E-Coli Virus: ಬರ್ಗರ್ ತಿನ್ನುವವರಲ್ಲಿ ಹೆಚ್ಚುತ್ತಿದೆ E. coli ವೈರಸ್‌; ಏನಿದು ಕಾಯಿಲೆ, ಇದರ ಲಕ್ಷಣಗಳೇನು?

|

Updated on: Oct 24, 2024 | 3:11 PM

ಅಮೆರಿಕದಲ್ಲಿ ಬರ್ಗರ್ ತಿನ್ನುವವರಲ್ಲಿ ಇ-ಕೋಲಿ ವೈರಸ್ ಹರಡುವಿಕೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿ ಮಾಡಿದೆ. ಆದ್ದರಿಂದ ಇ-ಕೋಲಿ ವೈರಸ್ ಎಂದರೇನು? ಬರ್ಗರ್ ಸೇವನೆಯಿಂದ ಈ ವೈರಲ್​ ಹರಡಲು ಕಾರಣವೇನು? ಇದರ ಲಕ್ಷಣಗಳೇನು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

E-Coli Virus: ಬರ್ಗರ್ ತಿನ್ನುವವರಲ್ಲಿ ಹೆಚ್ಚುತ್ತಿದೆ E. coli ವೈರಸ್‌; ಏನಿದು ಕಾಯಿಲೆ, ಇದರ ಲಕ್ಷಣಗಳೇನು?
E-Coli Virus
Follow us on

ಅಮೆರಿಕದ ಹಲವು ಭಾಗಗಳಲ್ಲಿ, ಕಲುಷಿತ ಆಹಾರದಲ್ಲಿ ಕಂಡುಬರುವ ಇ.ಕೋಲಿ ವೈರಸ್‌ನಿಂದ ಹತ್ತಾರು ಜನರು ಅನಾರೋಗ್ಯಕ್ಕೆ ಒಳಗಾಗಿರುವುದು ವರದಿಯಾಗಿದೆ. ಹಲವು ಪ್ರಾಂತ್ಯಗಳಲ್ಲಿ ಮೆಕ್‌ಡೊನಾಲ್ಡ್ ಬರ್ಗರ್ ತಿಂದ ಜನರು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿಯ ಪ್ರಕಾರ, ಮೆಕ್‌ಡೊನಾಲ್ಡ್ಸ್ ಬರ್ಗರ್ ತಿನ್ನುವ ಜನರು ಇ.ಕೋಲಿ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಬಹಿರಂಗಪಡಿಸಿದೆ.

ಪ್ರಸ್ತುತ, ಈ ವೈರಸ್ ಕೊಲೊರಾಡೋ ಮತ್ತು ನೆಬ್ರಸ್ಕಾದಲ್ಲಿ ಹೆಚ್ಚು ಹರಡಿದ್ದು, ಇದರ ರೋಗಿಗಳು ಇತರ ಹಲವು ರಾಜ್ಯಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೈರಸ್‌ನಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಸುದ್ದಿಯೂ ಇದೆ. ಆದ್ದರಿಂದ E. Coli ವೈರಸ್ ಎಂದರೇನು, ಅದರ ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳನ್ನು ತಿಳಿದುಕೊಳ್ಳಿ.

E. coli ವೈರಸ್ ಎಂದರೇನು?

ಇ.ಕೋಲಿ ವೈರಸ್ ಸೋಂಕು ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇ.ಕೋಲಿ ವೈರಸ್ ಅನ್ನು ಕರುಳಿನ ಸೂಕ್ಷ್ಮಾಣು ಎಂದು ಕರೆಯಲಾಗುತ್ತದೆ, ಇದು ಹಸಿ ತರಕಾರಿಗಳಿಗೆ ಅಂಟಿಕೊಳ್ಳುವ ವೈರಲ್​​ ಆಗಿದ್ದು, ಇದು ಹೆಚ್ಚಾಗಿ ಹಸಿ ಮಾಂಸ, ಹಸಿ ತರಕಾರಿಗಳು, ಹಸಿ ಹಾಲು ಮತ್ತು ಹಸಿ ಹಣ್ಣುಗಳಲ್ಲಿ ಕಂಡುಬರುತ್ತದೆ. ಅವುಗಳನ್ನು ಸರಿಯಾಗಿ ತೊಳೆದು ಶುಚಿಗೊಳಿಸದಿದ್ದರೆ, ಇ ಕೊಲಿ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು ಪ್ರವೇಶಿಸಿ ಹೊಟ್ಟೆಯಲ್ಲಿ ತೊಂದರೆ ಉಂಟುಮಾಡುತ್ತವೆ.

ಈ ವೈರಸ್ 057:H7 ಸ್ಟ್ರೈನ್ ಎಂಬ ಗಂಭೀರ ಕಾಯಿಲೆಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೂ ಮುನ್ನ ಅಂದರೆ 1993ರಲ್ಲಿ ಬರ್ಗರ್‌ಗಳನ್ನು ತಿಂದ ನಾಲ್ವರು ಮಕ್ಕಳು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ದೇಹ ಭಾರವಾದಂತೆ ಅನಿಸಿದರೆ ನಿರ್ಲಕ್ಷ್ಯ ಮಾಡಬೇಡಿ

E. coli  ವೈರಸ್‌ನ ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳು:

ಇ.ಕೋಲಿ ವೈರಸ್ ರೋಗಿಯ ಜೀರ್ಣಾಂಗ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಈ ಸೋಂಕಿನಿಂದ ಬಳಲುತ್ತಿರುವ ಮೂರ್ನಾಲ್ಕು ದಿನಗಳಲ್ಲಿ ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಯ ಮೇಲೆ ಇದರ ಪರಿಣಾಮ ಗೋಚರಿಸುತ್ತದೆ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಪರಿಸ್ಥಿತಿ ಹದಗೆಡಬಹುದು. ಇದರಲ್ಲಿ, ಮೊದಲಿಗೆ ರೋಗಿಗೆ ಹೊಟ್ಟೆ ನೋವು ಇರುತ್ತದೆ. ಈ ನೋವು ಹೆಚ್ಚಾಗುತ್ತದೆ ಮತ್ತು ಅತಿಸಾರ ವಾಂತಿಯ ಲಕ್ಷಣ ಕಂಡುಬರುತ್ತದೆ.

ಇ.ಕೋಲಿ ವಿರುದ್ಧ ರಕ್ಷಿಸಲು ಏಕೈಕ ಮಾರ್ಗವೆಂದರೆ ಆಹಾರ ಮತ್ತು ತರಕಾರಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮತ್ತು ಅವುಗಳನ್ನು ಸಂಪೂರ್ಣವಾಗಿ ಬೇಯಿಸುವುದು. ಕಡಿಮೆ ಬೇಯಿಸಿದ ಮತ್ತು ಹಸಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಹಸಿ ತರಕಾರಿಗಳು ಮತ್ತು ಹಸಿ ಮಾಂಸವನ್ನು ತಿನ್ನುವುದನ್ನು ತಪ್ಪಿಸಿ. ಕಚ್ಚಾ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ತಿನ್ನುವಾಗ ಜಾಗರೂಕರಾಗಿರಿ. ಅಡುಗೆ ಮಾಡುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Thu, 24 October 24