AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Iron Deficiency: ರಕ್ತಹೀನತೆ ಬಗ್ಗೆ ಬೇಡ ನಿರ್ಲಕ್ಷ್ಯ.. ನೂರೆಂಟು ಅಪಾಯ ತರುವ ಅನೀಮಿಯಾ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ

ದೇಹದಲ್ಲಿ ಸಣ್ಣಪ್ರಮಾಣದಲ್ಲಿ ರಕ್ತಹೀನತೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಅದು ಅಷ್ಟುಬೇಗ ಗೊತ್ತಾಗುವುದೂ ಇಲ್ಲ. ಆದರೆ ಕೆಂಪುರಕ್ತದ ಕಣಗಳ ಪ್ರಮಾಣ ಕಡಿಮೆಯಾಗುತ್ತ ಹೋದಂತೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ.

Iron Deficiency: ರಕ್ತಹೀನತೆ ಬಗ್ಗೆ ಬೇಡ ನಿರ್ಲಕ್ಷ್ಯ.. ನೂರೆಂಟು ಅಪಾಯ ತರುವ ಅನೀಮಿಯಾ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Mar 16, 2021 | 7:08 PM

Share

ನಮ್ಮ ದೇಹ ಸದೃಢವಾಗಿ, ಆರೋಗ್ಯವಾಗಿ ಇರಬೇಕೆಂದರೆ ಎಲ್ಲ ರೀತಿಯ ವಿಟಮಿನ್​ಗಳು, ಖನಿಜಾಂಶಗಳು, ಪೋಷಕಾಂಶಗಳು ಹದ ಪ್ರಮಾಣದಲ್ಲಿ ಬೇಕಾಗುತ್ತದೆ. ಎಲ್ಲ ರೀತಿಯ ಪೋಷಕಾಂಶಗಳನ್ನೂ ನಾವು ಆಹಾರದ ಮೂಲಕವೇ ಪಡೆಯಬಹುದು. ಆದರೂ ಭಾರತದಲ್ಲಿ ಬಹುಪಾಲು ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆ ಎಂಬುದು ಎಡಬಿಡದೆ ಕಾಡುತ್ತಿದೆ. ಅದೂ ಹೆಚ್ಚಾಗಿ ಮಹಿಳೆಯರಲ್ಲೇ ಕಾಣಿಸಿಕೊಳ್ಳುವ ಇದು ಹಲವು ಕಾಯಿಲೆಗಳನ್ನು ಹೊತ್ತು ತರಬಲ್ಲದು.

ನಮ್ಮ ದೇಹದಲ್ಲಿ ನಿರ್ದಿಷ್ಟ ಕೆಂಪು ರಕ್ತಕಣಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕು. ಅದಕ್ಕಿಂತಲೂ ಕಡಿಮೆ ಆದಾಗ ಅದು ಅನೀಮಿಯಾ ಅಥವಾ ರಕ್ತಹೀನತೆ ಎನ್ನಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ಕಬ್ಬಿಣಾಂಶ ಕಡಿಮೆ ಆಗುವುದು. ತುರ್ತು ಪರಿಸ್ಥಿತಿಗಳಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ. ಆದರೆ ರಕ್ತಹೀನತೆಯಿಂದ ಪಾರಾಗಲು ನಾವು ನಿತ್ಯ ಬಳಸುವ ಆಹಾರದಲ್ಲೇ ಕೆಲವು ಬದಲಾವಣೆ ಮಾಡಿಕೊಳ್ಳಬಹುದು. ಕಬ್ಬಿಣದ ಅಂಶ ಹೆಚ್ಚು ಇರುವ ಆಹಾರಗಳನ್ನು ಸೇವಿಸಬೇಕು. ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆ ಆದರೆ ಆಗುವ ಸಮಸ್ಯೆಗಳು ಅನೇಕ. ತೀವ್ರ ಕಡಿಮೆಯಾದಾಗ ಸರಿಯಾದ ಸಮಯದಲ್ಲಿ ಚಿಕಿತ್ಸೆ ಬೀಳದಿದ್ದರೆ ಪ್ರಾಣಕ್ಕೂ ಅಪಾಯ ಕಟ್ಟಿಟ್ಟಬುತ್ತಿ. ಹೀಗಾದಾಗ ದೇಹದ ಬಗ್ಗೆ ಗಮನ ಇರಬೇಕು. ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ, ವೈದ್ಯರ ಬಳಿ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಆರ್​ಬಿಸಿ ಕೌಂಟ್​ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ರಕ್ತಹೀನತೆಯ ಲಕ್ಷಣಗಳೇನು? ದೇಹದಲ್ಲಿ ಸಣ್ಣಪ್ರಮಾಣದಲ್ಲಿ ರಕ್ತಹೀನತೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಅದು ಅಷ್ಟುಬೇಗ ಗೊತ್ತಾಗುವುದೂ ಇಲ್ಲ. ಆದರೆ ಕೆಂಪುರಕ್ತದ ಕಣಗಳ ಪ್ರಮಾಣ ಕಡಿಮೆಯಾಗುತ್ತ ಹೋದಂತೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಅದರಲ್ಲಿ ಪ್ರಮುಖವಾಗಿ

  • ಬಳಲಿಕೆ
  • ಚರ್ಮದ ಬಣ್ಣ ಪೇಲವ ಅಥವಾ ಹಳದಿ ಬಣ್ಣಕ್ಕೆ ತಿರುಗುವುದು
  • ಹೃದಯಬಡಿತದಲ್ಲಿ ಏರುಪೇರು
  • ಉಸಿರಾಟದಲ್ಲಿ ತೊಂದರೆ
  • ತಲೆ ತಿರುಗುವುದು, ತಲೆ ನೋವು
  • ಎದೆನೋವು, ಸ್ನಾಯುನೋವು
  • ಅಂಗಾಲು, ಅಂಗೈಗಳು ತಣ್ಣಗೆ ಆಗುವುದು
  • ಉಗುರುಗಳಲ್ಲಿ ಬಿರುಕು, ಒಡೆಯುವುದು, ಕೂದಲು ಉದುರುವುದು
  • ಬಾಯಿಯ ಬದಿಯಲ್ಲಿ ಒಡೆಯುವುದು
  • ನಾಲಿಗೆ ಊದಿಕೊಳ್ಳುವುದು, ನೋಯುವುದು
  • ಕಾಲುಗಳಲ್ಲಿ ವಿಪರೀತ ಸೆಳೆತ
  • ಕಣ್ಣುಗಳು ಒಳಹೋದಂತಾಗಿ, ಪೇಲವಗೊಳ್ಳುವುದು.

ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ವಿಧದಲ್ಲಿ ರಕ್ತಹೀನತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಧ್ಯವಾದಷ್ಟು ಅದನ್ನು ಗುರುತಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಒಂದೊಮ್ಮೆ ನಿರ್ಲಕ್ಷಿಸುತ್ತ ಹೋದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಈ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು..

  • ಖಿನ್ನತೆಗೆ ಜಾರಬಹುದು
  • ರೋಗನಿರೋಧಕ ಶಕ್ತಿ ಕುಂದುತ್ತದೆ
  • ಯಾವುದೇ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹ ಕಳೆದುಕೊಳ್ಳುತ್ತದೆ
  • ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ರಕ್ತಹೀನತೆಯಿಂದ ಅವಧಿ ಪೂರ್ವವೇ ಮಗು ಹುಟ್ಟುವ ಸಾಧ್ಯತೆ ಇರುತ್ತದೆ
  • ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರು ಜನ್ಮ ನೀಡುವ ಮಗುವಿನ ತೂಕ ಕಡಿಮೆ ಇರುತ್ತದೆ
  • ಕಡಿಮೆ ರಕ್ತಕಣಗಳಿಂದ ಹೃದಯಕ್ಕೆ ಸರಿಯಾಗಿ ಪಂಪ್​ ಮಾಡಲು ಸಾಧ್ಯವಾಗುವುದಿಲ್ಲ ಹೀಗಾದಾಗ ಒತ್ತಡ ಬೀಳುತ್ತದೆ. ಇದು
  • ಕೆಲವು ಹೃದಯ ಸಮಸ್ಯೆಗೂ ಕಾರಣವಾಗಬಹುದು.

ರಕ್ತಹೀನತೆಗೆ ಖಂಡಿತ ಒಳ್ಳೆಯ ಚಿಕಿತ್ಸೆ ಇದೆ. ಕೆಲವು ಮಾತ್ರೆಗಳು, ಟಾನಿಕ್​​ಗಳನ್ನೂ ಕೊಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ಸಿ ಜೀವಸತ್ವ ಹೆಚ್ಚಿರುವ ಆಹಾರಗಳನ್ನು ಸೇವಿಸಲು ಹೇಳುತ್ತಾರೆ. ಸರಿಯಾದ ಆಹಾರ, ಪೂರಕ ಔಷಧಗಳಿಂದ ಕೆಂಪುರಕ್ತಕಣಗಳ ಪ್ರಮಾಣ ವೇಗವಾಗಿ ಹೆಚ್ಚುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನಿಮಗೇ ಗೊತ್ತಾಗುತ್ತದೆ. ಅದಕ್ಕೂ ಮಿಗಿಲಾಗಿ ರಕ್ತ ಹೀನತೆಯಿಂದ ಪಾರಾಗಲು ನಾವು ಕೆಲವು ಹಣ್ಣು, ತರಕಾರಿಗಳನ್ನು ಸೇವಿಸಬೇಕು.

ಹಸಿರು ತರಕಾರಿ, ಸೊಪ್ಪುಗಳು, ಒಣಹಣ್ಣುಗಳು, ಸಿ ವಿಟಮಿನ್​ ಇರುವ ಕಿತ್ತಳೆ ಹಣ್ಣು, ಸ್ಟ್ರಾಬೆರಿ, ಬಟಾಣಿ, ಬೀನ್ಸ್​ಗಳನ್ನು ಸೇವಿಸಬೇಕು. ಇನ್ನು ಚಿಕನ್​, ಕೆಂಪು ಮಾಂಸಗಳೂ ರಕ್ತಹೀನತೆ ನಿವಾರಿಸುವ ಆಹಾರಗಳು ಎಂದು ಪರಿಗಣಿಸಲ್ಪಡುತ್ತವೆ.

ಇದನ್ನೂ ಓದಿ:  Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..

ಬಾಯಿ ದುರ್ವಾಸನೆ ಬರೋಕೆ ಈ ಐದು ಆಹಾರಗಳು ಕಾರಣವಾಗಬಹುದು..

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ