Winter Health: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ 5 ರೀತಿಯ ಹಾಲನ್ನು ಸೇವಿಸಿ

ಅರಿಶಿಣದ ಹಾಲು ರೋಗನಿರೋಧಕ ಶಕ್ತಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 5 ಹಾಲು ಆಧಾರಿತ ಪಾನೀಯಗಳು ಇಲ್ಲಿವೆ...

Winter Health: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ 5 ರೀತಿಯ ಹಾಲನ್ನು ಸೇವಿಸಿ
ಅರಿಶಿಣದ ಹಾಲು
Follow us
ಸುಷ್ಮಾ ಚಕ್ರೆ
|

Updated on: Feb 06, 2023 | 4:53 PM

ಈಗಂತೂ ಚಳಿ ಹೆಚ್ಚಾಗಿದೆ. ಬೆಳಗಿನ ಜಾವ ಮಂಜಿನಿಂದ ತುಂಬಿದ ವಾತಾವರಣ ಇರುತ್ತದೆ. ಇಂತಹ ಸಂದರ್ಭದಲ್ಲಿ ಅನಾರೋಗ್ಯಗಳು ಹೆಚ್ಚಾಗುವುದು ಸಹಜ. ಹೀಗಾಗಿ, ಈ ಹವಾಮಾನ (Weather) ಪರಿವರ್ತನೆಯ ಸಮಯದಲ್ಲಿ ನಮ್ಮ ದೇಹವು ಸೋಂಕುಗಳಿಗೆ ಒಳಗಾಗುವುದರಿಂದ ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು (Immunity Power) ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ರೋಗನಿರೋಧಕ ಶಕ್ತಿಗಾಗಿ ಹಲವಾರು ಮನೆಮದ್ದುಗಳಿವೆ. ಅರಿಶಿಣದ ಹಾಲು ರೋಗನಿರೋಧಕ ಶಕ್ತಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 5 ಹಾಲು ಆಧಾರಿತ ಪಾನೀಯಗಳು ಇಲ್ಲಿವೆ:

1. ಅರಿಶಿಣದ ಹಾಲು:

ಅರಿಶಿಣದ ಹಾಲು ನಿಮ್ಮನ್ನು ಬೆಚ್ಚಗಾಗಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಂಪ್ರದಾಯಿಕ ಮನೆಮದ್ದು. ಅರಿಶಿಣವು ‘ಕರ್ಕ್ಯುಮಿನ್’ ಎಂಬ ಸಂಯುಕ್ತವನ್ನು ಹೊಂದಿದೆ. ಇದು ಶಿಲೀಂಧ್ರ ವಿರೋಧಿ, ನಂಜುನಿರೋಧಕ ಮತ್ತು ಉರಿಯೂತದ ಸ್ವಭಾವವನ್ನು ಹೊಂದಿದೆ. ಇದು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ. ಇದು ಸೋಂಕಿನ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಮಾಡುವ ವಿಧಾನ: ಹಾಲನ್ನು ಕುದಿಸಿ ನಂತರ ಒಲೆಯಿಂದ ಇಳಿಸಿ. ಒಂದು ಚಿಟಿಕೆ ಅರಿಶಿಣ ಮತ್ತು ಕರಿಮೆಣಸು ಸೇರಿಸಿ. ಅದನ್ನು ಮಿಶ್ರಣ ಮಾಡಿ. ಬೇಕಾದರೆ ನೀವು ದಾಲ್ಚಿನ್ನಿ ಪುಡಿ ಅಥವಾ ಸಕ್ಕರೆ, ಜೇನುತುಪ್ಪ ಅಥವಾ ಯಾವುದೇ ಇತರ ಸಿಹಿ ಅಂಶವನ್ನು ಕೂಡ ಸೇರಿಸಬಹುದು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ತಾಜಾವಾಗಿ ಸೇವಿಸಿ!

ಇದನ್ನೂ ಓದಿ: Almonds: ಬಾದಾಮಿ -ತೂಕ ಇಳಿಸುವ ಅತ್ಯುತ್ತಮ ಪದಾರ್ಥ ಎಂದು ಸಾಬೀತುಪಡಿಸುವುದಕ್ಕೆ ಇಲ್ಲಿದೆ 5 ಕಾರಣಗಳು

2. ಕೇಸರಿ ಹಾಲು: ಕೇಸರಿ ಹಾಲು ಕೇವಲ ಅಮೂಲ್ಯವಾದ ಆಸ್ತಿಯಲ್ಲ. ಏಕೆಂದರೆ, ಇದು ಅಪರೂಪದ ಮಸಾಲೆಯಾಗಿದೆ. ಇದು ಆರೋಗ್ಯ ಮತ್ತು ಪೋಷಣೆಯ ವಿಷಯದಲ್ಲಿಯೂ ಪಂಚ್ ಪ್ಯಾಕ್ ಮಾಡುತ್ತದೆ. ಕೇಸರಿ ಶೀತ, ಜ್ವರ ಮತ್ತು ಸೋಂಕುಗಳ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದನ್ನು ಬಿಸಿ ಹಾಲಿಗೆ ಸೇರಿಸಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಾಡುವ ವಿಧಾನ: ಬಾಣಲೆಗೆ ಹಾಲನ್ನು ಹಾಕಿ ಕುದಿಸಿ. ಅದನ್ನು ಕುದಿಸಿದ ನಂತರ ಕೇಸರಿ ಎಸಳುಗಳು, ಸಕ್ಕರೆ ಮತ್ತು ಏಲಕ್ಕಿ ಬೀಜಗಳನ್ನು ಸೇರಿಸಿ. ಅದೆಲ್ಲವೂ ಕರಗುವ ತನಕ ಮಿಕ್ಸ್​ ಮಾಡಿ, ಬಿಸಿಯಾಗಿ ಕುಡಿಯಿರಿ!

3. ಅಂಜೂರದ ಹಾಲು: ಅಂಜೂರ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಇದು ಫೈಬರ್, ಪೊಟ್ಯಾಷಿಯಮ್​ಗಳಿಂದ ಸಮೃದ್ಧವಾಗಿದೆ. ಅಂಜೂರ ದೇಹಕ್ಕೆ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅಂಜೂರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಬ್ಯಾಕ್ಟೀರಿಯಾ ಮತ್ತು ಫಂಗಲ್ ಏಜೆಂಟ್​ಗಳ ವಿರುದ್ಧ ಕೆಲಸ ಮಾಡುತ್ತದೆ. ಆದ್ದರಿಂದ, ಆರೋಗ್ಯಕರ ಮತ್ತು ಬೆಚ್ಚಗಾಗುವ ಅಂಜೂರದ ಹಾಲಿನ ರೂಪದಲ್ಲಿ ಅಂಜೂರದ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ.

ಮಾಡುವ ವಿಧಾನ: ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಅದನ್ನು ನಯವಾದ ಪೇಸ್ಟ್ ಮಾಡಿ. ಈ ಮಧ್ಯೆ, ಹಾಲನ್ನು ಕುದಿಸಿ, ಅಂಜೂರದ ಪೇಸ್ಟ್ ಮತ್ತು ಒಂದು ಅಥವಾ ಎರಡು ಎಸಳು ಕೇಸರಿ ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.

ಇದನ್ನೂ ಓದಿ: Turmeric Milk: ಅರಿಶಿನ ಹಾಲು ಸೇವಿಸುತ್ತೀರಾ? ಹಾಗಿದ್ದರೆ ಈ ಎಲ್ಲಾ ಪ್ರಯೋಜನಗಳು ನಿಮ್ಮದಾಗಲಿವೆ

4. ತೆಂಗಿನ ಹಾಲು: ತೆಂಗಿನ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮ ಪರಿಹಾರವಾಗಿದೆ. ತೆಂಗಿನ ಹಾಲಿನಲ್ಲಿ ಲಾರಿಕ್ ಆಮ್ಲವಿದೆ, ಇದು ರೋಗನಿರೋಧಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ.

ಮಾಡುವುದು ಹೇಗೆ: ತೆಂಗಿನ ಹಾಲನ್ನು ಬ್ಲೆಂಡರ್​ನಲ್ಲಿ ತೆಗೆದುಕೊಳ್ಳಿ. ಇದಕ್ಕೆ ಶುಂಠಿ ರಸ, ಚಿಟಿಕೆ ಮೆಣಸು ಮತ್ತು ಜೇನುತುಪ್ಪ ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ, ಗಾಜಿನಲ್ಲಿ ಹಾಕಿಕೊಂಡು ಕುಡಿಯಿರಿ.

5. ಡ್ರೈ ಫ್ರೂಟ್ ಹಾಲು: ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್​ ನಮ್ಮನ್ನು ಬೆಚ್ಚಗಿಡುತ್ತದೆ ಮತ್ತು ಆರೋಗ್ಯಕರವಾಗಿರಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಒಣ ಹಣ್ಣುಗಳು ವಿವಿಧ ಜೀವಸತ್ವಗಳು, ಖನಿಜಗಳು ಮತ್ತು ನಾರಿನ ಪೋಷಕಾಂಶಗಳ ದಟ್ಟವಾದ ಮೂಲಗಳಾಗಿವೆ. ಇದು ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ. ಬಾದಾಮಿ, ವಾಲ್​ನಟ್ಸ್, ಅಂಜೂರದ ಹಣ್ಣುಗಳು, ಖರ್ಜೂರವನ್ನು ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಲಿಗೆ ಬಳಸಬಹುದು.

ಮಾಡುವ ವಿಧಾನ: ಖರ್ಜೂರ, ಬಾದಾಮಿ ಮತ್ತು ವಾಲ್‌ನಟ್‌ಗಳನ್ನು ರಾತ್ರಿ ನೆನೆಸಿ, ಮರುದಿನ ಬೆಳಿಗ್ಗೆ ಬ್ಲೆಂಡರ್‌ನಲ್ಲಿ ಪ್ಯೂರಿ ಮಾಡಿ. ಈಗ, ಒಂದು ಲೋಟದಲ್ಲಿ ಒಂದು ಚಿಟಿಕೆ ದಾಲ್ಚಿನ್ನಿ ಮತ್ತು ಏಲಕ್ಕಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಒಣ ಹಣ್ಣಿನ ಮಿಶ್ರಣವನ್ನು ಸೇರಿಸಿ. ಬಿಸಿ ಹಾಲಿನೊಂದಿಗೆ ಸೇರಿಸಿ ಕುಡಿಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ