Women Health: ಮಹಿಳೆಯರ ಆರೋಗ್ಯಕರ ಆಹಾರ ವ್ಯವಸ್ಥೆಯಲ್ಲಿ ಇರಬೇಕಾದ ವಿಟಮಿನ್ ಮತ್ತು ಜೀವಸತ್ವಗಳಿವು
ಮಹಿಳೆಯರ ಆರೋಗ್ಯ ಸುಧಾರಿಸಲು ಆರೋಗ್ಯಕರ ಆಹಾರ ವ್ಯವಸ್ಥೆ ಅವಶ್ಯಕ. ಹಾಗಿರುವಾಗ ಆಹಾರದಲ್ಲಿ ಯಾವ ರೀತಿಯ ವಿಟಮಿನ್ ಮತ್ತು ಜೀವಸತ್ವಗಳಿರಬೇಕು ಎಂಬ ಕುರಿತಾದ ಮಾಹಿತಿ ಈ ಕೆಳಗಿನಂತಿದೆ.
ಸೂಕ್ಷ್ಮ ಮನಸ್ಥಿತಿ ಮತ್ತು ಆರೋಗ್ಯ ಹೊಂದಿರುವ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚು ಗಮನವಹಿಸಲೇಬೇಕು. ಆರೋಗ್ಯ ಸುಧಾರಿಸಬೇಕು ಅಂದಾದಾಗ ಆಹಾರದಲ್ಲಿ ಪೌಷ್ಟಿಕಾಂಶಯುಕ್ತವಾದ ಆಹಾರ ಜತೆಗೆ ವಿಟಮಿನ್ ಹೊಂದಿರುವ ಆಹಾರ ಬಹು ಮುಖ್ಯವಾಗಿರುತ್ತದೆ. ಮುಖ್ಯವಾಗಿ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆ, ಮುಟ್ಟಿನ ಸಮಯದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಆಹಾಯ ಪದ್ಧತಿ ಸರಿಯಾಗಿರಬೇಕು. ಹಾಗಿರುವಾಗ ಮಹಿಳೆಯರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಮಾಹಿತಿ ಈ ಕೆಳಗಿನಂತಿದೆ.
ಇತ್ತೀಚೆಗೆ ಚರ್ಮ, ಕೂದಲು ಮತ್ತು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಸಾಮಾನ್ಯವಾಗಿ ಮಹಿಳೆಯರು ಬೆನ್ನು ನೋವು, ಸೊಂಟ, ಕಾಲು ನೋವುಗಳಿಂದ ಬಳಲುತ್ತಿರುತ್ತಾರೆ. ಹಾಗಿರುವಾಗ ಮಹಿಳೆಯರು ಆರೋಗ್ಯವಾಗಿರಲು ಯಾವ ವಿಟಮಿನ್ ಬೇಕು ಎಂಬ ಮಾಹಿತಿ ಇಲ್ಲಿದೆ.
ಮಹಿಳೆಯರಿಗೆ ಅಗತ್ಯವಾದ ಜೀವಸತ್ವಗಳು ವಿಟಮಿನ್ ಡಿ ವಯಸ್ಸಾದಂತೆಯೇ ಮಹಿಳೆಯರಿಗೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತವೆ. ಬೆನ್ನು ನೋವು, ಮೊಣಕಾಲು ನೋವು, ಪಾದದ ನೋವು ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೂಳೆಗಳನ್ನು ಆರೋಗ್ಯವಾಗಿಡಲು ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸುವ ಅವಶ್ಯಕತೆಯಿದೆ. ಅಣಬೆ, ಮೊಟ್ಟೆ, ಬೆಣ್ಣೆ ಈ ರೀತಿಯ ಆಹಾರ ಪದಾರ್ಥಗಳಲ್ಲಿ ನೀವು ವಿಟಮಿನ್ ಡಿ ಅಂಶವನ್ನು ಪಡೆದುಕೊಳ್ಳಬಹುದು.
ವಿಟಮಿನ್ ಇ ಫಿಟ್ನೆಸ್ ಜತೆಗೆ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪ್ರತಿ ಮಹಿಳೆಯು ದೀರ್ಘ ಕಾಲದವರೆಗೆ ಸುಂದರವಾಗಿ ಕಾಣಿಸಲು ಹೆಚ್ಚು ಇಷ್ಟಪಡುತ್ತಾಳೆ. ನಿಮ್ಮ ಚರ್ಮ, ಕೂದಲು ಮತ್ತು ಉಗುರುಗಳು ಸುಂದರವಾಗಿರಲು ವಿಟಮಿನ್ ಇ ಅವಶ್ಯಕವಾಗಿದೆ. ವಿಟಮಿನ್ ಇ ಅಂಶ ದೇಹದಲ್ಲಿನ ಸುಕ್ಕುಗಳು ಮತ್ತು ಕಲೆಗಳನ್ನು ತೆಗೆದು ಹಾಕಲು ಸಹಾಯಕವಾಗಿದೆ. ಬಾದಾಮಿ, ಕಡಲೆ, ಬೆಣ್ಣೆ ಮತ್ತು ಪಾಲಕ್ ಮುಂತಾದವುಗಳಿಂದ ವಿಟಮಿನ್ ಇ ಅಂಶವನ್ನು ಪಡೆಯಬಹುದು.
ವಿಟಮಿನ್ ಕೆ ಅಧಿಕ ರಕ್ತದ ನಷ್ಟ ಸಮಸ್ಯೆಯನ್ನು ಹೋಗಲಾಡಿಸಲು ವಿಟಮಿನ್ ಕೆ ಅಗತ್ಯ. ನೀವು ಸೋಯಾಬೀನ್ ಎಣ್ಣೆ ಮತ್ತು ಹಸಿರು ತರಕಾರಿಗಳ ಸೇವನೆಯ ಮೂಲಕ ವಿಟಮಿನ್ ಕೆ ಅಂಶವನ್ನು ಪಡೆದುಕೊಳ್ಳಬಹುದಾಗಿದೆ.
ವಿಟಮಿನ್ ಬಿ12 ವಿಟಮಿನ್ ಬಿ12 ಕೊರತೆಯು ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ನಿಮ್ಮ ಹೃದಯ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ದೇಹದಲ್ಲಿ ರಕ್ತ ಪೂರೈಕೆಯನ್ನು ನಿಯಂತ್ರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಮೊಟ್ಟೆ, ಚೀಸ್, ಹಾಲು, ಮೊಸರು ಈ ರೀತಿಯ ಆಹಾರ ಸೇವನೆಯ ಮೂಲಕ ನೀವು ವಿಟಮಿನ್ ಬಿ12 ಅಂಶವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ:
Health Tips: ಆಫೀಸು, ಮನೆ ಈ ಎಲ್ಲವುಗಳ ಒತ್ತಡದಿಂದ ಬಳಲುತ್ತಿದ್ದೀರಾ?; ಹೊರಬರಲು ಇಲ್ಲಿವೆ ಸುಲಭ ವಿಧಾನಗಳು
Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ