Women Health: ಟೈಟ್​ ಡ್ರೆಸ್​ ತೊಡುವುದು ಟ್ರೆಂಡ್​ ಆಗಿರಬಹುದು; ಆದರೆ ಧರಿಸುವ ಮುನ್ನ ಆರೋಗ್ಯದ ಬಗ್ಗೆಯೂ ಒಮ್ಮೆ ಯೋಚಿಸಿ

| Updated By: ganapathi bhat

Updated on: Jul 12, 2021 | 7:30 PM

ಟೈಟ್​ ಡ್ರೆಸ್​ ಧರಿಸುವುದು ನಿಮಗಿಷ್ಟವಾಗಿರಬಹುದು. ನೀವು ಸುಂದರವಾಗಿಯೂ ಕಾಣಿಸಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಯೋಚಿಸುವುದಾದರೆ ಇದನ್ನು ಆದಷ್ಟು ತಪ್ಪಿಸುವುದು ಒಳಿತು.

Women Health: ಟೈಟ್​ ಡ್ರೆಸ್​ ತೊಡುವುದು ಟ್ರೆಂಡ್​ ಆಗಿರಬಹುದು; ಆದರೆ ಧರಿಸುವ ಮುನ್ನ ಆರೋಗ್ಯದ ಬಗ್ಗೆಯೂ ಒಮ್ಮೆ ಯೋಚಿಸಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿಗಿನ ಯುವತಿಯರು ಹೆಚ್ಚು ಟೈಟ್​ ಡ್ರೆಸ್​ಗಳನ್ನು ತೊಡುತ್ತಾರೆ. ಜೀನ್ಸ್​, ಲೆಗ್ಗಿನ್ಸ್​ ಹೀಗೆ ಅನೇಕ ವಿಧದ ವಿನ್ಯಾಸದ ಡ್ರೆಸ್​ಗಳು ಯುವತಿಯರಿಗೆ ಅಂದವಾಗಿ ಕಾಣಿಸಬಹುದು. ಅದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ತಿಳಿಯಲೇಬೇಕು. ನೋಡಲು ಸುಂದರವಾಗಿ ಕಾಣಿಸಬೇಕು, ಸ್ನೇಹಿತರಂತೆ ನಾನೂ ಸಹ ಸ್ಟೈಲಿಶ್​ ಆಗಿ ಕಾಣಿಸಬೇಕು ಎಂಬುದು ಯುವತಿಯರ ಆಸೆ. ಹಾಗಾಗಿಯೇ ಸ್ಟೈಲಿಶ್​ ಡ್ರೆಸ್​ಗಳನ್ನು ತೊಟ್ಟು ಖುಷಿಪಡುತ್ತಾರೆ. ದೆಹಕ್ಕೆ ಅಂಟಿಕೊಳ್ಳುವ ಡ್ರೆಸ್​ನಿಂದ ಫಿಟ್​ಆಗಿ ಕಾಣಿಸಬಹುದು. ಆಸೆ ಇದು ಆರೋಗ್ಯವನ್ನು ಹದಗೆಡಿಸುತ್ತವೆ ಎಂಬುದು ನೆನಪಿನಲ್ಲಿರಲಿ.

ಟೈಟ್​ ಡ್ರೆಸ್​ ತೊಡುವುದರಿಂದ ಆರೋಗ್ಯ ಸಮಸ್ಯೆಗಳು
ತೊಡೆಗಳಲ್ಲಿ ರಕ್ತಪರಿಚಲನೆ ಸಮಸ್ಯೆ
ಟೈಟ್​ ಪ್ಯಾಂಟ್​ಗಳಾದ ಲೆಗ್ಗಿನ್ಸ್​, ಜೀನ್ಸ್​ ತೊಡುವುದರಿಂದ ಕಾಲಿಗೆ ಅಂಟಿಕೊಂಡಿರುತ್ತದೆ. ಇದು ರಕ್ತ ಚಲನೆಗೆ ಅಡ್ಡಿಮಾಡುತ್ತದೆ. ದೇಹದಲ್ಲಿ ರಕ್ತ ಚಲನೆ ಸರಿಯಾಗಿ ಆಗದಿದ್ದಲ್ಲಿ ಅನಾರೋಗ್ಯ ಉಂಟಾಗುವುದು ಸಹಜ. ತೊಡೆಯ ಮಾಂಸ ಖಂಡಗಳಿಗೆ ಹೊಡೆತ ಉಂಟಾಗುತ್ತದೆ. ಹಾಗಿರುವಾಗ ಮೈಗೆ ಅಂಟಿಕೊಳ್ಳುವ ಟೈಟ್​ ಡ್ರೆಸ್​ಗಳನ್ನು ಆದಷ್ಟು ತಪ್ಪಿಸಿ. ಅದರ ಬದಲಾಗಿ ಸಡಿಲವಾಗಿರುವ ಬಟ್ಟೆಗಳನ್ನು ಆದಷ್ಟು ಬಳಸಿ.

ಉಸಿರಾಟ ತೊಂದರೆ
ದೇಹಕ್ಕೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಉಸಿರಾಟ ತೊಂದರೆಗಳು ಕಾಣಿಸಿಕೊಳ್ಳಬಹುದು. ಜೀನ್ಸ್​ ಧರಿಸಿ ಕಾಲರ್​ ಇರುವ ಶರ್ಟ್​ಗಳನ್ನು ಯುವತಿಯರು ಇತ್ತೀಚೆಗೆ ಹೆಚ್ಚು ಧರಿಸುತ್ತಿದ್ದಾರೆ. ಬಿಗಿಯಾಗಿ ದೇಹಕ್ಕೆ ಅಂಟಿಕೊಳ್ಳುವುದರಿಂದ ಉಸಿರು ಕಟ್ಟಬಹುದು. ಹಾಗಾಗಿ ಹೆಚ್ಚು ಟೈಟ್​ ಆಗಿರುವ ಬಟ್ಟೆಗಳನ್ನು ಧರಿಸದಿರುವುದು ಒಳ್ಳೆಯದು.

ರಕ್ತ ಪರಿಚಲನೆಗೆ ತೊಂದರೆ
ದೇಹಕ್ಕೆ ಅಂಟಿಕೊಳ್ಳುವ ಬಟ್ಟೆ ರಕ್ತ ಪರಿಚಲನೆಗೆ ತೊಂದರೆಯಾಗುತ್ತದೆ. ಇದರಿಂದ ತಲೆ ಸುತ್ತುವುದು, ಮೂರ್ಛೆ ಹೋಗುವುದು ಜತೆಗೆ ಮಾಂಸ ಖಂಡಗಳ ಮೇಲೆ ಪರಿಣಾಮ ಬೀರುತ್ತದೆ. ಅಪರೂಪಕ್ಕೆ ಒಂದು ದಿನ ಈ ರೀತಿಯ ಡ್ರೆಸ್​ ಧರಿಸುವುದು ತೊಂದರೆ ಇಲ್ಲ. ಆದರೆ ಪ್ರತಿನಿತ್ಯವೂ ಕೂಡಾ ಟೈಟ್​ ಡ್ರೆಸ್​ ಧರಿಸುವುದರಿಂದ ಆರೋಗ್ಯಕ್ಕೆ ಅಪಾಯ ಹೆಚ್ಚು.

ಚರ್ಮಕ್ಕೆ ಹಾನಿ
ದೇಹಕ್ಕೆ ಬಟ್ಟೆ ಅಂಚಿಕೊಂಡಿರುವುದರಿಂದ ದೇಹದಲ್ಲಿನ ಉತ್ಪತ್ತಿಯಾಗುವ ಬೆವರು ಬಟ್ಟೆಗೆ ಹೀರಿಕೊಳ್ಳುತ್ತದೆ. ಇದರಲ್ಲಿನ ಬ್ಯಾಕ್ಟೀರಿಯಾ ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಗುಳ್ಳೆಗಳು ಎಳುವುದು, ಕಜ್ಜಿ, ತೊರಿಕೆಯಂತಹ ಸಮಸ್ಯೆ ಉಂಟಾಗುತ್ತದೆ. ಇದು ನಿಮ್ಮ ಚರ್ಮದ ಕಾಂತಿಯನ್ನು ಹಾಳು ಮಾಡಬಹುದು.

ಸಿಟ್ಟು
ರಕ್ತದ ಒತ್ತಡ ಆದಂತೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದರಿಂದ ವಿಪರೀತ ಟೆನ್ಷನ್​, ಸಿಟ್ಟು-ಕೋಪ, ಆತಂಕ ಉಂಟಾಗುತ್ತದೆ. ಇದು ಮಾನಸಿಕ ಸ್ಥಿತಿಯನ್ನು ಹದಗೆಡಿಸುತ್ತದೆ. ಇದರಿಂದ ಅನಾರೋಗ್ಯ ಸಮಸ್ಯೆಗಳು ಕಾಡುವುದು ಹೆಚ್ಚು.

ಟೈಟ್​ ಡ್ರೆಸ್​ ಧರಿಸುವುದು ನಿಮಗಿಷ್ಟವಾಗಿರಬಹುದು. ನೀವು ಸುಂದರವಾಗಿಯೂ ಕಾಣಿಸಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಯೋಚಿಸುವುದಾದರೆ ಇದನ್ನು ಆದಷ್ಟು ತಪ್ಪಿಸುವುದು ಒಳಿತು. ದೇಹಕ್ಕೆ ಹೆಚ್ಚು ಬಿಗಿಯಾಗಿರುವ ಬಟ್ಟೆಗಳನ್ನು ಬಿಟ್ಟು ಸಡಿಲವಾಗಿರುವ ವಸ್ತ್ರವನ್ನು ಹೆಚ್ಚು ಧರಿಸಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ:

Women Health: ಬಂಜೆತನ ಸಮಸ್ಯೆಗೆ ಪರಿಹಾರವೇನು? ಗಮನಿಸಬೇಕಾದ ಅಂಶಗಳು ಇಲ್ಲಿದೆ

Women Health: ಗರ್ಭಾವಸ್ಥೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು ಗರ್ಭಪಾತಕ್ಕೆ ಕಾರಣವಾಗಬಹುದು! ತಡೆಗಟ್ಟುವ ಕ್ರಮ ತಿಳಿಯಿರಿ