ವಯಸ್ಸಾದಂತೇ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯ. ಪ್ರಾಯದಲ್ಲಿದ್ದಾಗ ಕಪ್ಪು ಬಣ್ಣದಲ್ಲಿದ್ದ ಕೂದಲು ವಯಸ್ಸಾದಂತೆಯೇ ಬದಲಾಯಿತು. ಆಗ ಅದೆಷ್ಟು ಚಂದದ ಕೂದಲಿತ್ತು. ಇದೀಗ ಕೂದಲುಗಳೆಲ್ಲ ಉದುರುತ್ತಿವೆ. ಬಣ್ಣ ಕೂಡಾ ಬದಲಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಅದೆಷ್ಟು ಉದ್ದನೇಯ ಕೂದಲಿತ್ತು. ಕಾಲಾನಂತರ ಕೂದಲು ಉದುರುವ ಸಮಸ್ಯೆ ಕಾಡತೊಡಗಿತ್ತು. ಏಕೆ ಹೀಗೆ ಆಗುತ್ತಿದೆ? ಎಂದೆಲ್ಲಾ ಚಿಂತೆ ಮೂಡುವುದು ಸಹಜ. ಇವುಗಳಿಗೆ ಕಾರಣವೇನಿರಬಹುದು ಎಂಬುದನ್ನು ತಿಳಿದುಕೊಳ್ಳಿ.
ದೇಹವು ಕೂದಲಿನ ಕಿರು ಚೀಲಗಳನ್ನು ಹೊಂದಿರುತ್ತದೆ. ಅವುಗಳು ಮೆಲನಿನ್ ಎಂದು ಕರೆಯಲ್ಪಡುವ ವರ್ಣದ್ರವ್ಯ ಕೋಶಗಳನ್ನು ಹೊಂದಿರುತ್ತದೆ. ಈ ಕೋಶಗಳು ನಿಮ್ಮ ಕೂದಲಿಗೆ ಬಣ್ಣವನ್ನು ನೀಡುತ್ತದೆ. ಆದರೆ ಕಾಲಾನಂತರದಲ್ಲಿ ಕೂದಲ ಕಿರು ಚೀಲಗಳು ವರ್ಣದ್ರವ್ಯವನ್ನು ಕಳೆದುಕೊಳ್ಳಬಹುದು. ಇದರ ಪರಿಣಾಮವಾಗಿ ಬಿಳಿ ಕೂದಲು ಹುಟ್ಟಿಕೊಳ್ಳುತ್ತವೆ.
ಚಿಕ್ಕ ವಯಸ್ಸಿನವರಿಗೆ ಬಿಳಿ ಕೂದಲು ಕಾಣಿಸಿಕೊಳ್ಳಲು ಕಾರಣವೇನು?
ಬಿಳಿ ಕೂದಲು ವಯಸ್ಸಾಗಿದ್ದವರ ಲಕ್ಷಣವಾಗಿದ್ದರೂ, ಇದೀಗ ಹೆಚ್ಚು ಹದಿಹರೆಯದವರಲ್ಲಿ ಕಂಡು ಬರುತ್ತಿದೆ. ಶಾಲೆಗೆ ಹೋಗುವ ಮಕ್ಕಳಲ್ಲಿ ಅಥವಾ 20ರ ಹರೆಯಲ್ಲಿ ಬಿಳಿ ಕೂದಲು ಕಂಡು ಬರುತ್ತಿದೆ.
ಕೂದಲಿಗೆ ರಾಸಾಯನಿಕ ತೈಲಗಳನ್ನು ಬಳಸುವುದು
ಹದಿಹರೆಯದವರಲ್ಲಿ ಮೇಕ್ಅಪ್ ಕ್ರೇಜ್ ಹೆಚ್ಚಾಗಿರುತ್ತದೆ. ಕೂದಲಿಗೆ ವಿವಿಧ ಸ್ಟೈಲ್ ಜೊತೆಗೆ ರಾಸಾಯನಿಕದಿಂದ ಕೂಡಿದ ವಿವಿಧ ತೈಲಗಳನ್ನು ಬಳಸುತ್ತೀರಿ ಇದರಿಂದ ಬಹುಬೇಗ ಬಿಳಿ ಬಣ್ಣದ ಕೂದಲುಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ.
ಒತ್ತಡ
ಪ್ರತಿಯೊಬ್ಬರೂ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ. ಇದರ ಅತಿರೇಕತೆಯಿಂದ ಪರಿಣಾಮಗಳು ಉಂಟಾಗಬಹುದು. ಹೆಚ್ಚು ಆತಂಕ, ನಿದ್ರೆ ಬಾರದಿರುವುದು, ಹಸಿವಾಗದಿರುವುದು ಜತೆಗೆ ತೀವ್ರ ರಕ್ತದೊತ್ತಡದಿಂದ ಬಿಳಿ ಕೂದಲು ಹುಟ್ಟಿಕೊಳ್ಳುತ್ತವೆ.
ಥೈರಾಯ್ಡ್ ಸಮಸ್ಯೆ
ಥೈರಾಯ್ಡ್ ಸಮಸ್ಯೆಯಿಂದ ಉಂಟಾಗುವ ಹಾರ್ಮೋನ್ಗಳ ಬದಲಾವಣೆಗಳು ಕೂದಲ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕಾಡಬಹುದು ಜತೆಗೆ ಬಿಳಿ ಕೂದಲು ಹುಟ್ಟಿಕೊಳ್ಳಬಹುದು.
ಧೂಮಪಾನ
ಧೂಮಪಾನ ಮಾಡುವುದು ಶ್ವಾಸಕೋಶ ಕ್ಯಾನ್ಸರ್ ಮತ್ತು ಹೃದಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ಜತೆಗೆ ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಕೂದಲು ಉದುರುವಿಕೆ ಮತ್ತು ಬಿಳಿ ಕೂದಲು ಹುಟ್ಟಿಕೊಳ್ಳಲು ಕಾರಣವಾಗುತ್ತದೆ.
ಬಿಳಿ ಕೂದಲು ನಿಯಂತ್ರಣ ಸಾಧ್ಯವೇ?
ಆರೋಗ್ಯದಲ್ಲಿ ಮತ್ತು ಆಹಾರದಲ್ಲಿ ಕಾಳಜಿ ವಹಿಸಿದರೆ ಬಿಳಿ ಕೂದಲು ಹುಟ್ಟದಂತೆ ನಿಯಂತ್ರಿಸಬಹುದು. ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯಲು ವೈದ್ಯರನ್ನು ಸಂಪರ್ಕಿಸಿ. ಆದಷ್ಟು ರೋಗಗಳು ಬಾರದಂತೆ ಎಚ್ಚರವಹಿಸಿ. ಹಸಿರಿನ ಅಂಶವುಳ್ಳ ಆಹಾರ ಪದಾರ್ಥ ಅಂದರೆ ನವಿಲುಕೋಸು, ಮೂಲಂಗಿಯಂತಹ ತರಕಾರಿಗಳು ಜತೆಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಪದಾರ್ಥವನ್ನು ಆಹಾರ ಸೇವನೆಯಲ್ಲಿ ಅಳವಡಿಕೊಳ್ಳಿ.
ಇದನ್ನೂ ಓದಿ: Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು
Published On - 7:09 am, Fri, 21 May 21