ಮೂಳೆಗಳು ನಮ್ಮ ದೇಹದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತವೆ. ಬಾಲ್ಯ ಮತ್ತು ಹದಿಹರೆಯದಲ್ಲಿ ಬಲವಾದ ಮತ್ತು ಆರೋಗ್ಯಕರ ಮೂಳೆಗಳ ಬೆಳವಣಿಗೆಗೆ ಎಚ್ಚರ ವಹಿಸುವುದು ಮುಖ್ಯವಾಗಿದ್ದರೂ, 30 ವರ್ಷ ದಾಟಿದ ನಂತರವೂ ಮೂಳೆಯ ಆರೋಗ್ಯದ ಬಗ್ಗೆ, ಮೂಳೆಗಳ ರಕ್ಷಣೆ ಬಗ್ಗೆ ಜಾಗ್ರತೆ ವಹಿಸುವುದು ಅತ್ಯಗತ್ಯ. ಅದರಲ್ಲೂ ಮಹಿಳೆಯರು ತಮ್ಮ ಮೂಳೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ನಮ್ಮ ಮೂಳೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ನಾವು ಚಿಕ್ಕವರಾಗಿದ್ದಾಗ ನಮ್ಮ ದೇಹವು ಹಳೆಯ ಮೂಳೆಯನ್ನು ಒಡೆಯುವುದಕ್ಕಿಂತ ವೇಗವಾಗಿ ಹೊಸ ಮೂಳೆಯನ್ನು ನಿರ್ಮಿಸುತ್ತದೆ. ಹೆಚ್ಚಿನ ಜನರು 30ನೇ ವಯಸ್ಸಿನಲ್ಲಿ ತಮ್ಮ ಗರಿಷ್ಠ ಮೂಳೆ ದ್ರವ್ಯರಾಶಿಯನ್ನು ತಲುಪುತ್ತಾರೆ. ಅದರ ನಂತರ, ಮೂಳೆ ಮರುರೂಪಿಸುವಿಕೆಯು ಮುಂದುವರಿಯುತ್ತದೆ. ಆದರೆ 30 ವರ್ಷದ ನಂತರ ನಾವು ಗಳಿಸುವುದಕ್ಕಿಂತ ಸ್ವಲ್ಪ ಹೆಚ್ಚು ಮೂಳೆ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ನಾವು ಆಸ್ಟಿಯೊಪೊರೋಸಿಸ್ ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚು. ಇದು ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗುವ ಸಮಸ್ಯೆಯಾಗಿದೆ.
ಇದನ್ನೂ ಓದಿ: ಮೂಳೆಗಳು ಸದೃಢವಾಗಿರಲು ಈ ಹಣ್ಣುಗಳನ್ನು ಸೇವಿಸಿ
ಅತ್ಯುತ್ತಮವಾಗಿ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮಹಿಳೆಯರಿಗೆ ಅತ್ಯಗತ್ಯ. ವಿಶೇಷವಾಗಿ ಅವರು ತಮ್ಮ 30ರ ಹರೆಯಕ್ಕೆ ಪ್ರವೇಶಿಸಿದಾಗ ಮೂಳೆಯ ಬಗ್ಗೆ ಹೆಚ್ಚಿನ ಕಾಳಜಿ ಅತ್ಯಗತ್ಯ. ಈ ವೇಳೆ ಸರಿಯಾದ ಪೋಷಣೆ ಮತ್ತು ಆರೈಕೆ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಪ್ರಶಸ್ತಿ ವಿಜೇತ ಪೌಷ್ಟಿಕತಜ್ಞರಾದ ಲೊವ್ನೀತ್ ಬಾತ್ರಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮೂಳೆಗಳ ಪೋಷಣೆ ಮತ್ತು ಮೂಳೆಯ ಆರೈಕೆಯ ಅಗತ್ಯತೆಯ ಲಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿ ಮಹಿಳೆಗೆ ಮೂಳೆಯ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಗತ್ಯವಿದೆ. ನಮ್ಮ ಶೇ. 99ರಷ್ಟು ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳಲ್ಲಿ ಸಂಗ್ರಹವಾಗುತ್ತದೆ. ಕ್ಯಾಲ್ಸಿಯಂನ ಸಾಕಷ್ಟು ಸೇವನೆಯು ಮುರಿತದ ಅಪಾಯವನ್ನು ಶೇ. 50ರವರೆಗೆ ಕಡಿಮೆ ಮಾಡುತ್ತದೆ. ಗರ್ಭಿಣಿಯರಿಗೆ, PCOS ಅಥವಾ PCOD ಹೊಂದಿರುವವರಿಗೆ ಕ್ಯಾಲ್ಸಿಯಂ ಅತ್ಯವಶ್ಯಕ. ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅತ್ಯಗತ್ಯ. ವಿಶ್ವಾದ್ಯಂತ ಅಂದಾಜು 1 ಶತಕೋಟಿ ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದಾರೆ. ಇದು ಸ್ನಾಯು ಮತ್ತು ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮಹಿಳೆಯರಲ್ಲಿ ಮೂಳೆಯ ಆರೋಗ್ಯವನ್ನು ಹೇಗೆ ಹೆಚ್ಚಿಸುವುದು?:
ಮಹಿಳೆಯರಿಗೆ ವಯಸ್ಸಾದಂತೆ ಅವರ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್, ಮೂಳೆ ಮುರಿತಗಳ ಅಪಾಯವನ್ನು ಕಡಿಮೆ ಮಾಡಲು ಮೂಳೆಯ ಆರೋಗ್ಯಕ್ಕೆ ಆದ್ಯತೆ ನೀಡುವುದು ಹೆಚ್ಚು ಮುಖ್ಯವಾಗಿದೆ. ಪೌಷ್ಟಿಕತಜ್ಞರು ಬಲವಾದ ಮೂಳೆಗಳು ಮತ್ತು ಸುಧಾರಿತ ಜೀವನದ ಗುಣಮಟ್ಟಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುವ ಕೆಲವು ತಂತ್ರಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯವಾದ 6 ಸಸ್ಯಾಹಾರಿ ಆಹಾರಗಳಿವು
– ಮಹಿಳೆಯರು ತಮ್ಮ ದಿನಚರಿಯಲ್ಲಿ ವೈಟ್ ಲಿಫ್ಟಿಂಗ್ ವ್ಯಾಯಾಮಗಳನ್ನು ಮಾಡಬೇಕು. ಗೃಹಿಣಿಯರು ಮತ್ತು ಕಚೇರಿಗೆ ಹೋಗುವವರಿಗೆ ಇದು ಪ್ರಯೋಜನಕಾರಿ.
– ಮೆಗ್ನೀಸಿಯಮ್ ಮತ್ತು ವಿಟಮಿನ್ ಕೆ 2 ಇರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ಇದು ಮೂಳೆಯ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶಗಳಾಗಿದ್ದು, ಋತುಬಂಧ ಮತ್ತು ನಿಯಮಿತ ಋತುಚಕ್ರದ ಸಮಯದಲ್ಲಿ ಮುಖ್ಯವಾಗಿದೆ.
– ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಬೇಕು. ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬೇಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ