Health Tips: ಹೊತ್ತುಗೊತ್ತು ಇಲ್ಲದೆ ತಿನ್ಬೇಡಿ- ರಾತ್ರಿ ಹೊಟ್ಟೆ ತುಂಬ ಊಟ ಮಾಡಿ ತಕ್ಷಣ ನಿದ್ದೆಗೆ ಜಾರುವ ಅಭ್ಯಾಸವಿದ್ದರೆ ಇಂದೇ ಬಿಟ್ಬಿಡಿ

|

Updated on: Mar 22, 2021 | 5:24 PM

ರಾತ್ರಿ ಹೊತ್ತಲ್ಲಿ ಐಸ್​ಕ್ರೀಮ್​ ಮತ್ತಿತರ ಸಿಹಿತಿಂಡಿಗಳನ್ನು ತಿಂದು ಮಲಗುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ. ರಾತ್ರಿ ಹೆಚ್ಚು ಆಹಾರ ಸೇವನೆ ಮಾಡುವುದರಿಂದ ಮೆಲಟೋನಿನ್ ಅಂಶ ಕಡಿಮೆಯಾಗಿ ನಿದ್ದೆ ಬಾರದೆ ಇರಬಹುದು.

Health Tips: ಹೊತ್ತುಗೊತ್ತು ಇಲ್ಲದೆ ತಿನ್ಬೇಡಿ- ರಾತ್ರಿ ಹೊಟ್ಟೆ ತುಂಬ ಊಟ ಮಾಡಿ ತಕ್ಷಣ ನಿದ್ದೆಗೆ ಜಾರುವ ಅಭ್ಯಾಸವಿದ್ದರೆ ಇಂದೇ ಬಿಟ್ಬಿಡಿ
ಪ್ರಾತಿನಿಧಿಕ ಚಿತ್ರ
Follow us on

ಉತ್ತಮವಾದ, ನಿಯಮಬದ್ಧವಾದ ಆಹಾರ ಪದ್ಧತಿಯಿಂದ ಆರೋಗ್ಯವನ್ನು ಖಂಡಿತ ಉತ್ತಮವಾಗಿ ಇಟ್ಟುಕೊಳ್ಳಬಹುದು. ಇತ್ತೀಚೆಗೆ ಹೆಚ್ಚಾಗುತ್ತಿರುವ ಅದೆಷ್ಟೋ ಕಾಯಿಲೆಗಳಿಗೆ ಅಸಂಬದ್ಧ ಆಹಾರ ಪದ್ಧತಿಯೇ ಕಾರಣ ಎಂಬುದನ್ನು ಹಲವು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ನಾವು ತಿನ್ನುವ ಆಹಾರ ಪೋಷಕಾಂಶಗಳಿಂದ ಕೂಡಿದ್ದರೆ, ಸಾಲದು ಅದನ್ನು ತಿನ್ನುವ ಸಮಯವೂ ಸರಿಯಾಗಿರಬೇಕು. ತಿನ್ನಬೇಕು.. ಹೊಟ್ಟೆ ತುಂಬಿಸಿಕೊಳ್ಳಬೇಕು ಎಂದು ಯಾವಾಗಂದ್ರೆ ಆವಾಗ ತಿನ್ನುವುದರಿಂದ ಆರೋಗ್ಯಕ್ಕೆ ತೊಂದರೆಯೇ ಹೊರತು, ಉಪಯೋಗವೇನೂ ಇಲ್ಲ.

ನೀವೇನು ತಿನ್ನುತ್ತಿರೋ ಅದು ಸರಿಯಾಗಿ ಜೀರ್ಣವಾಗಬೇಕು. ದೇಹಕ್ಕೆ ಆಹಾರದ ರೂಪದಲ್ಲಿ ಸೇರುವ ಕ್ಯಾಲರಿ ಬರ್ನ್ ಆಗದೆ ಇದ್ದರೆ, ಅದು ಕೆಟ್ಟ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತ ಹೋಗುತ್ತದೆ. ಹಾಗಾಗಿ ದಿನದ ಅಂತ್ಯ.. ಅಂದರೆ ಸಂಜೆ ಹೊತ್ತಿಗೆ ತುಂಬ ತಿನ್ನಬಾರದು ಎನ್ನುತ್ತಾರೆ ಆಹಾರ ತಜ್ಞರಾದ ಟ್ರೇಸಿ ಲಾಕ್​ವುಡ್​. ರಾತ್ರಿ ಮಲಗಲು ಕೆಲವೇ ಹೊತ್ತು ಇರುವಾಗ ತುಂಬ ಆಹಾರ ತಿನ್ನಬಾರದು. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ. ಹಾಗೇ, ಆದಷ್ಟು ಕಡಿಮೆ ತಿನ್ನಬೇಕು. ನಿದ್ದೆ ಮಾಡುವುದಕ್ಕೂ ಕನಿಷ್ಠ ಮೂರು ತಾಸು ಮೊದಲು ಆಹಾರ ಸೇವಿಸಿರಬೇಕು. ತಡರಾತ್ರಿ ಊಟ ಮಾಡುವುದರಿಂದ, ಹೆಚ್ಚಿನ ಆಹಾರ ಸೇವನೆಯಿಂದ ದೇಹದ ತೂಕ ಹೆಚ್ಚುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದೂ ಟ್ರೇಸಿ ತಿಳಿಸಿದ್ದಾರೆ.

ರಾತ್ರಿ ಆಹಾರ ಸೇವನೆ ಯಾಕೆ ಒಳ್ಳೆಯದಲ್ಲ?
ರಾತ್ರಿ ಊಟ ಮಾಡುವುದೇ ಬೇಡ ಎಂದಲ್ಲ. ಕೊಬ್ಬಿನ ಅಂಶ, ಸಕ್ಕರೆ ಅಂಶ ಹೊಂದಿರುವ ಆಹಾರ ಸೇವನೆ ಒಳ್ಳೆಯದಲ್ಲ. ಅದರಲ್ಲೂ ನಾವು ಮಲಗುವ ಮೂರು ತಾಸು ಮೊದಲು ಆಹಾರ ಸೇವನೆ ಮಾಡುವುದು ಒಳಿತು ಎನ್ನುವ ಆಹಾರ ತಜ್ಞರು.. ರಾತ್ರಿ ಔತಣಕೂಟಗಳಂತೂ ಒಳ್ಳೆಯದಲ್ಲವೇ ಅಲ್ಲ ಎನ್ನುತ್ತಾರೆ. ರಾತ್ರಿ ಹೆಚ್ಚಿನ ಆಹಾರ ಸೇವಿಸುವುದು ಯಾಕಾಗಿ ಒಳ್ಳೆಯದಲ್ಲ ಎಂಬುದಕ್ಕೆ ಕೆಲವು ಕಾರಣಗಳನ್ನೂ ಕೊಡುತ್ತಾರೆ.

ರಾತ್ರಿ ಹೊತ್ತಲ್ಲಿ ಇರುವ ಕಡಿಮೆ ಬೆಳಕು ಮತ್ತು ನಮ್ಮಲ್ಲಿನ ನಿದ್ದೆ-ಎಚ್ಚರ ಸ್ಥಿತಿಯನ್ನು ನಿಯಂತ್ರಿಸುವ ಅಂಶವಾದ ಸಿರ್ಕಾಡಿಯನ್ ರಿದಮ್, ಸಿಹಿ ಪದಾರ್ಥಗಳನ್ನು ತಿನ್ನುವಂತೆ ನಮ್ಮನ್ನು ಪ್ರೇರೇಪಿಸುತ್ತಿರುತ್ತದೆ. ಆದರೆ ಹಾಗೆ ರಾತ್ರಿ ಹೊತ್ತಲ್ಲಿ ಐಸ್​ಕ್ರೀಮ್​ ಮತ್ತಿತರ ಸಿಹಿತಿಂಡಿಗಳನ್ನು ತಿಂದು ಮಲಗುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ. ರಾತ್ರಿ ಹೆಚ್ಚು ಆಹಾರ ಸೇವನೆ ಮಾಡುವುದರಿಂದ ಮೆಲಟೋನಿನ್ ಅಂಶ ಕಡಿಮೆಯಾಗಿ ನಿದ್ದೆ ಬಾರದೆ ಇರಬಹುದು. ಇನ್ನು ಹೊಟ್ಟೆ ತುಂಬ ಊಟ ಮಾಡಿ ತಕ್ಷಣ ಮಲಗುವುದರಿಂದ ದೇಹದಲ್ಲಿ ಆಮ್ಲದ ಹಿಮ್ಮುಖ ಹರಿವು ಉಂಟಾಗುತ್ತದೆ. ಇದೆಲ್ಲದರಿಂದ ಹಲವು ಆರೋಗ್ಯ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ವಾಲ್​ನಟ್​ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂಬ ಆತಂಕ ಬಿಡಿ.. ನಿಯಮಿತವಾಗಿ ಸೇವಿಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ

Iron Deficiency: ರಕ್ತಹೀನತೆ ಬಗ್ಗೆ ಬೇಡ ನಿರ್ಲಕ್ಷ್ಯ.. ನೂರೆಂಟು ಅಪಾಯ ತರುವ ಅನೀಮಿಯಾ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ

Published On - 5:22 pm, Mon, 22 March 21