World Asthma Day 2023: ಅಸ್ತಮಾ ಬಗ್ಗೆ ನಿರ್ಲಕ್ಷ್ಯ ಬೇಡ, ಚಿಕಿತ್ಸೆ ಪಡೆಯುವುದು ತುಂಬಾ ಅಗತ್ಯ

|

Updated on: May 02, 2023 | 9:24 AM

ವಿಶ್ವ ಆಸ್ತಮಾ ದಿನವನ್ನು ಮೊದಲ ಬಾರಿಗೆ 1998 ರಲ್ಲಿ ಆಚರಿಸಲಾಯಿತು. ಪ್ರತಿದಿನ ನೂರಾರು ಮಂದಿ ಅಸ್ತಮಾದಿಂದ ಬಳಲುತ್ತಿದ್ದಾರೆ.

World Asthma Day 2023: ಅಸ್ತಮಾ ಬಗ್ಗೆ ನಿರ್ಲಕ್ಷ್ಯ ಬೇಡ, ಚಿಕಿತ್ಸೆ ಪಡೆಯುವುದು ತುಂಬಾ ಅಗತ್ಯ
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಅಸ್ತಮಾ ಸರ್ವೆ ಸಾಮಾನ್ಯವಾಗಿದೆ. ದೀರ್ಘಕಾಲದ ಉಸಿರಾಟದ ಕಾಯಿಲೆಯಾಗಿರುವ ಆಸ್ತಮಾ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಆಸ್ತಮಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಅಸ್ತಮಾ ದಿನವನ್ನು ಮೇ ತಿಂಗಳ ಮೊದಲ ಮಂಗಳವಾರದಂದು ಆಚರಿಸಲಾಗುತ್ತದೆ ಆದ್ದರಿಂದ ಈ ವರ್ಷ ಇದನ್ನು 2 ಮೇ 2023 ರಂದು ಆಚರಿಸಲಾಗುತ್ತದೆ. ವಿಶ್ವ ಆಸ್ತಮಾ ದಿನವನ್ನು ಮೊದಲ ಬಾರಿಗೆ 1998 ರಲ್ಲಿ ಆಚರಿಸಲಾಯಿತು. ಪ್ರತಿದಿನ ನೂರಾರು ಮಂದಿ ಅಸ್ತಮಾದಿಂದ ಬಳಲುತ್ತಿದ್ದಾರೆ. ಅಸ್ತಮಾ ಅಪಾಯಕಾರಿ ಕಾಯಿಲೆಯಾಗಿದ್ದು ಇದು ಸಾಮಾನ್ಯವಾಗಿ ಗಾಳಿಯಿಂದ ಬರಬಹುದಾದಂತಹ ಒಂದು ಕಾಯಿಲೆ.

ಅಸ್ತಮಾ ರೋಗಿಗಳು ಸಾಮಾನ್ಯವಾಗಿ ಇನ್ ಹೆಲರ್​ಗಳನ್ನು ಬಳಸುತ್ತಾರೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಇನ್ಹಲೇಷನ್ ಥೆರಪಿ ಬಳಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ವಾಯುಮಾಲಿನ್ಯ, ಧೂಮಪಾನ, ಹವಾಮಾನ ವೈಪರೀತ್ಯದಿಂದ ಹರಡುವ ಜ್ವರ ಮತ್ತಿತರ ಕಾರಣಗಳಿಂದ ಅಸ್ತಮಾ ಬರುತ್ತದೆ. ಅಸ್ತಮಾ ನಿಯಂತ್ರಿಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎನ್ನಲಾಗುತ್ತೆ. ಶ್ವಾಸಕೋಶಕ್ಕೆ ನೇರವಾಗಿ ಔಷಧ ಪೂರೈಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ನೆರವಾಗುತ್ತದೆ. ಆದರೆ, ರೋಗಿಗಳು ನಿಯಮಿತವಾಗಿ ಔಷಧ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಅಸ್ತಮಾವನ್ನು ತಡೆಗಟ್ಟಹುದು.

ಅಸ್ತಮಾದ ರೋಗ ಲಕ್ಷಣಗಳು

ವಿಪರೀತ ಕೆಮ್ಮು ಅದರಲ್ಲೂ ರಾತ್ರಿ ಹೊತ್ತು ಹೆಚ್ಚಾಗುತ್ತೆ. ಉಸಿರಾಟದ ಸಮಸ್ಯೆ, ಉಬ್ಬಸ, ಎದೆ ಬಿಗಿತ, ಹೆಚ್ಚು ಆಯಾಸ, ದೇಹದಲ್ಲಿ ದೌರ್ಬಲ್ಯ ಮೂಡುವುದು, ವ್ಯಾಯಾಮ ಮಾಡುವಾಗ ಉಸಿರು ಕಟ್ಟುವಂತಾಗುವುದು, ಮುಂಗೋಪ, ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು, ಅಲರ್ಜಿ, ಶೀತದ ಲಕ್ಷಣಗಳು, ಗಂಟಲು ಕಟ್ಟವುದು, ನಿದ್ರಿಸುವಾಗ ಗೊರಕೆ, ತಲೆ ನೋವು ಸೇರಿದಂತೆ ಇತರೆ ಲಕ್ಷಣಗಳು ಕಂಡು ಬರುತ್ತವೆ.

ಇದನ್ನೂ ಓದಿ: ಚಳಿಗಾಲದಲ್ಲಿ ಅಸ್ತಮಾವನ್ನು ನಿಯಂತ್ರಣದಲ್ಲಿಡಲು ಇಲ್ಲಿವೆ ಸಲಹೆಗಳು

ವಿಶ್ವ ಆಸ್ತಮಾ ದಿನದ ಇತಿಹಾಸ

ವಿಶ್ವ ಆಸ್ತಮಾ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಆಚರಿಸಲಾಯಿತು. ಗ್ಲೋಬಲ್ ಇನಿಶಿಯೇಟಿವ್ ಫಾರ್ ಆಸ್ತಮಾ (GINA) ಸಂಸ್ಥೆ ಆಸ್ತಮಾದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರ ಜೀವನದ ಮೇಲೆ ಅದರ ಪರಿಣಾಮವನ್ನು ಜನರಿಗೆ ಅರ್ಥಮಾಡಿಕೊಳ್ಳಲು ಮೊದಲ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿತು. ಮೊದಲ ಆಸ್ತಮಾ ದಿನವನ್ನು 1998 ರಲ್ಲಿ ಮೇ ತಿಂಗಳ ಮೊದಲ ಮಂಗಳವಾರ ಆಚರಿಸಲಾಯಿತು. ಈ ದಿನಾಂಕವನ್ನು ವಸಂತ ಮತ್ತು ಶರತ್ಕಾಲದ ಋತುಗಳಿಗೆ ಹೊಂದಿಕೆಯಾಗುವಂತೆ ಆಯ್ಕೆಮಾಡಲಾಗಿದೆ ಏಕೆಂದರೆ ಹವಾಮಾನದಲ್ಲಿನ ಬದಲಾವಣೆಗಳು ಮತ್ತು ಅಲರ್ಜಿನ್ ಒಡ್ಡುವಿಕೆಯಿಂದಾಗಿ ಆಸ್ತಮಾ ರೋಗಲಕ್ಷಣಗಳು ಉಲ್ಬಣಗೊಳ್ಳುವ ಸಮಯಗಳಾಗಿವೆ.

ವಿಶ್ವ ಆಸ್ತಮಾ ದಿನವು ಪ್ರಪಂಚದಾದ್ಯಂತದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ರೋಗದ ಬಗ್ಗೆ ಸಮರ್ಥನೆ ಮತ್ತು ಶಿಕ್ಷಣಕ್ಕಾಗಿ ಮುಕ್ತ ವೇದಿಕೆಯನ್ನು ಒದಗಿಸಿದೆ, ಈ ದಿನದಂದು ಸೆಮಿನಾರ್‌ಗಳು, ಕಾರ್ಯಾಗಾರಗಳು, ರ್ಯಾಲಿಗಳು, ಸಾಮಾಜಿಕ ಮಾಧ್ಯಮ ಪ್ರಚಾರಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಂತಹ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಗ್ಲೋಬಲ್ ಆಸ್ತಮಾ ನೆಟ್‌ವರ್ಕ್ (GAN) 2008 ರಲ್ಲಿ ಆಸ್ತಮಾ ಜಾಗೃತಿ ಮತ್ತು ಆರೈಕೆಯನ್ನು ಉತ್ತೇಜಿಸುವಲ್ಲಿ GINA ಯ ಪ್ರಯತ್ನಗಳನ್ನು ಬೆಂಬಲಿಸಲು ಸ್ಥಾಪಿಸಲಾಯಿತು. 60 ಕ್ಕೂ ಹೆಚ್ಚು ದೇಶಗಳು ಈ ಜಾಗತಿಕ ದಿನವನ್ನು ಆಚರಿಸುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:24 am, Tue, 2 May 23