ನಾವು ಸದಾ ಆರೋಗ್ಯವಾಗಿರಲು ದೇಹಕ್ಕೆ ಅನೇಕ ಬಗೆಯ ಜೀವಸತ್ವಗಳು ಮತ್ತು ಪೋಷಕಾಂಶಗಳು ಅಗತ್ಯವಿರುತ್ತದೆ. ಅದರಲ್ಲಿ ವಿಟಮಿನ್ ಡಿ ಕೂಡ ಒಂದು. ವಿಟಮಿನ್ ಡಿ ನಮ್ಮ ದೇಹದಲ್ಲಿ ಸೂರ್ಯನ ಬೆಳಕಿನಿಂದ ಉತ್ಪತ್ತಿಯಾಗುತ್ತದೆ. ಆದರೆ ಇಂದಿನ ಧಾವಂತದಲ್ಲಿ ಹೆಚ್ಚಿನವರಲ್ಲಿ ವಿಟಮಿನ್ ಡಿ ಕೊರತೆ ಕಂಡು ಬರುತ್ತಿದೆ.
ಉಳಿದೆಲ್ಲ ವಿಟಮಿನಗಳ ಹೊರತಾಗಿ ನಮ್ಮ ದೇಹಕ್ಕೂ ಸಾಕಷ್ಟು ವಿಟಮಿನ್ ಡಿ ಬೇಕು. ವಿಟಮಿನ್ ಡಿ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯು ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ನಮ್ಮ ದೇಹವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮೂಲಕ ವಿಟಮಿನ್ ಡಿ ಅನ್ನು ಉತ್ಪಾದಿಸುತ್ತದೆ. ವಿಟಮಿನ್ ಡಿ ಕೊರತೆ ಎಂದರೆ ನಿಮ್ಮ ದೇಹದಲ್ಲಿ ಈ ನಿರ್ದಿಷ್ಟ ವಿಟಮಿನ್ ಪ್ರಮಾಣವು ತುಂಬಾ ಕಡಿಮೆಯಾಗಿದೆ.
ವಿಟಮಿನ್ ಡಿ ನಮ್ಮ ಮೂಳೆಗಳು ಮತ್ತು ಹಲ್ಲುಗಳಿಗೆ ಬಹಳ ಮುಖ್ಯ. ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯನ್ನು ರಿಕೆಟ್ಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಮೂಳೆಗಳು ತುಂಬಾ ಮೃದುವಾಗುತ್ತವೆ ಮತ್ತು ಸುಲಭವಾಗಿ ಒಡೆಯುತ್ತವೆ.
ವಿಟಮಿನ್ ಡಿ ಕೊರತೆ ಇದ್ದರೆ ನಿಮ್ಮ ಮೂಳೆಗಳು ವಯಸ್ಸಾದಂತೆ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಇಷ್ಟೇ ಅಲ್ಲ, ಸಾಕಷ್ಟು ಕೊರತೆ ಇದ್ದಾಗ, ಅದು ಬಿರುಕು ಬಿಡಲು ಪ್ರಾರಂಭಿಸುತ್ತದೆ, ಇದು ಒಳ್ಳೆಯ ಸಂಕೇತವಲ್ಲ.
ಕೆಲಸಕ್ಕೆ ಹೋಗುವವರು: ಕಚೇರಿಯಲ್ಲಿ ಕೆಲಸ ಮಾಡುವವರಲ್ಲಿ ವಿಟಮಿನ್ ಡಿ ಕೊರತೆ ಕಾಡುತ್ತದೆ. ಕಚೇರಿಯಲ್ಲಿಯೇ ದಿನದ 10,11 ಗಂಟೆಗಳ ಕಾಲ ಇರುವುದರಿಂದ ಸೂರ್ಯನ ಕಿರಣಗಳು ಅವರ ಮೈಮೇಲೆ ಬೀಳುವುದಿಲ್ಲ ಹೀಗಾಗಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.
55 ವರ್ಷ ಮೇಲ್ಪಟ್ಟವರು: 55 ವರ್ಷಗಳ ನಂತರ ದೇಹದಲ್ಲಿ ಅನೇಕ ಜೀವಸತ್ವಗಳ ಕೊರತೆ ಇದ್ದರೂ ವಿಟಮಿನ್ ಡಿ ಕೊರತೆ ಹೆಚ್ಚು ಕಾಣಿಸುತ್ತದೆ. ವಿಟಮಿನ್ ಡಿ ಕೊರತೆಯು ಒಂಟಿತನ, ನಿದ್ರಾಹೀನತೆ , ಕಿರಿಕಿರಿ, ಒತ್ತಡ ಮತ್ತು ಕೀಲು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮೆಗ್ನೀಶಿಯಂ ಪ್ರಮಾಣ ಕಡಿಮೆ: ವಿಟಮಿನ್ ಡಿಯನ್ನು ದೇಹದಲ್ಲಿ ಆಕ್ಟಿವೇಟ್ ಮಾಡಲು ಮೆಗ್ನೀಶಿಯಂ ಪ್ರಮುಖ ಪಾತ್ರವಹಿಸುತ್ತದೆ.
ಮಾಂಸಾಹಾರ ತಿನ್ನುವವರು: ಯಾವಾಗಲೂ ಮಾಂಸಾಹಾರ ತಿನ್ನುವ ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿರುತ್ತಾರೆ. ವಾಸ್ತವವಾಗಿ, ನಾನ್-ವೆಜ್ ಪ್ರೋಟೀನ್ ಗಳ ಹೆಚ್ಚಿನ ಮೂಲಗಳಿವೆ ಆದರೆ ಅವು ವಿಟಮಿನ್ ಡಿಯನ್ನು ಪೂರೈಸುವುದಿಲ್ಲ. ವಿಟಮಿನ್ ಡಿ ಪೂರೈಕೆಗೆ ತರಕಾರಿ, ಹಣ್ಣು ಮುಖ್ಯ.
ಹೆಚ್ಚಿನ ಕೊಬ್ಬು ಹೊಂದಿರುವ ಜನರು: ದೇಹದಲ್ಲಿ ಹೆಚ್ಚಿನ ಕೊಬ್ಬು ಹೊಂದಿದ್ದರೆ ಆಗ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಇರಬಹುದು ಎಂದು ಹೇಳಲಾಗುತ್ತದೆ.