World Liver Day 2024: ಯಕೃತ್ತಿನ ಆರೋಗ್ಯದ ಗುಟ್ಟು ನಿಮ್ಮ ಆಹಾರದಲ್ಲಿದೆ!

ದೇಹದಲ್ಲಿ ಪ್ರತಿಯೊಂದು ಅಂಗವು ಸರಿಯಾಗಿ ಅಂಗವು ಕಾರ್ಯನಿರ್ವಹಿಸಿದರೆ ನಿಮ್ಮ ಆರೋಗ್ಯವು ಚೆನ್ನಾಗಿದೆ ಎಂದು ಹೇಳಲು ಸಾಧ್ಯ.ನಮ್ಮ ದೇಹದಲ್ಲಿ ಈ ಮೆದುಳಿನ ಬಳಿಕ ದೇಹದಲ್ಲಿ ಎರಡನೇ ಅಂಗ ಎಂದು ಕರೆಸಿಕೊಂಡಿರುವ ಲಿವರ್ ಸರಿಯಾಗಿ ಕೆಲಸ ನಿರ್ವಹಿಸದೇ ಹೋದರೆ ಆರೋಗ್ಯವು ಕೆಟ್ಟಂತೆಯೇ ಸರಿ. ಹೀಗಾಗಿ ಈ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 19ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

World Liver Day 2024: ಯಕೃತ್ತಿನ ಆರೋಗ್ಯದ ಗುಟ್ಟು ನಿಮ್ಮ ಆಹಾರದಲ್ಲಿದೆ!
World Liver Day 2024

Updated on: Apr 18, 2024 | 5:59 PM

ಇಂದಿನ ಒತ್ತಡ ಭರಿತ ಜೀವನಶೈಲಿ ಹಾಗೂ ಆಹಾರಕ್ರಮದಲ್ಲಾಗುವ ಬದಲಾವಣೆಯಿಂದಾಗಿ ಮನುಷ್ಯನ ದೇಹದಲ್ಲಿನ ಒಂದೊಂದೇ ಅಂಗಗಳ ಕಾರ್ಯ ಕ್ಷಮತೆಯೂ ಕಡಿಮೆಯಾಗುತ್ತಿದೆ. ದೇಹವನ್ನು ವಿಷಯುಕ್ತ ಪದಾರ್ಥಗಳನ್ನು ದೇಹದಿಂದ ಹೊರ ಹಾಕುವ ಕೆಲಸವನ್ನು ಮಾಡುತ್ತದೆ. ಅದಲ್ಲದೇ, ದೇಹದಲ್ಲಿರುವ ಚಯಾಪಚ ಕ್ರಿಯೆಯನ್ನು ಸುಧಾರಿಸುತ್ತದೆ. ಆಹಾರವು ಪಚನವಾಗಲು ಬೇಕಾಗುವ ಈ ಪಿತ್ತರಸವನ್ನು ಉತ್ಪಾದಿಸುವ ಈ ಯಕೃತ್ತು ದೇಹದ ಪ್ರಮುಖವಾದ ಅಂಗವೆನಿಸಿಕೊಂಡಿದೆ. ಈ ಯಕೃತ್ತಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತು ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಯಕೃತ್ತ್ ದಿನದ ಇತಿಹಾಸ ಹಾಗೂ ಮಹತ್ವ:

ವಿಶ್ವ ಯಕೃತ್ತ್ ದಿನವನ್ನು 2009ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಲಿವರ್ ದಿನದಂದು ಯಕೃತ್ತಿನ ಕ್ಯಾನ್ಸರ್, ಕೊಬ್ಬು ತುಂಬಿದ ಲಿವರ್ (ಪ್ಯಾಟಿ ಲಿವರ್) ಮತ್ತು ಲಿವರ್ ಸಲ್ಲೋಸಿಸ್ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಈ ರೋಗಗಳನ್ನು ತಡೆಗಟ್ಟುವುದು ಹಾಗೂ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಅದಲ್ಲದೇ ಆರೋಗ್ಯ ಇಲಾಖೆಗಳು ಸೇರಿದಂತೆ ಹಲವಾರು ಸಂಸ್ಥೆಗಳು ಈ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Cucumber Juice: ಪ್ರತಿದಿನ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?

ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

  • ಆಲ್ಕೋಹಾಲ್, ಬೀದಿ ಬದಿಯಲ್ಲಿ ಸಿಗುವ ಜಂಕ್​ ಫುಡ್​​ಗಳ ಸೇವನೆಯಿಂದ ದೂರವಿರುವುದು ಒಳ್ಳೆಯದು.
  • ತಾಜಾಭರಿತ ಸೊಪ್ಪು ತರಕಾರಿಗಳು, ಬೆಳ್ಳುಳ್ಳಿ, ಸೇಬು ಹಣ್ಣು, ದ್ರಾಕ್ಷಿಹಣ್ಣು, ಬ್ಲೂಬೆರ್ರಿ, ಸ್ಟ್ರಾಬೆರ್ರಿ ಹಾಗೂ ಕ್ಯಾರೆಟ್ ಗಳ ಸೇವನೆಯಿಂದ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
  • ಪಿತ್ತಜನಕಾಂಗವು ಉತ್ತಮವಾಗಿ ಕಾರ್ಯನಿರ್ವಹಿಸಲು ನಿಂಬೆ ರಸ, ಗ್ರೀನ್​ ಟೀ, ಆಹಾರದಲ್ಲಿ ಅರಿಶಿಣ ಬಳಕೆ ಹೆಚ್ಚಿಸುವುದು ಒಳ್ಳೆಯದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ