
ಗೊರಕೆ (Snore) ನಿದ್ರೆಗೆ ಭಂಗ ತರುವುದು ಮಾತ್ರವಲ್ಲ, ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ ಎಂಬುದು ತಿಳಿದಿರಬಹುದು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಗೊರಕೆ ಹೊಡೆಯುತ್ತಾರೆ. ಆದರೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಗೊರಕೆ ಹೊಡೆಯುತ್ತಾರೆಯೇ ಎಂಬ ಅನುಮಾನ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪುರುಷರು ಮಹಿಳೆಯರಿಗಿಂತ ಸುಮಾರು 2 ರಿಂದ 3 ಪಟ್ಟು ಹೆಚ್ಚು ಗೊರಕೆ ಹೊಡೆಯುವ ಸಾಧ್ಯತೆ ಇದ್ದು, ವಯಸ್ಸು ಹೆಚ್ಚಾದಂತೆ ಮಹಿಳೆಯರಿಗೂ ಈ ರೀತಿಯ ಸಮಸ್ಯೆ ಕಾಡುತ್ತದೆ. ಆದರೆ ಪುರುಷರು ಮಾತ್ರ ಮಹಿಳೆಯರಿಗಿಂತ ಹೆಚ್ಚು ಪ್ರಭಾವಿತರಾಗುತ್ತಾರೆ. ಹಾಗಾದರೆ ಇದಕ್ಕೆ ಕಾರಣವೇನು, ಯಾಕೆ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವಿ ಮಹಾರ್ ಹೇಳುವ ಪ್ರಕಾರ, ಪುರುಷರು ಹೆಚ್ಚು ಗೊರಕೆ ಹೊಡೆಯಲು ಹಲವಾರು ಕಾರಣಗಳಿವೆ. ಪುರುಷರ ಗಂಟಲಿನಲ್ಲಿ ವಾಯುಮಾರ್ಗವು ಮಹಿಳೆಯರಿಗೆ ಹೋಲಿಸಿದರೆ ಕಿರಿದಾಗಿರುತ್ತದೆ. ಇದು ನಿದ್ರೆಯ ಸಮಯದಲ್ಲಿ ಉಸಿರಾಡುವಾಗ ಹೆಚ್ಚು ಕಂಪನವನ್ನು ಉಂಟುಮಾಡುತ್ತದೆ, ಇದು ಗೊರಕೆಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳು ವಾಯುಮಾರ್ಗ ಸ್ನಾಯುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಆದರೆ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಕಡಿಮೆಯಾಗಲು ಪ್ರಾರಂಭಿಸಿದಾಗ ಈ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ವಯಸ್ಸು ಹೆಚ್ಚಾದಂತೆ ಈ ಸಮಸ್ಯೆ ಕೂಡ ಹೆಚ್ಚಾಗಬಹುದು. ಇನ್ನೊಂದು ಕಾರಣವೆಂದರೆ ಪುರುಷರಲ್ಲಿ ಗಂಟಲಿನ ಸುತ್ತಲೂ ಮತ್ತು ಸುತ್ತಮುತ್ತಲಿನ ಸ್ನಾಯುಗಳಲ್ಲಿ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಿನ ಕೊಬ್ಬು ಇರುತ್ತದೆ. ಇದು ಗೊರಕೆ ಹೆಚ್ಚಾಗಲು ಕಾರಣವಾಗುತ್ತದೆ.
ಇದನ್ನೂ ಓದಿ: ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ
ಗೊರಕೆ ಎಂದರೆ ನಿಮ್ಮ ಉಸಿರಾಟದ ಮಾರ್ಗ, ಅಂದರೆ ನಿಮ್ಮ ಮೂಗು ಮತ್ತು ಗಂಟಲು ಸಂಪೂರ್ಣವಾಗಿ ತೆರೆದುಕೊಂಡಿಲ್ಲ ಎಂದರ್ಥ. ಇದು ನೀವು ಉಸಿರಾಡುವಾಗ ಮತ್ತು ಬಿಡುವಾಗ ಗಂಟಲಿನಲ್ಲಿರುವ ಅಂಗಾಂಶಗಳು ಕಂಪಿಸುವಂತೆ ಮಾಡುತ್ತದೆ. ಇದನ್ನು ಗೊರಕೆ ಎಂದು ಕರೆಯಲಾಗುತ್ತದೆ. ಇದಕ್ಕೆ ಬೊಜ್ಜು ಹೆಚ್ಚಾಗುವುದು, ಟಾನ್ಸಿಲ್‌ಗಳು, ಮೂಗಿನಲ್ಲಿ ರಚನಾತ್ಮಕ ಸಮಸ್ಯೆಗಳು ಮತ್ತು ನಿದ್ರೆಯ ಕೊರತೆ ಮುಂತಾದ ಹಲವು ಕಾರಣಗಳಿವೆ. ಸೌಮ್ಯವಾದ ಗೊರಕೆ ಸಮಸ್ಯೆಯಲ್ಲ, ಆದರೆ ಈ ಸಮಸ್ಯೆ ಮುಂದುವರಿದರೆ ನೀವು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಅದು ಸ್ಲೀಪ್ ಅಪ್ನಿಯಾದ ಸಂಕೇತವಾಗಿರಬಹುದು. ಈ ಸಮಸ್ಯೆಯಲ್ಲಿ ನಿದ್ದೆ ಮಾಡುವಾಗ ಕೆಲವು ಸೆಕೆಂಡುಗಳ ಕಾಲ ಉಸಿರಾಟ ನಿಲ್ಲುತ್ತದೆ, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ