ಹುರಿದ ಕಡಲೆ ತಿನ್ನುವುದು ಟೈಂ ಪಾಸ್ ಎಂದುಕೊಳ್ಳಬೇಡಿ.. ಬೆಲ್ಲದ ಜೊತೆ ತಿಂದರೆ ಏನೆಲ್ಲಾ ಲಾಭ ಗೊತ್ತಾ?
ಮುಟ್ಟಿನ ಸಮಯದಲ್ಲಿ ಮಹಿಳೆಯರು ಸಾಕಷ್ಟು ರಕ್ತವನ್ನು ಕಳೆದುಕೊಳ್ಳುತ್ತಾರೆ. ಅಂತಹವರು ಕಡಲೆ ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ ತಮ್ಮ ದೇಹದಿಂದ ಕಳೆದುಹೋದ ರಕ್ತವನ್ನು ಮರಳಿ ಪಡೆಯಬಹುದು. ಹುರಿದ ಕಡಲೆ ಪ್ರೋಟೀನ್ನಲ್ಲಿ ಸಮೃದ್ಧವಾಗಿದೆ. ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಆದ್ದರಿಂದ ಇವೆರಡೂ ಸಹ ಮಹಿಳೆಯರ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಹೆಚ್ಚಿನ ಜನರು ಪ್ರಯಾಣ ಮಾಡುವಾಗ ಬೇಳೆಕಾಳುಗಳು, ಅವರೆಕಾಳು, ಬಟಾಣಿ ಮತ್ತು ಕಡಲೆ ಪೊಪ್ಪು, ಹುರಿದ ಕಡಲೆ (Roasted Chana or Chickpeas) ಜೊತೆಗೆ ಬೆಲ್ಲವನ್ನು (Jaggery) ತಿನ್ನುತ್ತಾರೆ. ಆದರೆ, ಮಂದಿ ಇದನ್ನ ತಿನ್ನುವುದು ಕೇವಲ ಟೈಂಪಾಸ್‌ಗಾಗಿ ಎಂದು ನೀವು ಭಾವಿಸಿದರೆ ಅದು ತಪ್ಪಾದೀತು! ರಕ್ತಹೀನತೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಬೆಲ್ಲವನ್ನು ತಿನ್ನುವುದು ಒಳ್ಳೆಯದು ಎಂದು ಹಿರಿಯರು ಮತ್ತು ಆರೋಗ್ಯ ತಜ್ಞರು ಹೇಳುತ್ತಾರೆ. ಹುರಿದ ಕಡಲೆಯಲ್ಲಿ ಫೈಬರ್ ಮತ್ತು ಪೋಷಕಾಂಶಗಳು ಹೇರಳವಾಗಿರುವುದರಿಂದ ಅವುಗಳನ್ನು ಒಟ್ಟಿಗೆ ತಿನ್ನುವುದು ಉತ್ತಮ. ಇದು ದೇಹದ ಎಲ್ಲಾ ದೌರ್ಬಲ್ಯಗಳನ್ನು ನಿವಾರಿಸುತ್ತದೆ. ಚಯಾಪಚಯವನ್ನು ಸುಧಾರಿಸುತ್ತದೆ. ರಂಜಕ, ಕಬ್ಬಿಣ, ವಿಟಮಿನ್ ಎ, ಮೆಗ್ನೀಷಿಯಂ, ಸುಕ್ರೋಸ್, ಗ್ಲೂಕೋಸ್, ಸತು ಮುಂತಾದ ಪೋಷಕಾಂಶಗಳು ಬೆಲ್ಲದಲ್ಲಿ ಹೇರಳವಾಗಿ ಲಭ್ಯವಿವೆ. ಇದರ ಜೊತೆಗೆ, ಹುರಿದ ಕಡಲೆ ಕಾರ್ಬೋಹೈಡ್ರೇಟ್ಗಳು, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಸಿ, ಡಿ ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ. ಇವೆರಡನ್ನೂ ಒಟ್ಟಿಗೆ ತಿಂದರೆ ಶಕ್ತಿಯುತಗೊಂಡು, ದೇಹ ಸದೃಢವಾಗುತ್ತದೆ. ಈ ಎರಡನ್ನು ಸೇವಿಸುವುದರಿಂದ ಆಗುವ ಇನ್ನೂ ಅನೇಕ ಪ್ರಯೋಜನಗಳನ್ನು (Health Tips ) ಈಗ ತಿಳಿದುಕೊಳ್ಳೋಣ.
ಬೆಲ್ಲದ ಜೊತೆ ಹುರಿದ ಕಡಲೆ ತಿನ್ನುವುದು – ಹೃದಯ ಆರೋಗ್ಯ:
ಪ್ರತಿನಿತ್ಯ ಬೆಲ್ಲ ಮತ್ತು ಹುರಿದ ಕಡಲೆಯನ್ನು ತಿನ್ನುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಪೊಟ್ಯಾಸಿಯಮ್ ಸಮೃದ್ಧವಾಗಿರುವುದರಿಂದ ಹೃದಯವು ಆರೋಗ್ಯಕರವಾಗಿರುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ದೇಹದ ತೂಕವನ್ನೂ ನಿಯಂತ್ರಣದಲ್ಲಿಡುತ್ತದೆ. ಬೆಲ್ಲ ಮತ್ತು ಕಡಲೆಯನ್ನು ಒಟ್ಟಿಗೆ ತಿನ್ನುವುದರಿಂದ ದೇಹದ ಚಯಾಪಚಯ ಸುಧಾರಿಸುತ್ತದೆ.
ಬೆಲ್ಲದ ಜೊತೆ ಹುರಿದ ಕಡಲೆ ತಿನ್ನುವುದು – ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ:
ಇಂದಿನ ಕಾಲದಲ್ಲಿ ಒಬ್ಬ ವ್ಯಕ್ತಿಗೆ ಯಾವುದೇ ರೀತಿಯ ಕಾಯಿಲೆಗಳು ಬರಬಹುದು. ಕೆಲವೊಮ್ಮೆ ರೋಗಗಳು ಚಿಕ್ಕದಾಗಿ ಪ್ರಾರಂಭವಾಗುತ್ತವೆ, ಮುಂದೆ ಗಂಭೀರವಾಗಿರುತ್ತವೆ. ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವ ಬೆಲ್ಲ ಮತ್ತು ಹುರಿದ ಕಡಲೆಯನ್ನು ತಿನ್ನುವುದರಿಂದ ಆಂತರಿಕವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ನಮ್ಮ ದೇಹವು ವಿವಿಧ ರೋಗಗಳ ವಿರುದ್ಧ ಬಲಗೊಳ್ಳುತ್ತದೆ.
ಬೆಲ್ಲದ ಜೊತೆ ಹುರಿದ ಕಡಲೆ ತಿನ್ನುವುದು – ಸ್ನಾಯುಗಳು ಗಟ್ಟಿಯಾಗುತ್ತವೆ:
ಕಡಲೆ-ಬೆಲ್ಲ ತಿನ್ನುವುದರಿಂದ ದೈಹಿಕ ಶಕ್ತಿ ಹೆಚ್ಚುತ್ತದೆ. ಮುಖ್ಯವಾಗಿ, ನೀವು ಅದರಲ್ಲಿ ಪ್ರೋಟೀನ್ ಅಂಶವನ್ನು ಪಡೆಯುತ್ತೀರಿ. ಈ ಎರಡನ್ನು ಸಂಯೋಜಿಸುವ ಮೂಲಕ, ಇತರ ಖನಿಜಗಳು, ವಿಟಮಿನ್ ಅಂಶಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಪೊಟ್ಯಾಸಿಯಮ್ ಹೇರಳವಾಗಿ ಲಭ್ಯವಾಗುತ್ತವೆ. ಇದು ಒಳಗಿನಿಂದ ಸ್ನಾಯುಗಳನ್ನು ಬಲಪಡಿಸುತ್ತದೆ.
ಬೆಲ್ಲದ ಜೊತೆ ಹುರಿದ ಕಡಲೆ ತಿನ್ನುವುದು – ಮೂಳೆ ಬಲ:
ಕಡಲೆ ಮತ್ತು ಬೆಲ್ಲವನ್ನು ಪ್ರತಿದಿನ ಸೇವಿಸುವುದರಿಂದ ಮೂಳೆಗಳು ಬಲವಾಗಿರುತ್ತವೆ. ಸಂಶೋಧನೆಯ ಪ್ರಕಾರ, 40 ವರ್ಷಗಳ ನಂತರ ಮೂಳೆಗಳು ದುರ್ಬಲಗೊಳ್ಳುತ್ತವೆ. ಈ ಕಾರಣದಿಂದಾಗಿ, ದೇಹದ ಕೀಲುಗಳಲ್ಲಿ ನೋವು ಪ್ರಾರಂಭವಾಗುತ್ತದೆ. ಹಾಗಾಗಿ ಬೆಲ್ಲ ತಿನ್ನುವುದರಿಂದ ಈ ಸಮಸ್ಯೆ ಬರುವುದಿಲ್ಲ.
ಬೆಲ್ಲದ ಜೊತೆ ಹುರಿದ ಕಡಲೆ ತಿನ್ನುವುದು – ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ:
ಹುರಿದ ಕಡಲೆ ಮತ್ತು ಬೆಲ್ಲವನ್ನು ತಿನ್ನುವುದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಸೊಂಟದ ಕೊಬ್ಬು ಕರಗುತ್ತದೆ. ಇದು ನೈಸರ್ಗಿಕವಾಗಿ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗಾಗಿ ಈಗಾಗಲೇ ಅಧಿಕ ತೂಕ ಹೊಂದಿರುವವರಿಗೆ ಕಡಲೆ ಮತ್ತು ಬೆಲ್ಲ ವರದಾನವಾಗಿದೆ.
Also Read: ಆಲೂಗಡ್ಡೆ ಜ್ಯೂಸ್ನ ಅದ್ಭುತ ಪ್ರಯೋಜನಗಳೇನು ಗೊತ್ತಾ?
ಬೆಲ್ಲದ ಜೊತೆ ಹುರಿದ ಕಡಲೆ ತಿನ್ನುವುದು – ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ:
ಬಹಳ ದಿನಗಳಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಬೆಲ್ಲ ಮತ್ತು ಹುರಿದ ಕಡಲೆಯನ್ನು ಒಟ್ಟಿಗೆ ಸೇವಿಸಿದರೆ ಸಮಸ್ಯೆ ದೂರವಾಗುತ್ತದೆ. ಬೀನ್ಸ್ ನಲ್ಲಿ ನಾರಿನಂಶ ಅಧಿಕವಾಗಿದೆ. ಇದು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಲ್ಲವು ನಿಮ್ಮ ದೇಹವು ನಿಮ್ಮ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬೆಲ್ಲದ ಜೊತೆ ಹುರಿದ ಕಡಲೆ ತಿನ್ನುವುದು – ಮುಟ್ಟಿನ ಸಮಯದಲ್ಲಿ ಒಳ್ಳೆಯದು:
ಮುಟ್ಟಿನ ಸಮಯದಲ್ಲಿ ಮಹಿಳೆಯರು ಸಾಕಷ್ಟು ರಕ್ತವನ್ನು ಕಳೆದುಕೊಳ್ಳುತ್ತಾರೆ. ಅಂತಹವರು ಕಡಲೆ ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ ತಮ್ಮ ದೇಹದಿಂದ ಕಳೆದುಹೋದ ರಕ್ತವನ್ನು ಮರಳಿ ಪಡೆಯಬಹುದು. ಹುರಿದ ಕಡಲೆ ಪ್ರೋಟೀನ್ನಲ್ಲಿ ಸಮೃದ್ಧವಾಗಿದೆ. ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಆದ್ದರಿಂದ ಇವೆರಡೂ ಸಹ ಮಹಿಳೆಯರ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಬೆಲ್ಲದ ಜೊತೆ ಹುರಿದ ಕಡಲೆ ತಿನ್ನುವುದು – ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ:
ಕಡಲೆಯನ್ನು ಬೆಲ್ಲದೊಂದಿಗೆ ಬೆರೆಸಿ ತಿನ್ನುವುದು ಚರ್ಮಕ್ಕೆ ತುಂಬಾ ಒಳ್ಳೆಯದು. ಇವುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಮುಖ ಸದಾ ಕಾಂತಿಯಿಂದ ಕೂಡಿರುತ್ತದೆ. ಚರ್ಮದ ಅನೇಕ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಮುಖದಲ್ಲಿ ನಗು ಅರಳುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ