ನಾವು ಹಲ್ಲು ಮತ್ತು ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಾಯಿ ದುರ್ನಾತ ಬರಬಾರದೆಂದು ಮೌತ್ವಾಶ್, ಮೌತ್ ಫ್ರೆಷನರ್ ಏನೇ ಬಳಸಬಹುದು. ಆದರೆ, ಹಲ್ಲಿನ ಆರೋಗ್ಯ ಚೆನ್ನಾಗಿರದಿದ್ದರೆ ಅದು ನಮಗೂ, ಬೇರೆಯವರಿಗೂ ಕಿರಿಕಿರಿ ಉಂಟುಮಾಡುತ್ತದೆ. ಕೆಲವರು ದಿನಕ್ಕೆ 2 ಬಾರಿ ಬ್ರಶ್ ಮಾಡುತ್ತಾರೆ. ಆದರೆ, ಅವರಿಗೆ ಸರಿಯಾಗಿ ಹೇಗೆ ಬ್ರಶ್ ಮಾಡಬೇಕೆಂಬುದು ಗೊತ್ತಿರುವುದಿಲ್ಲ. ನೀವು ಕೂಡ ಗಟ್ಟಿಯಾಗಿ ಮತ್ತು ಗಟ್ಟಿಯಾದ ಬ್ರಶ್ನಿಂದ ಹಲ್ಲು ಉಜ್ಜುವವರಾಗಿದ್ದರೆ ಆ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದು ಉತ್ತಮ.
ನೀವು ತುಂಬಾ ಗಟ್ಟಿಯಾಗಿ ಬ್ರಷ್ ಮಾಡಿದರೆ ಏನಾಗುತ್ತದೆ ಎಂದು ಗೊತ್ತೇ? ನಿಮ್ಮ ಹಲ್ಲುಗಳನ್ನು ತುಂಬಾ ಗಟ್ಟಿಯಾಗಿ ಉಜ್ಜುವುದು ನಿಮ್ಮ ಬಾಯಿಯ ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡಬಹುದು. ಹಲ್ಲಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದರಿಂದ ನಿಮ್ಮ ದಂತಕವಚವು ನಿಧಾನವಾಗಿ ಸವೆದುಹೋಗಬಹುದು. ಇದರಿಂದ ಹಲ್ಲುಗಳು ಮತ್ತಷ್ಟು ಸೆನ್ಸಿಟಿವ್ ಆಗಬಹುದು.
ಇದನ್ನೂ ಓದಿ: ಬೆಳಗ್ಗೆ ಹಲ್ಲುಜ್ಜದೆ ಆಹಾರ ತಿನ್ನುವ ಅಭ್ಯಾಸವಿದೆಯೇ? ಇದರಿಂದ ನಿಮ್ಮ ವಸಡಿಗೆ ಮಾತ್ರವಲ್ಲ ಹೃದಯಕ್ಕೂ ಅಪಾಯ
ತುಂಬಾ ಗಟ್ಟಿಯಾಗಿ ಹಲ್ಲುಜ್ಜುವುದರಿಂದ ವಸಡು ಸಡಿಲವಾಗುತ್ತದೆ. ಇದು ನಿಮ್ಮ ನಗುವಿನ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ನಿಮ್ಮ ಹಲ್ಲುಗಳ ಬೇರುಗಳು ಹೊರಗೆ ಕಾಣಿಸಬಹುದು. ಇದರಿಂದ ಹಲ್ಲುಗಳು ಒಳಗೊಳಗೇ ಕೊಳೆಯತೊಡಗುತ್ತದೆ.
ಸರಿಯಾದ ಹಲ್ಲುಜ್ಜುವ ಯಾವುದು?:
ನೀವು ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್ ಅನ್ನು ಬಳಸಿ.
ನಿಮ್ಮ ಹಲ್ಲುಗಳ ಮೇಲೆ 45 ಡಿಗ್ರಿ ಕೋನದಲ್ಲಿ ಬ್ರಷ್ ಅನ್ನು ಹಿಡಿದುಕೊಂಡು ಬ್ರಶ್ ಮಾಡಿ.
ನಿಮ್ಮ ಒಸಡುಗಳನ್ನು ಕೂಡ ನಿಧಾನವಾಗಿ ಬ್ರಶ್ ಮಾಡಿ.
ನೀವು ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಬಳಸಿದರೆ, ನಿಮ್ಮ ಹಲ್ಲುಗಳ ಮೇಲೆ ನೀವು ಅದನ್ನು ಬಲವಾಗಿ ಒತ್ತಬೇಕಾಗಿಲ್ಲ. ಅದನ್ನು ಹಲ್ಲುಗಳ ಮೇಲೆ ಇಟ್ಟರೆ ತನ್ನಿಂತಾನೇ ಬ್ರಶ್ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ