
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ, ವಿಶೇಷವಾಗಿ ಆಹಾರ ಪದ್ಧತಿ. ನೀವು ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸುತ್ತಾ ಹೋದಂತೆ ವೈರಲ್ ಸೋಂಕಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ನ್ಯುಮೋನಿಯಾದ ಅನೇಕ ಪ್ರಕರಣಗಳು ಚಳಿಗಾಲದಲ್ಲಿ ಕಂಡುಬರುತ್ತವೆ ಮತ್ತು ಪರಿಸ್ಥಿತಿಯು ಗಂಭೀರವಾಗಿದ್ದರೆ, ಸಾವಿನ ಅಪಾಯವಿರುತ್ತದೆ. ಚಿಕ್ಕ ಮಕ್ಕಳ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬಾರದು ಮತ್ತು ಕೆಲವು ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು, ಏಕೆಂದರೆ ಇವು ನ್ಯುಮೋನಿಯಾದ ಲಕ್ಷಣಗಳಾಗಿರಬಹುದು.
ಚಳಿಗಾಲದಲ್ಲಿ ತಾಪಮಾನ ಕಡಿಮೆಯಾದ ತಕ್ಷಣ, ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗುತ್ತವೆ, ಆದ್ದರಿಂದ ಜಾಗರೂಕರಾಗಿರುವುದು ಉತ್ತಮ. ವಾಸ್ತವವಾಗಿ, ನ್ಯುಮೋನಿಯಾದಲ್ಲಿ, ಶ್ವಾಸಕೋಶದಲ್ಲಿ ಸೋಂಕು ಪ್ರಾರಂಭವಾಗುತ್ತದೆ, ಇದರಿಂದ ಉಸಿರಾಟದ ತೊಂದರೆಗಳು ಉಂಟಾಗುತ್ತವೆ.
ಇದನ್ನೂ ಓದಿ: ಅಸ್ತಮಾ ರೋಗಿಗಳು ಚಳಿಗಾಲದಲ್ಲಿ ವಾಕಿಂಗ್ ಹೋಗುವುದು ಸುರಕ್ಷಿತವೇ?
ನ್ಯುಮೋನಿಯಾ ನಿಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಕಫದಿಂದಾಗಿ ನೀವು ಎದೆಯಲ್ಲಿ ಬಿಗಿತ ಮತ್ತು ನೋವನ್ನು ಅನುಭವಿಸಿದರೆ,ಅದು ನ್ಯುಮೋನಿಯಾದ ಲಕ್ಷಣವಾಗಿರಬಹುದು.
ನ್ಯುಮೋನಿಯಾದ ಆರಂಭಿಕ ರೋಗಲಕ್ಷಣಗಳಲ್ಲಿ ಒಂದು ದೇಹದ ಉಷ್ಣಾಂಶದಲ್ಲಿ ಹಠಾತ್ ಹೆಚ್ಚಳ ಅಥವಾ ಮರುಕಳಿಸುವ ಜ್ವರ. ಈ ರೀತಿಯ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ನಿರ್ಲಕ್ಷಿಸಬೇಡಿ. ದೇಹದ ಉಷ್ಣತೆಯು 100.4 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಇಲ್ಲದಿದ್ದರೆ ಪರಿಸ್ಥಿತಿ ತುಂಬಾ ಗಂಭೀರವಾಗಬಹುದು.
ನೆಗಡಿ, ಕೆಮ್ಮು, ನೋವಿದ್ದು, ಹಸಿವೆಯಲ್ಲಿ ಬದಲಾವಣೆ ಇದೆ ಅಂದರೆ ತಿನ್ನಲು ಮನಸ್ಸಾಗದಿದ್ದರೆ ಸಾಮಾನ್ಯವೆಂದು ನಿರ್ಲಕ್ಷ್ಯಿಸದಿರಿ. ಈ ರೀತಿಯ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: