ಮಾವಿನ ಹಣ್ಣಿನ ಸೀಸನ್ ಯಾವಾಗ ಬರುತ್ತಪ್ಪಾ ಎಂದು ಕಾಯುತ್ತಿರುತ್ತೇವೆ. ಹಣ್ಣುಗಳ ರಾಜನಾದ ಮಾವಿಗೆ ಬೇಡಿಕೆ ಹೆಚ್ಚು. ಹಣ್ಣುಗಳ ಜ್ಯೂಸ್, ಐಸ್ಕ್ರೀಮ್, ಚಾಕಲೇಟ್, ರಸಾಯನ ಅನ್ನುತ್ತಾ ವಿವಿಧ ಖಾದ್ಯಗಳನ್ನು ಮಾಡಿ ರುಚಿ ಸವಿಯುತ್ತೇವೆ. ಅತ್ಯಂತ ಪ್ರಿಯವಾದ ಮಾವಿನ ಹಣ್ಣುಗಳಿಂದ ಆರೋಗ್ಯಕ್ಕೆ ಪ್ರಯೋಜಗಳು ಹೆಚ್ಚು ಅಂದಾದಾಗ ತಿನ್ನದೇ ಇರಲು ಸಾಧ್ಯವೇ? ಹಿತಮಿತವಾಗಿ ಬಳಸಿ ಮಾವಿನ ಹಣ್ಣಿನ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಮಾವು ವಿಟಮಿನ್ ಎ, ಸಿ ಜತೆಗೆ ತಾಮ್ರ, ಪೊಟ್ಯಾಷಿಯಮ್ನಂತಹ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಇದು ದೇಹಕ್ಕೆ ಸತ್ವವನ್ನು ನೀಡುತ್ತದೆ. ತೂಕ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಹಲವರು ಮಾವಿನ ಹಣ್ಣನ್ನು ತಿನ್ನುವುದಿಲ್ಲ. ಹಿತಮಿತವಾಗಿ ಬಳಸಿದರೆ ಯಾವುದೂ ಆರೋಗ್ಯಕ್ಕೆ ಹಾನಿಕಾರಕವಲ್ಲ. ನಿಮ್ಮ ದೇಹ ಪ್ರಕೃತಿಗೆ ಅನುಸಾರವಾಗಿ ಹಣ್ಣುಗಳ ಸೇವನೆಯನ್ನು ರೂಢಿಯಲ್ಲಿಟ್ಟುಕೊಳ್ಳಿ.
ರಾತ್ರಿ ಮಾವಿನ ಹಣ್ಣು ಸೇವನೆ ಆರೋಗ್ಯ ದೃಷ್ಟಿಯಿಂದ ಒಳಿತಲ್ಲ
ಹಣ್ಣನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನ ಹೊತ್ತಿನಲ್ಲಿ ತಿನ್ನಬೇಕು. ಮಲಗುವ ವೇಳೆಗೆ ಮಾವಿನ ಹಣ್ಣು ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗೂ ಈಗಷ್ಟೇ ವ್ಯಾಯಾಮ ಮಾಡಿ ಆಗಿದೆ. ತಕ್ಷಣ ಮಾವಿನಹಣ್ಣು ತಿನ್ನಬೇಕು ಎನಿಸಿದರೆ ಈ ರೂಢಿಯನ್ನು ತಪ್ಪಿಸಿಕೊಳ್ಳುವುದು ಉತ್ತಮ.
ಎಷ್ಟು ತಿನ್ನಬೇಕು ಎಂಬುದನ್ನು ನಿರ್ಧರಿಸಿ
ಅನೇಕರಿಗೆ ಮಾವಿನ ಹಣ್ಣು ಬಲು ಪ್ರಿಯ ಹಣ್ಣು. ದಿನವಿಡೀ ಹಣ್ಣನ್ನು ತಿನ್ನುತ್ತಲೇ ಇರುತ್ತಾರೆ. ಹಾಗಿದ್ದಾಗ ಮಿತಕರವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತು. ದಿನಕ್ಕೆ ಐದಕ್ಕಿಂತ ಹೆಚ್ಚಿನ ಮಾವಿನಹಣ್ಣು ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚು. ದಣಿದು ಬಂದಿದ್ದಾಗ ಮಾವಿನ ಹಣ್ಣು ತಿಂದು ಆಯಾಸ ಕಡಿಮೆ ಮಾಡಿಕೊಳ್ಳುತ್ತೇವೆ. ಇಲ್ಲವೇ ಜ್ಯೂಸ್ ಕುಡಿದು ಬಾಯಾರಿಕೆ ಹೋಗಲಾಡಿಸಿಕೊಳ್ಳುತ್ತೇವೆ. ಇದರಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಬಿ ಹಾಗೂ ಸಿ ಜೀವಸತ್ವಗಳು ಇರುತ್ತವೆ. ಇದಲ್ಲದೇ ತೂಕ ನಷ್ಟಕ್ಕೆ ಬೇಕಾದ ಅನೇಕ ಪೋಷಕಾಂಶವನ್ನು ಹೊಂದಿರುತ್ತದೆ. ಆದರೆ ಮಿತವಾಗಿ ಬಳಸಿಕೊಂಡು ಹಣ್ಣಿನ ಪ್ರಯೋಜನವನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ.
ಇದನ್ನೂ ಓದಿ:
3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ
ಮೊದಲ ಬಾರಿಗೆ ಅರಬ್ ರಾಷ್ಟ್ರಕ್ಕೆ ಆಪೋಸ್ ಮಾವು; ಧಾರವಾಡ ರೈತರು ಫುಲ್ ಖುಷ್