ಆರಾಮಾಗಿ ಸ್ನಾನ ಮಾಡಿಕೊಂಡು, ರಿಫ್ರೆಶ್ ಆಗಬೇಕೆಂದು ಬಾತ್ರೂಮಿಗೆ ಹೋಗಿ ಮನಸಿಗೆ ನೆಮ್ಮದಿಯಾಗುವಷ್ಟು ಹೊತ್ತು ಸ್ನಾನ ಮಾಡಿಕೊಂಡು ಬರುತ್ತೀರಿ. ಆದರೆ, ಅಷ್ಟರಲ್ಲಾಗಲೆ ನಿಮ್ಮ ಮೈ ಬೆವರಲು ಶುರುವಾಗುತ್ತದೆ. ಸ್ನಾನ ಮಾಡಿದ ಕೆಲವೇ ಹೊತ್ತಿನಲ್ಲಿ ಮತ್ತೆ ದೇಹದಿಂದ ಬೆವರಿನ ವಾಸನೆ ಬರಲಾರಂಭಿಸಿ, ನಿಮಗೇ ಕಿರಿಕಿರಿಯಾಗತೊಡಗುತ್ತದೆ. ಈ ರೀತಿಯಾದಾಗ ಏನು ಮಾಡಬೇಕು? ಸ್ನಾನ ಮಾಡಿದ ಕೂಡಲೆ ಮೈ ಬೆವರಲು ಕಾರಣವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ನೀವು ಬಿಸಿ ನೀರಿನಲ್ಲಿ ಸ್ನಾನ ಮಾಡುವಾಗ ನೀರಿನಿಂದ ಬೆಚ್ಚಗಿನ ಆವಿಗಳು ಬಾತ್ರೂಮಿನಲ್ಲಿ ತಾಪಮಾನ ಮತ್ತು ತೇವಾಂಶದ ಏರಿಕೆಗೆ ಕಾರಣವಾಗುತ್ತವೆ. ಇದು ನಿಮ್ಮ ದೇಹದ ಉಷ್ಣತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಮೈ ಬೆವರತೊಡಗುತ್ತದೆ.
ಇದನ್ನೂ ಓದಿ: Sweating: ಈ ಬೇಸಿಗೆಯಲ್ಲಿ ಅತಿಯಾಗಿ ಬೆವರುವುದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಲಹೆ
ಸ್ನಾನ ಮಾಡಿದ ನಂತರ ತಕ್ಷಣವೇ ನಿಮ್ಮ ಮೈಯನ್ನು ಟವೆಲ್ನಿಂದ ಒರೆಸಿಕೊಳ್ಳುವುದರಿಂದ ಬೆವರುವಿಕೆಯನ್ನು ತಪ್ಪಿಸಬಹುದು ಎಂದು ನೀವು ಭಾವಿಸಬಹುದು. ಆದರೆ, ಅದು ಬೇರೆ ರೀತಿಯಲ್ಲಿ ಕೆಲಸ ಮಾಡಬಹುದು. ನಿಮ್ಮ ಚರ್ಮದ ಮೇಲೆ ಟವೆಲ್ ಅನ್ನು ಉಜ್ಜಿದಾಗ ಉಂಟಾಗುವ ಘರ್ಷಣೆಯ ಶಾಖವು ನಿಮಗೆ ಇನ್ನಷ್ಟು ಬಿಸಿ ಉಂಟುಮಾಡಬಹುದು. ಇದು ಹೆಚ್ಚು ಬೆವರುವಿಕೆಯನ್ನು ಉಂಟುಮಾಡುತ್ತದೆ.
ಸ್ನಾನದ ನಂತರ ಬೆವರುವುದನ್ನು ತಡೆಯಲು ಏನು ಮಾಡಬೇಕು?:
ಸ್ನಾನದ ನಂತರ ಬೆವರುವಿಕೆಯನ್ನು ತಡೆಯಲು ನೀವು ಮೊದಲು ಬಿಸಿಬಿಸಿಯಾದ ನೀರಿನಿಂದ ಸ್ನಾನ ಮಾಡಿದರೂ ಕೊನೆಯಲ್ಲಿ ಸ್ವಲ್ಪ ತಣ್ಣಗಿನ ನೀರನ್ನು ಬಿಡಬೇಕು. ಇದರಿಂದ ಬಾತ್ರೂಂನ ತಾಪಮಾನಕ್ಕೆ ನಿಮ್ಮ ದೇಹ ಹೊಂದಿಕೊಳ್ಳುತ್ತದೆ. ಬಾತ್ರೂಂನಲ್ಲಿ ತುಂಬಿದ್ದ ಬಿಸಿ ತಾಪಮಾನ ಕೂಡ ಕಡಿಮೆಯಾಗುತ್ತದೆ. ಹಾಗೇ, ತಲೆಸ್ನಾನ ಮಾಡುವಾಗ ಕೊನೆಯಲ್ಲಿ ನಿಮ್ಮ ನೆತ್ತಿಯ ಮೇಲೆ ಸ್ವಲ್ಪ ತಣ್ಣೀರನ್ನು ಹಾಕಿಕೊಳ್ಳಿ. ಇದು ನಿಮ್ಮ ದೇಹವನ್ನು ಬೆವರು ಮಾಡುವುದನ್ನು ತಡೆಯುವುದು ಮಾತ್ರವಲ್ಲದೆ ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ. ಹಾಗೇ, ನಿಮ್ಮ ಬಾತ್ರೂಂನಲ್ಲಿ ಎಕ್ಸಾಸ್ಟರ್ ಫ್ಯಾನ್ ಹಾಕಲು ಮರೆಯಬೇಡಿ. ಇದರಿಂದ ಬಾತ್ರೂಂನೊಳಗಿನ ಬಿಸಿ ಗಾಳಿ ಹೊರಗೆ ಹೋಗಿ, ಮೈ ಬೆವರುವಿಕೆ ಕೂಡ ಕಡಿಮೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ