ಕೆಲಸದ ಒತ್ತಡವು ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ವರದಿ

ಮಹಿಳೆಯರಲ್ಲಿ ನಿದ್ರೆಯ ಸಮಸ್ಯೆ ಮತ್ತು ಕೆಲಸದ ಒತ್ತಡವು ಹೃದಯ ಸಂಬಂಧಿ ಅಪಾಯವನ್ನು ತಂದೊಡ್ಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಕೆಲಸದ ಒತ್ತಡವು ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ವರದಿ
ಸಾಂದರ್ಭಿಕ ಚಿತ್ರ

ಕೆಲಸದ ಒತ್ತಡ, ನಿದ್ರೆಯ ಅಸ್ವಸ್ಥತೆಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚುತ್ತಿದೆ ಎಂದು ಯುರೋಪಿಯನ್ ಸ್ಟ್ರೋಕ್ ಸಂಸ್ಥೆ (ESO) ತಿಳಿಸಿದೆ. ಹೊಸ ಅಧ್ಯಯನದ ಪ್ರಕಾರ, ಮಧುಮೇಹ, ಅಪಧಮನಿಯ ಅಧಿಕ ರಕ್ತದೊತ್ತಡ, ಹೆಚ್ಚಿನ ಕೊಲೆಸ್ಟ್ರಾಲ್, ಧೂಮಪಾನ, ಬೊಜ್ಜು ಮತ್ತು ದೈಹಿಕ ನಿಷ್ಕ್ರಿಯತೆಯು ಹೃದಯನಾಳದ ಸಮಸ್ಯೆಗೆ ಕಾರಣವಾಗಬಹುದು ಎಂದು ಪರಿಗಣಿಸಲ್ಪಟ್ಟಿದ್ದರೂ ಸಹ ಇತ್ತೀಚೆಗೆ ಕೆಲಸದ ಒತ್ತಡ ಮತ್ತು ನಿದ್ರೆಯ ಸಮಸ್ಯೆ ಹೃದಯನಾಳದ ಅಪಾಯವನ್ನು ತಂದೊಡ್ಡಬಹುದು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಅದರಲ್ಲಿಯೂ ಮುಖ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚುತ್ತದೆ ಎಂದು ಅಧ್ಯಯನ ತಿಳಿಸಿದೆ.

ಮಹಿಳೆಯರಿಗಿಂತಲೂ ಹೆಚ್ಚು ಪುರುಷರು ಧೂಮಪಾನದಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ ಮಹಿಳೆಯರಲ್ಲಿ ನಿದ್ರೆಯ ಸಮಸ್ಯೆ ಮತ್ತು ಕೆಲಸದ ಒತ್ತಡವು ಹೃದಯ ಸಂಬಂಧಿ ಅಪಾಯವನ್ನು ತಂದೊಡ್ಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಡುವಿಲ್ಲದೇ ಕೆಲಸ ಮಾಡುವ ಮಹಿಳೆಯರಲ್ಲಿ ಅಪಾಯ ಹೆಚ್ಚುತ್ತದೆ. ಹಾಗಾಗಿಯೇ ದಿನನಿತ್ಯದ ಚಟುವಟಿಕೆಯಲ್ಲಿ ಮಹಿಳೆಯರು ವಿಶ್ರಾಂತಿ ಪಡೆಯುವ ಕುರಿತಾಗಿ ಯೋಚಿಸಬೇಕಿದೆ.

ಸಂಶೋಧಕರು 2007, 20012 ಮತ್ತು 20017ರ ಸ್ವಿಸ್ ಆರೋಗ್ಯ ಸಮೀಕ್ಷೆಯಲ್ಲಿ 22,000 ಪುರುಷರು ಮತ್ತು ಮಹಿಳೆಯರ ಡೇಟಾ ಆಧರಿಸಿ ಅಧ್ಯಯನ ನಡೆಸಿದ್ದಾರೆ. ಮಹಿಳೆಯರಲ್ಲಿಯೇ ಹೆಚ್ಚು ಅಪಾಯ ಕಂಡು ಬಂದಿರುವುದು ತಿಳಿದು ಬಂದಿದೆ.

ನಿದ್ರೆಯ ಅಸ್ವಸ್ಥತೆಯಲ್ಲಿ ಪುರುಷರಿಗಿಂತ ಮಹಿಳೆಯರು ಶೇ. 5ರಷ್ಟು ಮುಂದಿದ್ದಾರೆ. ಜತೆಗೆ ರಕ್ತನಾಳಕ್ಕೆ ಸಂಬಂಧಿತ ಅಪಾಯವನ್ನು ಎದುರಿಸುತ್ತಿದ್ದಾರೆ. ಶೇ. 27ರಷ್ಟು ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಶೇ.18ರಷ್ಟು ಕೊಲೆಸ್ಟ್ರಾಲ್ ಮತ್ತು ಶೇ. 5ರಷ್ಟು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸ್ಥೂಲಕಾಯತೆಯು ಶೇ. 11ಕ್ಕೆ ಏರಿಕೆಯಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಇದನ್ನೂ ಓದಿ:

Heart Health: ಹೃದಯಾಘಾತ ಮಾತ್ರ ಅಲ್ಲ, ಹೃದಯಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಗಳಿಂದ ಪಾರಾಗಲು ಸದಾ ಪ್ರಯತ್ನಿಸಿ

Health Tips: ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳು; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು

(Work Pressure raising heart attack stroke risk in women)

Click on your DTH Provider to Add TV9 Kannada