World Lung Cancer Day: ಶ್ವಾಸಕೋಶದಲ್ಲಿರುವ ಕೊಳೆಯನ್ನು ತೊಳೆಯಲು ಈ ಗಿಡಮೂಲಿಕೆಗಳು ಬೆಸ್ಟ್​

| Updated By: ನಯನಾ ರಾಜೀವ್

Updated on: Aug 01, 2022 | 5:11 PM

ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಪ್ರತಿವರ್ಷ ಆಗಸ್ಟ್ 1 ರಂದು ಆಚರಿಸಲಾಗುತ್ತದೆ. ಹಾಗೆಯೇ ಶ್ವಾಸಕೋಶ ಕ್ಯಾನ್ಸರ್​ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತದೆ.

World Lung Cancer Day: ಶ್ವಾಸಕೋಶದಲ್ಲಿರುವ ಕೊಳೆಯನ್ನು ತೊಳೆಯಲು ಈ ಗಿಡಮೂಲಿಕೆಗಳು ಬೆಸ್ಟ್​
Ayurveda
Image Credit source: Newsday Express
Follow us on

ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಪ್ರತಿವರ್ಷ ಆಗಸ್ಟ್ 1 ರಂದು ಆಚರಿಸಲಾಗುತ್ತದೆ. ಹಾಗೆಯೇ ಶ್ವಾಸಕೋಶ ಕ್ಯಾನ್ಸರ್​ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತದೆ. ಜನರ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ಶ್ವಾಸಕೋಶ ಕ್ಯಾನ್ಸರ್​ಗೆ ಆಹ್ವಾನ ನೀಡುತ್ತಿದ್ದಾರೆ. ಮಾಲಿನ್ಯ,
ಶ್ವಾಸಕೋಶವು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ, ಅದು ನಿಲ್ಲದೆ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.

ಶ್ವಾಸಕೋಶದ ಮೂಲಕ ಉಸಿರಾಡುವಾಗ, ಆಮ್ಲಜನಕ ಅಂದರೆ ಪ್ರಣವಾಯು ದೇಹವನ್ನು ಪ್ರವೇಶಿಸುತ್ತದೆ, ಇದು ದೇಹದ ಎಲ್ಲಾ ಕಾರ್ಯಗಳಲ್ಲಿ ಮುಖ್ಯವಾಗಿದೆ. ಹೆಚ್ಚುತ್ತಿರುವ ಮಾಲಿನ್ಯ, ಧೂಳು, ವೈರಸ್ ಸೋಂಕಿನಿಂದ ಶ್ವಾಸಕೋಶಗಳು ದುರ್ಬಲವಾಗುತ್ತವೆ, ಇದು ಅಸ್ತಮಾ, ಉಸಿರಾಟದ ಸೋಂಕು ರೋಗಗಳಿಗೆ ಕಾರಣವಾಗುತ್ತದೆ.

ಇದರಿಂದ ಶ್ವಾಸಕೋಶದಲ್ಲಿ ಕಫ ಶೇಖರಣೆಗೊಂಡು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಶ್ವಾಸಕೋಶವನ್ನು ಸದೃಢವಾಗಿಡಲು ಆಯುರ್ವೇದದಲ್ಲಿ ಹಲವಾರು ಪರಿಹಾರಗಳನ್ನು ಹೇಳಲಾಗಿದೆ. ಆಯುರ್ವೇದದ ಪ್ರಕಾರ, ಹಲವಾರು ಔಷಧೀಯ ಸಸ್ಯಗಳು ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ.

ಪಿಪ್ಪಲಿ
ಪಿಪ್ಪಲಿ ಶ್ವಾಸಕೋಶದ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ಮತ್ತು ಉಸಿರಾಟದ ವ್ಯವಸ್ಥೆಗೆ ಅಮೃತದಂತಾ ಔಷಧವಾಗಿದೆ.
ಆಯುರ್ವೇದದ ಪ್ರಕಾರ, ಪಿಪ್ಪಲಿಯನ್ನು ಹಾಲಿನೊಂದಿಗೆ ಸೇವಿಸಬೇಕು, 15 ದಿನಗಳವರೆಗೆ ಒಂದೊಂದಾಗಿ ಹೆಚ್ಚಿಸಿ ಮತ್ತು ಅದೇ ಕ್ರಮದಲ್ಲಿ ಕಡಿಮೆ ಮಾಡಬೇಕು. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಪಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಬಳಸುವುದರಿಂದ ಶೀತ ಮತ್ತು ಕೆಮ್ಮಿನಂತಹ ಅನೇಕ ಉಸಿರಾಟದ ತೊಂದರೆಗಳು ಗುಣವಾಗುತ್ತವೆ.

ಒಣ ಶುಂಠಿ
ಒಣ ಶುಂಠಿಯು ಶ್ವಾಸಕೋಶದಲ್ಲಿ ಸೋಂಕಿನಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ಉಸಿರಾಟದ ಪ್ರದೇಶವನ್ನು ಸ್ವಚ್ಛವಾಗಿಡುವ ಮೂಲಕ ಉಸಿರಾಟದ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಒಣ ಶುಂಠಿಯು ಗಂಟಲಿನ ಊತವನ್ನು ಕಡಿಮೆ ಮಾಡುವ ಮೂಲಕ ನೋಯುತ್ತಿರುವ ಗಂಟಲು ಮತ್ತು ಕೆಮ್ಮಿನಿಂದ ಪರಿಹಾರವನ್ನು ಒದಗಿಸುತ್ತದೆ.
ಒಣ ಶುಂಠಿಯು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಸೋಂಕನ್ನು ದೂರವಿರಿಸಲು ಸಹಾಯ ಮಾಡುತ್ತದೆ.

ತಾರಿಕಾಯಿ
ತಾರಿಕಾಯಿ ಎಂಬುದು ಮಲೆನಾಡಿಗರಿಗೆ ಪರಿಚಯವಿದ್ದೇ ಇರುತ್ತದೆ. ಶ್ಔಆಸಕೋಶವನ್ನು ಸ್ವಚ್ಛಗೊಳಿಸಲು ಇದು ಸಹಾಯ ಮಾಡುತ್ತದೆ.
ಒಣ ಕೆಮ್ಮು, ನೆಗಡಿ ಮತ್ತು ಗಂಟಲು ನೋವಿಗೆ ಈ ಹಣ್ಣು ಪ್ರಯೋಜನಕಾರಿ. ಆಯುರ್ವೇದದ ಪ್ರಕಾರ, ತಾರಿಕಾಯಿ ಎಲ್ಲಾ ರೀತಿಯ ಕೆಮ್ಮು ಮತ್ತು ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ಇದು ಗಂಟಲಿನ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿದ ಕಫವನ್ನು ತೆಗೆದುಹಾಕುತ್ತದೆ ಮತ್ತು ಶ್ವಾಸನಾಳದ ಕಾಯಿಲೆಗಳಲ್ಲಿ ಪರಿಹಾರವನ್ನು ನೀಡುತ್ತದೆ.

ಜ್ಯೇಷ್ಠಮಧು: ಆಯುರ್ವೇದದ ಪ್ರಕಾರ, ಅದರ ಸಿಹಿ ಅಂಶವು ಲೈಕೋರೈಸ್ ಶ್ವಾಸನಾಳದ ಸೋಂಕಿನಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ. ಶೀತ ಮತ್ತು ಕೆಮ್ಮು ಮುಂತಾದ ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಜ್ಯೇಷ್ಠಮಧುವನ್ನು ಬಳಸಲಾಗುತ್ತದೆ. ಲೈಕೋರೈಸ್ ಶ್ವಾಸಕೋಶ ಮತ್ತು ಗಂಟಲಿನಲ್ಲಿ ಸಂಗ್ರಹವಾಗುವ ದಪ್ಪ ಲೋಳೆಯನ್ನು ಕರಗಿಸಿ ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಲೈಕೋರೈಸ್ ನೋಯುತ್ತಿರುವ ಗಂಟಲು ಮತ್ತು ಕೆಮ್ಮಿಗೆ ಪರಿಹಾರವನ್ನು ನೀಡುತ್ತದೆ.

ತುಳಸಿ: ತುಳಸಿಯು ಅತ್ಯಂತ ಶಕ್ತಿಯುತವಾದ ಔಷಧವಾಗಿದ್ದು, ಇದರ ಬಳಕೆಯು ಅನೇಕ ಉಸಿರಾಟದ ಕಾಯಿಲೆಗಳಲ್ಲಿ ಪ್ರಯೋಜನಕಾರಿಯಾಗಿದೆ. ಯುಜೆನಾಲ್ ತುಳಸಿ ಎಲೆಗಳಲ್ಲಿ ಕಂಡುಬರುತ್ತದೆ, ಇದು ಉಸಿರಾಟದ ವ್ಯವಸ್ಥೆಯಲ್ಲಿ ಶೀತ, ಕೆಮ್ಮು ಮುಂತಾದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.

ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಉಸಿರಾಟದ ಸೋಂಕುಗಳು ಮತ್ತು ಇತರ ಅನೇಕ ಶ್ವಾಸಕೋಶದ ಕಾಯಿಲೆಗಳನ್ನು ತಡೆಯಬಹುದು.

 

Published On - 5:10 pm, Mon, 1 August 22