್ಲೀಯವಾಗಿದೆ. ಆದ್ದರಿಂದ ನಿಮ್ಮ ಹಲ್ಲುಗಳು ಸೂಕ್ಷ್ಮವಾಗಿದ್ದರೆ ಟೊಮ್ಯಾಟೋ ಹಣ್ಣನ್ನು ಸೇವಿಸಬೇಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ