AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vitamin D: ನಿಮ್ಮ ದೇಹದಲ್ಲಿ ವಿಟಮಿನ್ ಡಿ ಅಂಶ ಕಡಿಮೆಯಾಗಿದೆಯೇ? ಏನು ಮಾಡಬೇಕು?

ದೇಹದಲ್ಲಿರುವ ವಿಟಮಿನ್ ಡಿ ಅಂಶವು ಹೃದ್ರೋಗ, ಕ್ಯಾನ್ಸರ್, ಮಧುಮೇಹ ಸೇರಿದಂತೆ ಹಲವು ರೋಗಗಳ ಅಪಾಯವನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದೆ. ಸೂರ್ಯನ ಬಿಸಿಲಿಗೆ ಮೈಯೊಡ್ಡಲು ಯಾವ ಸಮಯ ಸೂಕ್ತ ಎಂದು ವೈದ್ಯರನ್ನು ಕೇಳಿದರೆ ಯಾವಾಗ ಬೇಕಾದರೂ ಸೂರ್ಯನ ಬಿಸಿಲಿಗೆ ಮೈಯೊಡ್ಡಬಹುದು ಎಂದು ವೈದ್ಯರು ಹೇಳುತ್ತಾರೆ.

Vitamin D: ನಿಮ್ಮ ದೇಹದಲ್ಲಿ ವಿಟಮಿನ್ ಡಿ ಅಂಶ ಕಡಿಮೆಯಾಗಿದೆಯೇ? ಏನು ಮಾಡಬೇಕು?
Vitamin D
Follow us
TV9 Web
| Updated By: ನಯನಾ ರಾಜೀವ್

Updated on: Jul 01, 2022 | 12:23 PM

ದೇಹದಲ್ಲಿರುವ ವಿಟಮಿನ್ ಡಿ ಅಂಶವು ಹೃದ್ರೋಗ, ಕ್ಯಾನ್ಸರ್, ಮಧುಮೇಹ ಸೇರಿದಂತೆ ಹಲವು ರೋಗಗಳ ಅಪಾಯವನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದೆ. ಸೂರ್ಯನ ಬಿಸಿಲಿಗೆ ಮೈಯೊಡ್ಡಲು ಯಾವ ಸಮಯ ಸೂಕ್ತ ಎಂದು ವೈದ್ಯರನ್ನು ಕೇಳಿದರೆ ಯಾವಾ ಸಮಯದಲ್ಲಾದರೂ ಸೂರ್ಯನ ಬಿಸಿಲಿಗೆ ಮೈಯೊಡ್ಡಬಹುದು ಎಂದು ವೈದ್ಯರು ಹೇಳುತ್ತಾರೆ.

ವಿಟಮಿನ್ ಡಿ ಕೊರತೆಯಿಂದ ದೇಹವು ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಅಂತೆಯೇ ಕ್ಯಾನ್ಸರ್‌ನಂತಹ ಮಾರಾಣಾಂತಿಕ ಕಾಯಿಲೆಗಳಿಗೆ ಕೂಡ ಔಷಧಿಯು ವಿಟಮಿನ್ ಡಿ ಯಲ್ಲಿದೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ.

ಯಾರು ಸೂರ್ಯನ ಬೆಳಕಿಗೆ ಮೈಯೊಡ್ಡುವುದಿಲ್ಲವೋ ಅವರಲ್ಲಿ ಯಾವುದಾದರೊಂದು ಕಾಯಿಲೆಗಳು ಕಂಡುಬರುತ್ತಿರುತ್ತಿದೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ

ದೇಹದ ಪ್ರತಿ ಕಣವೂ ವಿಟಮಿನ್ ಡಿ ಅನ್ನು ಹೀರಿಕೊಳ್ಳುವುದರಿಂದ ಸೂರ್ಯನ ಕಿರಣ ಮೈಮೇಲೆ ಬಿದ್ದಾಗ ಕೊಲೆಸ್ಟ್ರಾಲ್‌ನಿಂದ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ವಿಟಮಿನ್ ಡಿ ನಮ್ಮ ದೇಹದಲ್ಲಿ ಹಾರ್ಮೋನ್‌ನಂತೆ ಕೆಲಸ ಮಾಡುತ್ತದೆ.

ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಸಮಸ್ಯೆ ಸೂರ್ಯನಿಗೆ ಕಡಿಮೆ ಒಡ್ಡಿಕೊಳ್ಳುವುದರಿಂದ ಸ್ಥೂಲಕಾಯತೆ, ಜೀರ್ಣಕ್ರಿಯೆ ಸಮಸ್ಯೆ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಕರುಳಿನ ಉರಿಯೂತ ಸಮಸ್ಯೆಗಳು ಉಂಟಾಗಲಿವೆ. ವಿಟಮಿನ್ ಡಿ ಕೊರತೆಯ ಲಕ್ಷಣಗಳು –ಡಿ ಕೊರತೆಯಿಂದಾಗಿ ನಿಮ್ಮ ಇಡೀ ದೇಹದ ತೂಕ ಹೆಚ್ಚಾಗತೊಡಗುತ್ತದೆ. -ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ. -ಆಯಾಸ ಮತ್ತು ಕೀಲು ನೋವನ್ನು ಉಂಟುಮಾಡುತ್ತದೆ. -ದೇಹದಲ್ಲಿ ವಿಟಮಿನ್ ಡಿ ಕೊರತೆಯು ರಕ್ತದಲ್ಲಿನ ಸಕ್ಕರೆಯನ್ನು ಸಂಸ್ಕರಿಸುವ ನಿಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹದ ಸಮಸ್ಯೆಗೆ ಕಾರಣವಾಗಬಹುದು. -ವಿಟಮಿನ್-ಡಿ ದೇಹದ ಈಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ಹೆಚ್ಚಿಸಬಹುದು. ಮಹಿಳೆಯರಿಗೆ, ಈಸ್ಟ್ರೊಜೆನ್ ಹಾರ್ಮೋನ್ ಮನಸ್ಥಿತಿ ಬದಲಾವಣೆ ಮತ್ತು ಖಿನ್ನತೆಗೆ ಕಾರಣವಾಗಬಹುದು. -ವಿಟಮಿನ್-ಡಿ ದೇಹದ ಇನ್ಸುಲಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಕೊಬ್ಬು ಹೆಚ್ಚಾಗಲು ಇದೇ ಕಾರಣ. -ನೀವು ಪಿರಿಯಡ್ಸ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಿಮ್ಮ ದೇಹದಲ್ಲಿನ ವಿಟಮಿನ್-ಡಿ ಮಟ್ಟವನ್ನು ನೀವು ಪರೀಕ್ಷಿಸಿಕೊಳ್ಳಬೇಕು. -ಈ ವಿಟಮಿನ್ ಕೊರತೆಯಿಂದ ಮೂಳೆಗಳ ಸಮಸ್ಯೆ ತಕ್ಷಣವೇ ಆರಂಭವಾಗುತ್ತದೆ.

ವಿಟಮಿನ್ ಡಿ ಅಂಶವನ್ನು ದೇಹ ಪಡೆಯುವುದು ಹೇಗೆ? ಸೂರ್ಯನ ಬೆಳಕಿಗೆ ನಿತ್ಯ ಕನಿಷ್ಠ 15 ನಿಮಿಷಗಳ ಕಾಲ ಮೈಯೊಡ್ಡುವುದು ಉತ್ತಮ ಮಾರ್ಗವಾಗಿದೆ.

-ಅಣಬೆ ಸೇವನೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಕೆಲವು ಆಂಟಿಮೈಕ್ರೊಬಿಯಲ್ ಪರಿಣಾಮಗಳನ್ನು ಸಹ ಹೊಂದಿದೆ. ಅವು ಫೈಬರ್, ಪ್ರೊಟೀನ್ ಮತ್ತು ಸೆಲೆನಿಯಮ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ಫೋಲೇಟ್ ಮತ್ತು ನಿಯಾಸಿನ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ, ಜೊತೆಗೆ ಪಾಲಿಸ್ಯಾಕರೈಡ್‌ಗಳು – ಗ್ಲುಕನ್‌ಗಳು, ಸ್ಟೆರಾಲ್‌ಗಳು ಮತ್ತು ಲೆಕ್ಟಿನ್‌ಗಳಂತಹ ಫೈಟೊನ್ಯೂಟ್ರಿಯಂಟ್​ಗಳಿವೆ.