ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಸೂಕ್ತವಾದ ಮಧ್ಯಾಹ್ನದ ಊಟ ಯಾವುದು? ಇಲ್ಲಿದೆ ವಿವರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 07, 2021 | 1:36 AM

ಮಧುಮೇಹ ಒಂದು ರೋಗವಲ್ಲ ಅದನ್ನು ಡಿಸ್ಆರ್ಡರ್ ಅಂತ ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುತ್ತದೆ. ಹಾಗಾಗಿ, ಇದನ್ನು ವಾಸಿಮಾಡಲಾಗದು ಆದರೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ನಿಯಮಿತವಾಗಿ ವೈದ್ಯರ ಸಲಹೆ ಮೇರೆಗೆ ಮೆಡಿಸಿನ್ ತೆಗೆದುಕೊಳ್ಳುತ್ತಾ ವೈದ್ಯರು ಹೇಳುವ ಆಹಾರ ಕ್ರಮವನ್ನು ಅನುಸರಿಸಿದರೆ, ಸುಲಭವಾಗಿ ಡಯಾಬಿಟೀಸ್ನೊಂದಿಗೆ ಏಗುತ್ತಾ ನೆಮ್ಮದಿಯ ಜೀವನ ನಡೆಸಬಹುದು

ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಸೂಕ್ತವಾದ ಮಧ್ಯಾಹ್ನದ ಊಟ ಯಾವುದು? ಇಲ್ಲಿದೆ ವಿವರ
ಮಧುಮೇಹಿಗಳಿಗೆ ಆಹಾರ
Follow us on

ಮಧುಮೇಹಿಗಳು ತಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟಿಕೊಳ್ಳಲು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಊಟದಲ್ಲಿ ಸ್ವಲ್ಪ ಏರುಪೇರಾದರೂ ಸಕ್ಕರೆ ಪ್ರಮಾಣ ಹೆಚ್ಚಾಗಿಬಿಡುತ್ತದೆ. ಡಯಾಬಿಟೀಸ್​ನಿಂದ ಬಳಲುವವರಿಗೆ ವೈದ್ಯರು ಆಹಾರ ಕ್ರಮ ಮತ್ತು ಔಷಧೋಪಚಾರದ ಬಗ್ಗೆ ಸಲಹೆ ನೀಡಿರುತ್ತಾರೆ. ಅದನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಮಧುಮೇಹಿಗಳಿಗೆ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿರುವುದರಿಂದ ಮತ್ತು ಅಹಾರ ಕ್ರಮವೂ ಅದರ ಭಾಗವಾಗಿರುವುದರಿಂದ ಅವರಿಗೆ ಯೋಗ್ಯ ಮತ್ತು ಸೂಕ್ತವೆನಿಸುವ ಕೆಲವು ಆಹಾರಗಳನ್ನು ಪಟ್ಟಿ ಮಾಡಲಾಗಿದೆ.

ಮಧುಮೇಹ ಒಂದು ರೋಗವಲ್ಲ ಅದನ್ನು ಡಿಸ್ಆರ್ಡರ್ ಅಂತ ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುತ್ತದೆ. ಹಾಗಾಗಿ, ಇದನ್ನು ವಾಸಿಮಾಡಲಾಗದು ಆದರೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ನಿಯಮಿತವಾಗಿ ವೈದ್ಯರ ಸಲಹೆ ಮೇರೆಗೆ ಮೆಡಿಸಿನ್ ತೆಗೆದುಕೊಳ್ಳುತ್ತಾ ವೈದ್ಯರು ಹೇಳುವ ಆಹಾರ ಕ್ರಮವನ್ನು ಅನುಸರಿಸಿದರೆ, ಸುಲಭವಾಗಿ ಡಯಾಬಿಟೀಸ್ನೊಂದಿಗೆ ಏಗುತ್ತಾ ನೆಮ್ಮದಿಯ ಜೀವನ ನಡೆಸಬಹುದು. ಓಕೆ, ಯಾವ ಆಹಾರಗಳು ಲಂಚ್ಗೆ ಉತ್ತಮ ಎನ್ನುವುದನ್ನು ನೋಡೋಣ.

ಹಸಿರು ಸೊಪ್ಪು ಮತ್ತು ತರಕಾರಿಗಳು: ಮಧುಮೇಹಿಗಳು ಹಸಿರು ಸೊಪ್ಪುಗಳನ್ನು ಮತ್ತು ತರಕಾರಿಗಳನ್ನು ತಮ್ಮ ಲಂಚ್ನಲ್ಲಿ ಸೇರಿಸಿಕೊಳ್ಳಲೇಬೇಕು. ಪಾಲಕ್, ಮೆಂತೆ, ಬ್ರೊಕ್ಕೊಲಿ. ಹೀರೆಕಾಯಿ, ಹಾಗಲಕಾಯಿ ಮುಂತಾದವೆಲ್ಲ ಕಡಿಮೆ ಕ್ಯಾಲೊರಿ ಆದರೆ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಹಸಿರು ಸೊಪ್ಪುಗಳಲ್ಲಿ ಆಂಟಿಆಕ್ಸಿಡೆಂಟ್ಗಳು ಹೇರಳವಾಗಿ ಇರುವುದರಿಂದ ಅವು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಹಾಗೆಯೇ, ಸೊಪ್ಪುಗಳು ಕಣ್ಣು ಮತ್ತು ಹೃದಯದ ಆರೋಗ್ಯಕ್ಕೆ ಬಹಳ ಸಹಕಾರಿ. ಅವುಗಳಲ್ಲಿ ವಿಟಮಿನ್ ಸಿ ಸಹ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಟೈಪ್ 2 ಡಯಾಬಿಟೀಸ್ನಿಂದ ಬಳಲುತ್ತಿರುವವರಿಗೆ ಹೆಚ್ಚು ಪ್ರಯೋಜನಕಾರಿ. ವಿಟಮಿನ್ ಸಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಧಾನ್ಯ ಮತ್ತು ಬೇಳೆಕಾಳುಗಳು: ಮಧುಮೇಹಿಗಳು ತಮ್ಮ ಮಧ್ಯಾಹ್ನದ ಊಟದಲ್ಲಿ ದ್ವಿದಳಧಾನ್ಯಗಳನ್ನು ಸೇರಿಸಿಕೊಳ್ಳಲೇಬೇಕು. ಬೇಳೆಗಳು ಹೆಚ್ಚು ಪ್ರೊಟೀನ್, ಪೊಟ್ಯಾಸಿಯಂ, ನಾರಿನಾಂಶ ಮತ್ತು ಇತರ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಗೋಧಿ ರೊಟ್ಟಿ (ಚಪಾತಿ) ಬದಲಿಗೆ, ಧಾನ್ಯಗಳ ರೊಟ್ಟಿ, ಹೊಟ್ಟು ಅಥವಾ ಮಲ್ಟಿಗ್ರೇನ್ ಹಿಟ್ಟನ ರೊಟ್ಟಿ, ಬ್ರೌನ್ ರೈಸ್, ಬಾರ್ಲಿ ಮತ್ತು ಕ್ವಿನೋವಾಗಳನ್ನು ಮೊದಲಾದವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇವು ಆರೋಗ್ಯಕರ ಕಾರ್ಬೋಹೈಡ್ರೇಟ್‌, ಫೈಬರ್, ಪ್ರೋಟೀನ್, ವಿಟಮಿನ್ ಮತ್ತು ಖನಿಜ ಪದಾರ್ಥಗಳನ್ನು ದೇಹಕ್ಕೆ ಒದಗಿಸುತ್ತವೆ.

ಮೊಟ್ಟೆ: ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಮೊಟ್ಟೆಗಳ ಸೇವನೆ ಬಹಳ ಅವಶ್ಯಕವಾಗಿದೆ. ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಬಹಳ ಪ್ರಯೋಜನವಾಗುತ್ತದೆ. ಅದರಲ್ಲಿ ಹೇರಳವಾದ ಪೋಷಕಾಂಶಗಳು, ಅಮಿನೊ ಌಸಿಡ್ಗಳಿರುತ್ತವೆ. ಮೊಟ್ಟೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಪ್ರತಿದಿನ ಮೊಟ್ಟೆ ಸೇವಿಸುವ ಮೂಲಕ ಟೈಪ್ 2 ಡಯಾಬಿಟೀಸ್ ಅಪಾಯವನ್ನೂ ದೂರ ಮಾಡಬಹುದು.

ಮೊಸರು: ಮೊಸರು ಲಂಚ್ಗೆ ಸೇರಿಸಿಕೊಂಡರೆ ಊಟದ ಮಜ ಹೆಚ್ಚುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮಧುಮೇಹಿಗಳಿಗೆ ಒಳ್ಳೆಯ ಆಹಾರ. ಇದು ರಕ್ತದಲ್ಲಿ ಆರೋಗ್ಯಕರ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹ ಇದು ಸಹಕಾರಿ.

ಕೊಬ್ಬಿನ ಮೀನು- ನೀವು ಮಾಂಸಹಾರಿಗಳಾಗಿದ್ದರೆ ತಪ್ಪದೆ ಮಧ್ಯಾಹ್ನದ ಊಟದಲ್ಲಿ ಕೊಬ್ಬಿನ ಮೀನುಗಳನ್ನು ಜೊತೆಯಾಗಿಸಿಕೊಳ್ಳಿ. ಸಾರ್ಡೀನ್, ಹೆರಿಂಗ್, ಸಾಲ್ಮನ್ ಮೀನುಗಳನ್ನು ಸಹ ತಿನ್ನಬಹುದು. ಮಧುಮೇಹಿಗಳಿಗೆ ಮೀನುಗಳು ತುಂಬಾ ಪ್ರಯೋಜನಕಾರಿ. ಮೀನಿನಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳು, ಡಿಎಚ್‌ಎ ಮತ್ತು ಇಪಿಎ ಇರುತ್ತದೆ. ಮೀನು ತಿನ್ನುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಹಾಗಾಗಿ ತಪ್ಪದೆ ಮೀನುಗಳನ್ನು ಆಹಾರದಲ್ಲಿ ಸೇರಿಸಿ.

ಇದನ್ನೂ ಓದಿ: Garam Masala Benefits: ಗರಂ ಮಸಾಲೆ ಪರಿಮಳ ಮತ್ತು ರುಚಿಗಷ್ಟೇ ಸಿಮಿತವಾಗಿಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿದೆ

 

Published On - 12:25 am, Sat, 7 August 21