ಸಾಮಾನ್ಯವಾಗಿ ಮಧುಮೇಹದ (Diabetes) ಸಮಸ್ಯೆ ಹೊಂದಿರುವ ರೋಗಿಗಳಿಗೆ ಯಾವುದಾದರೂ ಗಾಯವಾದರೆ ಅದು ವಾಸಿಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೆ ಕಾರಣವೇನು? ಎಂಬುದರ ಬಗ್ಗೆ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯ ಮತ್ತು ಯುಪಿಎಂಸಿಯ ಸಂಶೋಧಕರ ನೇತೃತ್ವದ ಹೊಸ ನ್ಯಾನೋ ಟುಡೇ ಅಧ್ಯಯನ ಮಾಹಿತಿ ನೀಡಿದೆ. ಮಧುಮೇಹ ಹೊಂದಿರುವ ಜನರು ದೋಷಯುಕ್ತವಾದ ಎಕ್ಸೋಸೋಮ್‌ಗಳನ್ನು ಹೊಂದಿರುತ್ತಾರೆ ಎಂಬುದು ಈ ಅಧ್ಯಯನದಲ್ಲಿ ಪತ್ತೆಯಾಗಿದೆ. ಈ ಎಕ್ಸೋಸೋಮ್‌ಗಳು ಉರಿಯೂತವನ್ನು ಉಂಟುಮಾಡುತ್ತದೆ. ಹಾಗೇ, ಗಾಯದ ಗುಣಪಡಿಸುವಿಕೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿಯೇ ಮಧುಮೇಹಿಗಳ ಗಾಯಗಳು ಬೇಗ ವಾಸಿಯಾಗುವುದಿಲ್ಲ.
ಈ ದೋಷಪೂರಿತ ಎಕ್ಸೋಸೋಮ್‌ಗಳು ಮಧುಮೇಹಿಗಳ ದೀರ್ಘಕಾಲದ ಗಾಯವನ್ನು ಗುಣಪಡಿಸುವುದನ್ನು ಉತ್ತೇಜಿಸುವ ಜೀವಕೋಶಗಳಿಗೆ ಅಗತ್ಯ ಸಂದೇಶಗಳನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಪಿಟ್‌ನಲ್ಲಿನ ಶಸ್ತ್ರಚಿಕಿತ್ಸೆಯ ಸಹಾಯಕ ಪ್ರಾಧ್ಯಾಪಕರಾದ ಸುಭಾದೀಪ್ ಘಾಟಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಲವಂಗದ ಬಗ್ಗೆ ನೀವು ಕೇಳಿರದ ಅಚ್ಚರಿಯ ಮಾಹಿತಿ ಇಲ್ಲಿದೆ
“ಮಧುಮೇಹ ರೋಗಿಗಳಲ್ಲಿ ಹೆಚ್ಚಿನ ಉರಿಯೂತದ ಕಾರಣದಿಂದ ಗಾಯದ ಗುಣಪಡಿಸುವಿಕೆಯು ನಿಧಾನವಾಗುತ್ತದೆ” ಎಂದು ಪಿಟ್‌ನಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ಪ್ರಾಧ್ಯಾಪಕ ಮತ್ತು ಯುಪಿಎಂಸಿಯ ಮುಖ್ಯ ವೈಜ್ಞಾನಿಕ ಅಧಿಕಾರಿಯಾಗಿರುವ ಮೆಕ್‌ಗೋವಾನ್ ಇನ್‌ಸ್ಟಿಟ್ಯೂಟ್ ಫಾರ್ ರಿಜೆನೆರೇಟಿವ್ ಮೆಡಿಸಿನ್‌ನ ನಿರ್ದೇಶಕ ಡಾ. ಚಂದನ್ ಸೇನ್ ಹೇಳಿದ್ದಾರೆ.
ಇದನ್ನೂ ಓದಿ: Tomato: ಮಧುಮೇಹಿಗಳು ಟೊಮೇಟೊ ತಿನ್ನಬಹುದೇ? ಗರ್ಭಿಣಿಯರೂ ಟೊಮೆಟೊಗಳನ್ನು ತಿನ್ನಬಹುದೇ?
ಚಿಕಿತ್ಸೆ ನೀಡದೆ ಬಿಟ್ಟರೆ ಈ ವಾಸಿಯಾಗದ ಅಥವಾ ದೀರ್ಘಕಾಲದ ಗಾಯಗಳು ಆ ಅಂಗಕ್ಕೆ ಹಾನಿಯುಂಟು ಮಾಡಬಹುದು. ಪ್ರತಿ ವರ್ಷ ಅಮೆರಿಕಾದಲ್ಲಿ 1,00,000ಕ್ಕೂ ಹೆಚ್ಚು ಮಧುಮೇಹ ಸಂಬಂಧಿತ ಅಂಗಚ್ಛೇದನಗಳು ಸಂಭವಿಸುತ್ತವೆ. ಆದರೆ ಗಾಯವನ್ನು ಗುಣಪಡಿಸಲು ಹೊಸ ಚಿಕಿತ್ಸೆಗಳನ್ನು ಕಂಡುಹಿಡಿಯುವ ಮೂಲಕ ಈ ಸಂಖ್ಯೆಯನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.