ದಿನ ಕಳೆದಂತೆಲ್ಲ ದೇಹದಲ್ಲಿ ಕೊರೊನಾ ಸೋಂಕಿನ ಗಂಡಾಂತರ ಹೇಗೆ ಕಳೆಯುತ್ತಾ ಸಾಗುತ್ತದೆ? ಇಲ್ಲಿದೆ ವಿವರ

|

Updated on: May 08, 2021 | 1:57 PM

ಕೊರೊನಾ ಸೋಂಕಿತರಲ್ಲಿ ಒಬ್ಬೊಬ್ಬರಿಗೂ ವಿಭಿನ್ನ ಮಾದರಿಯ ಲಕ್ಷಣಗಳು, ವ್ಯತ್ಯಯಗಳನ್ನು ತರುತ್ತಿದೆ. ಇದಂ ಇತ್ತಂ ಎಂದು ಇವಿಷ್ಟೆ ಎಂದು ನಿಖರವಾಗಿ ಹೇಳಲಾಗುತ್ತಿಲ್ಲ. ಆದರೂ ಕೆಲವೊಂದು ಸಾಮಾನ್ಯ ಗುಣಲಕ್ಷಣಗಳೂ ಕಾಣಿಸಿಕೊಳ್ಳುತ್ತಿವೆ. ದಿನ ಗಂಡ ಆಯಸ್ಸು ಎಂಬಂತೆ ಒಂದೊಂದು ದಿನ ಕಳೆದಂತೆಲ್ಲ ದೊಡ್ಡ ಗಂಡಾಂತರದಿಂದ ಪಾರಾಗುವಂತೆ ಆಗುತ್ತದೆ.

ದಿನ ಕಳೆದಂತೆಲ್ಲ ದೇಹದಲ್ಲಿ ಕೊರೊನಾ ಸೋಂಕಿನ ಗಂಡಾಂತರ ಹೇಗೆ ಕಳೆಯುತ್ತಾ ಸಾಗುತ್ತದೆ? ಇಲ್ಲಿದೆ ವಿವರ
ದಿನ ಕಳೆದಂತೆಲ್ಲ ದೇಹದಲ್ಲಿ ಕೊರೊನಾ ಸೋಂಕಿನ ಗಂಡಾಂತರ ಹೇಗೆ ಕಳೆಯುತ್ತಾ ಸಾಗುತ್ತದೆ? ಇಲ್ಲಿದೆ ವಿವರ
Follow us on

ಮಹಾಮಾರಿ ಕೊರೊನಾ ಸೋಂಕಿತರಲ್ಲಿ ಒಬ್ಬೊಬ್ಬರಿಗೂ ವಿಭಿನ್ನ ಮಾದರಿಯ ಲಕ್ಷಣಗಳು, ವ್ಯತ್ಯಯಗಳನ್ನು ತರುತ್ತಿದೆ. ಇದಂ ಇತ್ತಂ ಎಂದು ಇವಿಷ್ಟೆ ಎಂದು ನಿಖರವಾಗಿ ಹೇಳಲಾಗುತ್ತಿಲ್ಲ. ಆದರೂ ಕೆಲವೊಂದು ಸಾಮಾನ್ಯ ಗುಣಲಕ್ಷಣಗಳೂ ಕಾಣಿಸಿಕೊಳ್ಳುತ್ತಿವೆ. ದಿನ ಗಂಡ ಆಯಸ್ಸು ಎಂಬಂತೆ ಒಂದೊಂದು ದಿನ ಕಳೆದಂತೆಲ್ಲ ದೊಡ್ಡ ಗಂಡಾಂತರದಿಂದ ಪಾರಾಗುವಂತೆ ಆಗುತ್ತದೆ. ಅವುಗಳೆಂದರೆ.. ಆರಂಭದ ದಿನಗಳಲ್ಲಿ ವೈರಲ್​ ಅಥವಾ ಫ್ಲೂ ಮಾದರಿಯ ಜ್ವರ ಕಾಣಿಸಿಕೊಳ್ಳುತ್ತದೆ. ಅದಾದ ಬಳಿಕ ಕಾಣಿಸಿಕೊಳ್ಳುವ ಸಾಮಾನ್ಯ ಪ್ರಮಾಣದ ಆರೋಗ್ಯ ವ್ಯತ್ಯಗಳು ಹೀಗಿರುತ್ತವೆ: (Usual day wise typical symptoms of coronavirus infection)

1. ಒಣ ಕೆಮ್ಮು – ಶೇ. 60
2. ಉಸಿರಾಟದ ತೊಂದರೆ – ಶೇ. 60
3. ಜ್ವರ – ಶೇ. 56
4. ಸ್ನಾಯು ಬಾಧೆ – ಶೇ. 45
5. ತಲೆನೋವು – ಶೇ. 43
6. ಗಂಟಲು ಬೇನೆ – ಶೇ. 32
7. ವಾಸನೆ ಮತ್ತು ರುಚಿ ಕಳೆದುಕೊಳ್ಳುವಿಕೆ – ಶೇ. 65
8. ಸುಸ್ತು – ಶೇ. 69

ರೋಗದ ಅವಧಿಯಲ್ಲಿ ಸೋಂಕಿತರಿಗೆ ಮುಖ್ಯವೆನಿಸುವ ದಿನಗಳು:
1. ಆರಂಭದ ದಿನಗಳಲ್ಲಿ ಕಂಡುಬರುವ ರೋಗ ಲಕ್ಷಣಗಳು:
ಮೊದಲು ಜ್ವರ ಬರುತ್ತದೆ. ಅದರ ಜೊತೆಗೆ ಸುಸ್ತು, ಸ್ನಾಯು ಬಾಧೆ, ಒಣ ಕೆಮ್ಮು ಬಾಧಿಸತೊಡಗುತ್ತದೆ. ಕೆಲವರಲ್ಲಿ ಮೊದಲ ಒಂದೆರಡು ದಿನ ಬೇಧಿ ಸಹ ಕಾಡತೊಡಗುತ್ತದೆ. ಶ್ವಾಸಕೋಶದ ಉರಿಯೂತ – ನ್ಯುಮೋನಿಯಾ – pneumonia ನಿಧಾನವಾಗಿ ಪ್ರವೇಶ ಪಡೆಯುತ್ತದೆ.

2. ಐದರಿಂದ ಏಳನೇ ದಿನಗಳಲ್ಲಿ ಕಾಣುವ ರೋಗ ಲಕ್ಷಣಗಳು:
ವೂಹಾನ್​ ಯೂನಿವರ್ಸಿಟಿ ಅಧ್ಯಯನದ ಪ್ರಕಾರ ಉಸಿರಾಟದ ತೊಂದರೆ ಬಾಧಿಸತೊಡಗುತ್ತದೆ. ವಯಸ್ಸಾದವರಿಗೆ ಮತ್ತು ಇತರೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವವರಿಗೆ ಇದು ಸ್ವಲ್ಪ ಜಾಸ್ತಿಯೇ ಇರುತ್ತದೆ. ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಎದುರಾಗುತ್ತದೆ.

3. ಎಂಟನೇ ದಿನದಿಂದ ಕಾಣಿಸಿಕೊಳ್ಳುವ ರೋಗ ಲಕ್ಷಣಗಳು:
ಇದು ತುಸು ಗಾಬರಿ ಹುಟ್ಟಿಸುಂತಹ ಘಟ್ಟ. ರೂಗ ಉಲ್ಬಣವಾಗುವ ಹಂತ ಇದು. ಈ ಹಂತದಲ್ಲಿ ಶ್ವಾಸಕೋಶದಲ್ಲಿ ದ್ರವ ತುಂಬಿಕೊಳ್ಳಲು ಆರಂಭಿಸುತ್ತದೆ. ಆಗ ರೋಗಿಗಳಲ್ಲಿ ತೀವ್ರ ಉಸಿರಾಟದ ತೊಂದರೆ (acute respiratory distress syndrome- ARDS) ಹೆಚ್ಚಾಗುತ್ತದೆ.

4. 10ನೇ ದಿನದಿಂದ ಕಾಣಿಸಿಕೊಳ್ಳುವ ತೀವ್ರ ಸ್ವರೂಪದ ರೋಗ ಲಕ್ಷಣಗಳು:
ಈ ಹಂತದಲ್ಲಿ ರೋಗ ಲಕ್ಷಣಗಳು ತೀವ್ರ ಸ್ವರೂಪದ್ದಾಗಿರುತ್ತದೆ. ರೋಗ ತೀವ್ರವಾಗುತ್ತದೆ. ರೋಗಿಗೆ ಈ ಹಂತದಲ್ಲಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಬೇಕಾಗುತ್ತದೆ. ಈ ಹಂತದ ರೋಗಿಗಳಿಗೆ ಹಸಿವು ಇಲ್ಲವಾಗುತ್ತದೆ. ಹೊಟ್ಟೆ ನೋವು ಕಾಣಿಸುತ್ತದೆ.

5. 17ನೇ ದಿನ..
ಮೇಲಿನ ಹಂತಗಳನ್ನೆ ಯಶಸ್ವಿಯಾಗಿ ದಾಟಿ ಬಂದರೆ, ಸಾಮಾನ್ಯವಾಗಿ ರೋಗಿ ಗುಣಮುಖವಾದರು ಅಂತಲೇ ಭಾವಿಸಬಹುದು. ಕೊರೊನಾ ಸೋಂಕು ತನ್ನ ಉಪಟಳವನ್ನು ನಿಲ್ಲಿಸಿ, ದೇಹದಿಂದ ತೊಲಗಿದೆ ಎಂದು ಹೇಳಬಹುದು.

(what are the Usual day wise typical symptoms of coronavirus infection)

ನೀವು ಫಾ..ಸ್ಟ್ ಫುಡ್ ಪ್ರಿಯರಾ? ಹಾಗಾದ್ರೆ ಹುಷಾರ್! ಮೊದಲು ಹೋಗಿ ಶ್ವಾಸಕೋಶದ ಆರೋಗ್ಯ ಪರೀಕ್ಷೆ ಮಾಡಿಸಿ

Published On - 1:55 pm, Sat, 8 May 21