ಆಶಾದಾಯಕ ಸುದ್ದಿ: ಈಗಲೇ ಕಠಿಣ ಕ್ರಮಗಳನ್ನು ಕೈಗೊಂಡರೆ ಮೂರನೇ ಅಲೆಯನ್ನು ತಡೆಗಟ್ಟಬಹುದು

Corona 3rd Wave: ಸ್ಥಳೀಯ ಮಟ್ಟದಲ್ಲಿ, ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ಹಾಗೂ ನಗರಗಳಲ್ಲಿ ಸೇರಿ ಎಲ್ಲಾ ಕಡೆಗಳಲ್ಲೂ ಎಷ್ಟು ಪರಿಣಾಮಕಾರಿಯಾಗಿ ಕೊರೊನಾ ವಿರುದ್ಧದ ನಿಯಮಾವಳಿಗಳು ಅಳವಡಿಸಲ್ಪಡುತ್ತವೆ ಎಂಬುದರ ಮೇಲೆ ಮೂರನೇ ಅಲೆಯ ಪ್ರಭಾವ, ಪರಿಣಾಮ ಅವಲಂಬಿತವಾಗಿದೆ.

ಆಶಾದಾಯಕ ಸುದ್ದಿ: ಈಗಲೇ ಕಠಿಣ ಕ್ರಮಗಳನ್ನು ಕೈಗೊಂಡರೆ ಮೂರನೇ ಅಲೆಯನ್ನು ತಡೆಗಟ್ಟಬಹುದು
ಕೆ. ವಿಜಯ್​ರಾಘವನ್
Follow us
TV9 Web
| Updated By: ganapathi bhat

Updated on:Aug 23, 2021 | 12:48 PM

ಸೂಕ್ತ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ ಕೊವಿಡ್-19 ಸೋಂಕಿನ ಮೂರನೇ ಅಲೆಯನ್ನು ದೇಶದ ಎಲ್ಲಾ ಕಡೆ ಎದುರಿಸುವ ಪರಿಸ್ಥಿತಿ ಬರುವುದಿಲ್ಲ ಅಥವಾ ಎಲ್ಲೂ ಕೂಡ ಮೂರನೇ ಅಲೆ ಉಂಟಾಗದು. ಸ್ಥಳೀಯ ಮಟ್ಟದಲ್ಲಿ, ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ಹಾಗೂ ನಗರ ಸೇರಿದಂತೆ ಎಲ್ಲಾ ಕಡೆ ಎಷ್ಟು ಪರಿಣಾಮಕಾರಿಯಾಗಿ ಕೊರೊನಾ ವಿರುದ್ಧದ ನಿಯಮಾವಳಿಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂಬುದರ ಮೇಲೆ ಮೂರನೇ ಅಲೆಯ ಪ್ರಭಾವ, ಪರಿಣಾಮ ಅವಲಂಬಿತವಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ ರಾಘವನ್ ಸಲಹೆ ಕೊಟ್ಟಿದ್ದಾರೆ.

ಈಗಿರುವ ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಲಸಿಕೆಯು ಸಾಮರ್ಥ್ಯ ಹೊಂದಿದೆ. ದೇಶದ ಹಾಗೂ ವಿಶ್ವದ ವಿಜ್ಞಾನಿಗಳು ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ಸಂಶೋಧನೆ ನಡೆಸುತ್ತಿದ್ದಾರೆ ಎಂದು ವಿಜಯ ರಾಘವನ್ ತಿಳಿಸಿದ್ದಾರೆ.

ಭಯ ಬೇಡ, ಜವಾಬ್ದಾರಿ ಇರಲಿ ಕೊರೊನಾ ವೈರಾಣು ಹರಡುವಿಕೆ ಪ್ರಮಾಣ ಭಾರತದಲ್ಲಿ ತೀವ್ರಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಕೊರೊನಾದ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಹಲವು ನಗರಗಳು ಕೊವಿಡ್ ಸೋಂಕಿನಿಂದಾಗಿ ಬಹಳಷ್ಟು ಕಷ್ಟ ಅನುಭವಿಸಿವೆ. ಜನರು ಆರೋಗ್ಯದ ಬಗ್ಗೆ ಅಥವಾ ಬದುಕುವ ಬಗ್ಗೆ ಆಶಾಭಾವವನ್ನೇ ಕಳೆದುಕೊಳ್ಳಬೇಕೇನೋ ಎಂಬಷ್ಟು ಕಷ್ಟನಷ್ಟಗಳ ಸುದ್ದಿಯನ್ನು ನೋಡುತ್ತಿದ್ದೇವೆ. ಆದರೆ, ಇದೆಲ್ಲಕ್ಕೂ ಒಂದು ಅಂತ್ಯ ಇದ್ದೇಇದೆ. ಮತ್ತೆ ಮೊದಲಿನಂತೆ ತೆರೆದ ಬಯಲಲ್ಲಿ ಹಗುರಾಗಿ ಉಸಿರಾಡುವಂತಾಗಲು ಒಂದು ಕಾಲ ಸನ್ನಿಹಿತವಾಗುತ್ತದೆ.

ಹಾಗೆಂದು ಕೇವಲ ಉಡಾಫೆ ಮನೋಭಾವದಿಂದ ಈಗ ಇರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಆದರೂ ನಾವು ನಮ್ಮನ್ನು, ನಮ್ಮ ಜನರನ್ನು ಕಾಪಾಡಿಕೊಳ್ಳಲು, ಈಗ ಕೊಂಚ ಕಠಿಣ ಕಟ್ಟುಪಾಡನ್ನು ಅನುಭವಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ನಾವೆಲ್ಲರೂ ಜವಾಬ್ದಾರಿ ತೋರಬೇಕಾಗಿದೆ. ಸರ್ಕಾರಕ್ಕೆ ವಿವಿಧ ವೈದ್ಯರು, ವಿಜ್ಞಾನಿಗಳು, ಕೋರ್ಟ್ ಸಹಿತ ಕಠಿಣ ನಿಯಮಾವಳಿ ಜಾರಿಗೊಳಿಸುವಂತೆ ಸೂಚಿಸುತ್ತಿದೆ. ಮೂರನೇ ಅಲೆಯನ್ನು ಯಶಸ್ವಿಯಾಗಿ ತಡೆಯುವ ಮಾರ್ಗಗಳನ್ನು ಸೂಚಿಸುತ್ತಲೇ ಇದೆ. ಅದೆಲ್ಲಕ್ಕೂ ಸದ್ಯ ನಾವು ಸಿದ್ಧರಿರಬೇಕಿದೆ.

ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಜಗತ್ತೇ ಕಳೆದುಹೋಯಿತು ಎಂಬ ಚಿಂತೆಯಲ್ಲಿ ನೀವಿದ್ದರೆ, ಅಂಥ ಚಿಂತೆಯನ್ನು ಬಿಟ್ಟುಬಿಡಿ. ಆರೋಗ್ಯಪೂರ್ಣರಾಗಿ, ಧೈರ್ಯದಿಂದ, ಧೃತಿಗೆಡದೆ ಹಾಗೆಂದು ಜವಾಬ್ದಾರಿ ಮರೆಯದೆ ದಿನಕಳೆಯಿರಿ. ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಇಂದು ನೀಡಿರುವ ಹೇಳಿಕೆಯಂತೆ, ನಾವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ ಕೊರೊನಾ ಸಾಂಕ್ರಾಮಿಕವನ್ನು ಮಣಿಸಬಹುದಾಗಿದೆ. ಮೂರನೇ ಅಲೆ ಬಾರದಂತೆ ತಡೆಯಬಹುದಾಗಿದೆ. ಎರಡನೇ ಅಲೆಯ ಸಂಕಷ್ಟವನ್ನು ಇಲ್ಲಿಗೇ ನಿಲ್ಲಿಸಬಹುದಾಗಿದೆ.

ದೇಶದೆಲ್ಲೆಡೆ ಉದ್ಭವಿಸಿರುವ ಈ ಕಷ್ಟದ ಪರಿಸ್ಥಿತಿಯಿಂದ ಹೊರಬರಲು ನಾವೆಲ್ಲರೂ ನಮ್ಮ ಕರ್ತವ್ಯ ನಿಭಾಯಿಸುವುದು ಅನಿವಾರ್ಯವಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಹೋಗದೆ, ಅಗತ್ಯವಿದ್ದಲ್ಲಿಗೆ ಮಾತ್ರ ಹೋಗಿ, ಸಾಮಾಜಿಕ ಅಂತರ ಪಾಲನೆ, ಗುಂಪುಗೂಡದೆ ಕೆಲಸ ಕಾರ್ಯಗಳನ್ನು ಮುಗಿಸಬೇಕಿದೆ. ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆಯುತ್ತಿರುವುದನ್ನು ಮಾಡಬೇಕಿದೆ. ಒಗ್ಗಟ್ಟಾಗಿ ಕೊರೊನಾ ಎದುರಿಸೋಣ, ಉತ್ತಮ ಸಮಾಜ ನಿರ್ಮಿಸೋಣ.

(If we take strong measures third wave of corona may not happen says K VijayRaghavan)

ಇದನ್ನೂ ಓದಿ: Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ

ಹೆದರುವುದು ಬೇಡ, ಆತ್ಮಸ್ಥೈರ್ಯದಿಂದಿರಿ; ಕೊರೊನಾ ಗೆದ್ದು ಬಂದ ಒಂದೇ ಕುಟುಂಬದ 17 ಮಂದಿ

Published On - 7:10 pm, Fri, 7 May 21

ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!