ಆನೆಕಾಲು ರೋಗ ನಿವಾರಣೆಗೆ ಗಜಗದ ಬಳ್ಳಿಯೇ ಮದ್ದು! ಈ ರೀತಿ ಬಳಸಿ

ಗಜಗದ ಬಳ್ಳಿ ಅಥವಾ ಗೆಜ್ಜೆ ಕಾಯಿ ಬಗ್ಗೆ ನೀವು ಕೇಳಿರಬಹುದು. ಹಳ್ಳಿ ಪ್ರದೇಶಗಳ ಜನರಿಗೆ ಇದರ ಬಗ್ಗೆ ತಿಳಿದಿರುತ್ತದೆ. ಆದರೆ ಇತ್ತೀಚಿಗೆ ಈ ಬಳ್ಳಿ ಕಾರಣಾಂತರಗಳಿಂದ ನಶಿಸುತ್ತಿದ್ದು ಇದನ್ನು ಸಾಧ್ಯವಾದಷ್ಟು ನಾವು ಕಾಪಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಏಕೆಂದರೆ ಈ ಬಳ್ಳಿಯಿಂದ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಇದು ನಾನಾ ರೀತಿಯ ಸಮಸ್ಯೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಇದಕ್ಕೆ ಪೂರಕವಾದ ಮತ್ತಷ್ಟು ಮಾಹಿತಿ ಇಲ್ಲಿದೆ.

ಆನೆಕಾಲು ರೋಗ ನಿವಾರಣೆಗೆ ಗಜಗದ ಬಳ್ಳಿಯೇ ಮದ್ದು! ಈ ರೀತಿ ಬಳಸಿ
What are the benefits of Caesalpinia bonduc
Image Credit source: pinterest

Updated on: Apr 30, 2025 | 3:54 PM

ಗಜ್ಜುಗದ ಬಳ್ಳಿ ಅಥವಾ ಗಜಗದ ಬಳ್ಳಿ (Caesalpinia bonduc) ಬಗ್ಗೆ ಕೇಳಿರುತ್ತೀರಿ. ಅದರಲ್ಲಿಯೂ ಹಳ್ಳಿ ಪ್ರದೇಶಗಳ ಜನರಿಗೆ ಇದರ ಬಗ್ಗೆ ತಿಳಿದಿರುತ್ತದೆ. ಚಿಕ್ಕವರಿದ್ದಾಗ ಇದರ ಬೀಜಗಳಿಂದ ಆಟವಾಡಿರುತ್ತಾರೆ. ಆದರೆ ಇತ್ತೀಚಿಗೆ ಈ ಬಳ್ಳಿ ಕಾರಣಾಂತರಗಳಿಂದ ನಶಿಸುತ್ತಿದೆ. ಇದನ್ನು ಸಾಧ್ಯವಾದಷ್ಟು ಉಳಿಸಿ, ಬೆಳೆಸುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಈ ಬಳ್ಳಿಯಿಂದ, ಅದರ ಬೀಜಗಳಿಂದ ಹಲವಾರು ರೀತಿಯ ಆರೋಗ್ಯ (Health) ಪ್ರಯೋಜನಗಳಿವೆ. ಇದು ಚಿಕ್ಕ ಪುಟ್ಟ ಗಾಯ (Injury) ಗಳನ್ನು ವಾಸಿ ಮಾಡುವುದರ ಜೊತೆಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು (Home remedies) ಗಳಾಗಿ ಬಳಕೆ ಮಾಡಲಾಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಉಪಯೋಗವಿದೆ? ಇದನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ವಿಷಯಕ್ಕೆ ಪೂರಕವಾಗಿ ಗಿರೀಶ್ ಎಂಬುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ (Gireesh Mutthu) ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರು ತಿಳಿಸಿರುವ ಪ್ರಕಾರ, ಈ ಬಳ್ಳಿ ತನ್ನ ಮುಳ್ಳುಗಳ ನೆರವಿನಿಂದ ಬೇರೆ ಸಸ್ಯಗಳಿಗೆ ಅಂಟಿಕೊಂಡು ಬೆಳೆಯುತ್ತದೆ. ಇದು ಉಷ್ಣವಲಯ ಪ್ರದೇಶದ ಬೇಲಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಲೆಗ್ಯೂಮಿನೇಸಿ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಸಿಸಾಲ್ವಿನಿಯಾ ಬೊಂಡುಸೆಲ್ಲ ಇದರ ಬೀಜಗಳು ಕಣ್ಣುಗುಡ್ಡೆಯಂತೆ ಕಾಣುವುದರಿಂದ ಇದನ್ನು ಸಂಸ್ಕೃತದಲ್ಲಿ ಕುಬೇರಾಕ್ಷಿ ಎನ್ನುತ್ತಾರೆ. ಇನ್ನು ಗಜ್ಜುಗ ಆಯುರ್ವೇದ ಔಷಧ ಪದ್ಧತಿಯಲ್ಲಿಯೂ ಬಳಕೆಯಲ್ಲಿರುವ ಒಂದು ಸಸ್ಯವಾಗಿದ್ದು, ಇದರ ಸಸ್ಯ ಶಾಸ್ತ್ರೀಯ ಹೆಸರು ಕ್ಯಾಸಲ್ಪೀನಿಯ ಕ್ರಿಸ್ತ (Caesalpinia crista).

ಆರೋಗ್ಯ ಪ್ರಯೋಜನಗಳೇನು?

  • ಆಯುರ್ವೇದ ಮತ್ತು ನಾಟಿ ಔಷಧದಲ್ಲಿ ಗಜ್ಜುಗಕ್ಕೆ ವಿಶೇಷ ಸ್ಥಾನವಿದೆ. ಇದರ ಎಲೆಯಿಂದ ತಯಾರಿಸಿದ ಲೇಪನವನ್ನು ಹಲ್ಲು ನೋವಿಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ.
  • ಗಜ್ಜುಗದ ಎಳೆಯ ಎಲೆಗಳನ್ನು ಯಕೃತ್ತಿನ ವ್ಯಾಧಿಗಳನ್ನು ನಿವಾರಿಸಲು ಉಪಯೋಗಿಸುತ್ತಾರೆ.
  • ಊತಗಳನ್ನು ಕಡಿಮೆ ಮಾಡಲು ಇದರ ಎಲೆ ಮತ್ತು ಬೀಜಗಳನ್ನು ಬಳಸುತ್ತಾರೆ. ಇನ್ನು ಇದರ ಎಲೆ ಮತ್ತು ತೊಗಟೆಗಳಿಗೆ ಜಂತುನಾಶಕ, ವಾಂತಿಕಾರಕ, ಜ್ವರಶಾಮಕ ಗುಣಗಳಿವೆ.
  • ಇದರ ಬೀಜದಿಂದ ತೆಗೆಯುವ ಎಣ್ಣೆಯನ್ನು ಮುಖದ ಮೇಲೆ ಮೂಡುವ ನಸುಗಂದು ಬಣ್ಣದ ಮಚ್ಚೆಗಳನ್ನು ನಿವಾರಿಸುವುದಕ್ಕೂ, ಕಿವಿಯಿಂದ ಸೋರುವ ಕೀವನ್ನು ನಿಲ್ಲಿಸುವುದಕ್ಕೂ ಉಪಯೋಗ ಮಾಡಲಾಗುತ್ತದೆ. ಗಜ್ಜುಗದ ಕಾಂಡದ ತಿರುಳನ್ನು ಚೆನ್ನಾಗಿ ಜಜ್ಜಿ ಅದರ ರಸ ತೆಗೆದು ಸ್ವಲ್ಪ ಎಳ್ಳೆಣ್ಣೆ ಹಾಕಿ ಕಾಯಿಸಿ ತಣ್ಣಗಾದ ಮೇಲೆ ಒಂದೆರಡು ತೊಟ್ಟು ತೈಲವನ್ನು ಸ್ವಲ್ಪ ಬಿಸಿ ಮಾಡಿ ನೋವಿರುವ ಕಿವಿಗೆ ಹಾಕುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ.
  • ಸಂಧಿವಾತ, ಜ್ವರ, ಬಿಟ್ಟು ಬಿಟ್ಟು ಬರುವ ಗೊರಲು, ಸಾಮಾನ್ಯ ದುರ್ಬಲತೆ ಮುಂತಾದ ಕಾಯಿಲೆಗಳಿಗೆ ಈ ಎಣ್ಣೆ ಸಿದ್ಧೌಷಧವಾಗಿದೆ.
  • ಇನ್ನು ಹುರಿದ ಬೀಜ ಕುಷ್ಠರೋಗಕ್ಕೆ ಒಳ್ಳೆಯ ಮದ್ದು ಎನ್ನಲಾಗಿದೆ. ಬೀಜದಿಂದ ಬಲವರ್ಧಕ ಮತ್ತು ಕಾಂತಿವರ್ಧಕ ಔಷಧಿಗಳನ್ನು ತಯಾರಿಸುತ್ತಾರೆ.
  • ಬೀಜಗಳನ್ನು ಕಲ್ಲಿನ ಮೇಲೆ ನೀರು ಹಾಕಿ ಉಜ್ಜಿ ಊತ ಬಂದಾಗ ಹಚ್ಚಿದರೆ ಊತ ಕಡಿಮೆಯಾಗುತ್ತದೆ.
  • ಈ ಸಸ್ಯದಿಂದ ತಯಾರಿಸುವ ಔಷಧವು ಮಧುಮೇಹ ಹಾಗೂ ಮಲೇರಿಯ ದಂತಹ ಕಾಯಿಲೆಗಳಿಗೆ ರಾಮಬಾಣವಾಗಿದ್ದು, ವೃಷಣಗಳ ಊತ ಮತ್ತು ನೋವನ್ನು ಕೂಡ ಕಡಿಮೆ ಮಾಡುತ್ತದೆ.
  • ಗಜ್ಜುಗದ ಎಲೆಗಳನ್ನು ನೀರಿನಲ್ಲಿ, ನುಣ್ಣಗೆ ಅದನ್ನು ಬಟ್ಟೆಯಲ್ಲಿ ಸೋಸಿಕೊಂಡು ಪತ್ರಿನಿತ್ಯ ಒಂದು ಟೀ ಚಮಚ ಕುಡಿಯುವುದರಿಂದ ರಕ್ತ ಶುದ್ದಿಯಾಗುತ್ತದೆ ಕರುಳಿನಲ್ಲಿರುವ ಕ್ರಿಮಿಗಳು ನಾಶವಾಗುತ್ತದೆ.
  • ಗಜ್ಜುಗದ ಎಲೆ ಮತ್ತು ಕಾಳು ಮೆಣಸನ್ನು ನಯವಾಗಿ ಅರೆದು ಒಂದು ಅರ್ಧ ಟೀ ಚಮಚದಷ್ಟನ್ನು ನೀರಿಗೆ ಹಾಕಿ ಕುದಿಸಿ ಕುಡಿಯುವುದರಿಂದಲೂ ಅಥವಾ ಗಜ್ಜುಗದ ಕಾಯಿಯ ಸಿಪ್ಪೆಯನ್ನು ನುಣ್ಣಗೆ ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ತಣ್ಣಗಾದ ಮೇಲೆ ಕಜ್ಜಿ ಮತ್ತು ತುರಿಕೆ ಇರುವ ಜಾಗದಲ್ಲಿ ಸವರುವುದರಿಂದಲೂ ಕಜ್ಜಿ ಮತ್ತು ತುರಿಕೆ ಕಡಿಮೆಯಾಗುತ್ತದೆ.
  • ಗಜ್ಜುಗದ ಹಸಿರು ಎಲೆಗಳನ್ನು ಕುಟ್ಟಿ ರಸ ತೆಗೆದು ಅದನ್ನು ಬಟ್ಟೆಯಲ್ಲಿ ಸೋಸಿ ದಿನಕ್ಕೆ ಎರಡು ವೇಳೆ ಒಂದೊಂದು ಟೀ ಚಮಚ ಕುಡಿಯುವುದರಿಂದ ಆನೆಕಾಲು ವ್ಯಾಧಿ ನಿವಾರಣೆಯಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ
ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ! ವಿಶೇಷತೆ ತಿಳಿದರೆ ಆಶ್ಚರ್ಯ ಆಗುತ್ತೆ
ಅತಿಯಾಗಿ ತಿಂದರೆ ಲಿವರ್ ಹಾಳಾಗುತ್ತಾ?
ಹೆಂಡತಿ ಗರ್ಭಿಣಿ ಇರುವಾಗ ಗಂಡ ಈ ವಿಷಯವನ್ನು ತಿಳಿದಿರಬೇಕು
ಬೇರೊಬ್ಬರು ಬಳಸಿದ ಲೋಟದಲ್ಲಿ ನೀರು ಕುಡಿಯುವ ಮುನ್ನ ಎಚ್ಚರ!

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ