AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CoWIN Security Code: ಕೊವಿನ್ ಪೋರ್ಟಲ್​ಗೆ ಹೊಸ ಸೆಕ್ಯುರಿಟಿ ಸೌಲಭ್ಯ; ಬಳಸುವುದು ಹೇಗೆ? ಇಲ್ಲಿದೆ ವಿವರ

ಇದರಿಂದಾಗಿ ಬೇರೆಯದೇ ವ್ಯಕ್ತಿಗೆ ಲಸಿಕೆ ವಿತರಣೆಯಾಗುವುದು ಕಡಿಮೆಯಾಗಲಿದೆ. ಯಾರು ಅಪಾಯಿಂಟ್‌ಮೆಂಟ್ ಪಡೆದಿರುತ್ತಾರೋ ಅಂಥವರಿಗೆ ಸೂಕ್ತ ರೀತಿಯಲ್ಲಿ ಲಸಿಕೆ ಸಿಗಲಿದೆ.

CoWIN Security Code: ಕೊವಿನ್ ಪೋರ್ಟಲ್​ಗೆ ಹೊಸ ಸೆಕ್ಯುರಿಟಿ ಸೌಲಭ್ಯ; ಬಳಸುವುದು ಹೇಗೆ? ಇಲ್ಲಿದೆ ವಿವರ
ಕೊವಿನ್ ಪೋರ್ಟಲ್
TV9 Web
| Edited By: |

Updated on:Aug 23, 2021 | 12:48 PM

Share

ಲಸಿಕೆ ಪಡೆಯುವ ಮೊದಲೇ ಲಸಿಕಾ ಪ್ರಮಾಣಪತ್ರ ಲಭ್ಯವಾದ ಬಗ್ಗೆ ಹಲವು ಬಳಕೆದಾರರು ದೂರು ನೀಡಿದ ಬಳಿಕ ಕೊವಿನ್ ಪೋರ್ಟಲ್‌ಗೆ ಹೊಸ ಆಯ್ಕೆಯೊಂದನ್ನು ಸೇರಿಸಲಾಗಿದೆ. ಅದರಂತೆ, ಈಗ ಕೊವಿನ್ ಪೋರ್ಟಲ್‌ನಲ್ಲಿ ಯಾರೆಲ್ಲಾ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೋ ಹಾಗೂ ಲಸಿಕೆ ಪಡೆಯಲು ಸ್ಲಾಟ್ ಬುಕ್ ಮಾಡಿದ್ದಾರೋ ಅವರು ತಾವು ಲಸಿಕೆ ಪಡೆಯುವ ವೇಳೆಯಲ್ಲಿ 4 ಸಂಖ್ಯೆಯ ಸೆಕ್ಯುರಿಟಿ ಕೋಡ್‌ನ್ನು ಲಸಿಕಾ ಕೇಂದ್ರದಲ್ಲಿ ದಾಖಲಿಸಬೇಕಾಗಿದೆ. ಆ ಮೂಲಕ, ಲಸಿಕೆ ಪಡೆಯುತ್ತಿರುವುದು ತಾವೇ ಎಂದು ದಾಖಲಿಸಿಕೊಳ್ಳಬೇಕಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಹೇಳಿಕೆಯಂತೆ, ಕೆಲವೊಂದು ಪ್ರಕರಣಗಳಲ್ಲಿ ಜನರು ಲಸಿಕೆ ಪಡೆಯಲು ಹೋಗದಿದ್ದರೂ ಅವರಿಗೆ ಲಸಿಕೆ ಪಡೆದ ಬಗ್ಗೆ ಸಂದೇಶ ಬಂದಿದೆ. ಕೊವಿನ್ ಪೋರ್ಟಲ್ ಮೂಲಕ ನಿಗದಿಪಡಿಸಿದ ದಿನಾಂಕದಂದು ಲಸಿಕೆ ಪಡೆಯಲಾಗದವರಿಗೂ, ಲಸಿಕೆ ಪಡೆದ ಬಗ್ಗೆ ಎಸ್‌ಎಂಎಸ್ ಬಂದಿದೆ. ಈ ದೋಷ ಸರಿಪಡಿಸಲು ಹೊಸ ಆಯ್ಕೆಯೊಂದನ್ನು ಕೊವಿನ್ ಪೋರ್ಟಲ್‌ನಲ್ಲಿ ನೀಡಲಾಗಿದೆ.

ಈಗ ನಾವೇನು ಮಾಡಬೇಕು? ಶನಿವಾರದ ಬಳಿಕ, ಪೋರ್ಟಲ್‌ನಲ್ಲಿ ಹೊಸ ಆಯ್ಕೆ‌ಇರಲಿದೆ. ಅದರಂತೆ, ಲಸಿಕೆ ಪಡೆಯುವ ಸ್ಥಳದಲ್ಲಿ, ಲಸಿಕೆ ಪಡೆಯುವವರಿಗೆ 4 ಸಂಖ್ಯೆಯ ಸೆಕ್ಯುರಿಟಿ ಕೋಡ್‌ನ್ನು ನೀಡಲಾಗುತ್ತದೆ. ಆ 4 ಸಂಖ್ಯೆಯ ಸೆಕ್ಯುರಿಟಿ ಕೋಡ್‌ ಅನ್ನು ಲಸಿಕಾ ಕೇಂದ್ರದಲ್ಲಿ ನಾವು ನೀಡಬೇಕಾಗುತ್ತದೆ. ಬಳಿಕ, ಈ‌ ಕೋಡ್‌ನ್ನು ಕೊವಿನ್ ಪೋರ್ಟಲ್‌ನಲ್ಲಿ ದಾಖಲಿಸಿ ಲಸಿಕೆ ಪಡೆದ ಬಗ್ಗೆ ಖಚಿತಪಡಿಸಿಕೊಳ್ಳಬಹುದಾಗಿದೆ.

ಇದರಿಂದಾಗಿ ಬೇರೆಯದೇ ವ್ಯಕ್ತಿಗೆ ಲಸಿಕೆ ವಿತರಣೆಯಾಗುವುದು ಕಡಿಮೆಯಾಗಲಿದೆ. ಯಾರು ಅಪಾಯಿಂಟ್‌ಮೆಂಟ್ ಪಡೆದಿರುತ್ತಾರೋ ಅಂಥವರಿಗೆ ಸೂಕ್ತ ರೀತಿಯಲ್ಲಿ ಲಸಿಕೆ ಸಿಗಲಿದೆ.

ಈ ಸೌಲಭ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಿ ಇಂತಹ ರಕ್ಷಣಾ ಸೌಲಭ್ಯಗಳನ್ನು ಹಲವು ಅಪ್ಲಿಕೇಶನ್‌ಗಳು ಬಳಸುತ್ತಿವೆ‌. ಸೇವೆ ಸರಿಯಾದ ರೀತಿಯಲ್ಲಿ ಒದಗುವಂತೆ ಈ ಕ್ರಮ ರೂಪಿಸಲಾಗುತ್ತದೆ. ಉದಾಹರಣೆಗೆ ಓಲಾ ಅಥವಾ ಊಬರ್‌ನಲ್ಲಿ ನಾಲ್ಕು ಸಂಖ್ಯೆಯ ಪಾಸ್‌ವರ್ಡ್‌ನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಈ ಪಾಸ್‌ವರ್ಡ್ ಟ್ಯಾಕ್ಸಿ ಡ್ರೈವರ್‌ಗೆ ತಿಳಿದಿರುವುದಿಲ್ಲ. ಚಾಲಕ ನಿಮ್ಮ ಬಳಿ ಬಂದಾಗ ನೀವು ಅವರಿಗೆ ಈ ನಾಲ್ಕು ಡಿಜಿಡ್ ಸಂಖ್ಯೆಯನ್ನು ತಿಳಿಸಬೇಕಾಗುತ್ತದೆ‌.

ಅದೇ ರೀತಿ, ಇ ಕಾಮರ್ಸ್ ಹಾಗೂ ಮತ್ತಿತರ ಸಂಸ್ಥೆಗಳು ಒನ್ ಟೈಮ್ ಪಾಸ್‌ವರ್ಡ್‌ಗಳನ್ನು ಗ್ರಾಹಕರಿಗೆ ನೀಡುತ್ತದೆ. ಕೊವಿನ್ ಪೋರ್ಟಲ್ ಕೂಡ ಲಸಿಕೆ ವಿತರಣೆ ವಿಚಾರದಲ್ಲಿ ಹೀಗೆ ಕಾರ್ಯನಿರ್ವಹಿಸಲಿದೆ.‌ ಸರಿಯಾದ ವ್ಯಕ್ತಿಗೆ ಲಸಿಕೆ ಲಭ್ಯವಾಗಿದೆ ಎಂದು ದೃಢೀಕರಿಸಲು ಈ ಮಾರ್ಗ ಬಳಕೆಯಾಗಲಿದೆ.

ತಾವು ಲಸಿಕೆ ಪಡೆಯಲು ಅರ್ಹರಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಬಾಕಿ ಇದ್ದರೆ ಆದಷ್ಟು ಬೇಗ ಕೊವಿನ್ ಪೋರ್ಟಲ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಿ. ತಂತ್ರಜ್ಞಾನ ಬಳಸಲು ಕಷ್ಟವಾಗುವವರಿಗೆ ನೆರವಾಗಿ.

ಇದನ್ನೂ ಓದಿ: Explainer: ಲಸಿಕೆಗೆ ಬೇಡಿಕೆ ಹೆಚ್ಚು, ಪೂರೈಕೆಗೆ ಹಲವು ಸಮಸ್ಯೆ; ಉತ್ಪಾದನೆ ಹೆಚ್ಚಿಸಲು ಸರ್ಕಾರದ ಮುಂದಿರುವ ಆಯ್ಕೆಗಳೇನು?

Explainer: ಭಾರತದಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆಯಲು ಏಕಿಷ್ಟು ಪರದಾಟ? ಪರಿಹಾರವೇನು?

(CoWIN Portal gets new security code feature after getting complaints here are details)

Published On - 5:29 pm, Fri, 7 May 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್