World Menstrual Hygiene Day 2022: ಮುಟ್ಟಿನ ಕುರಿತು ಈ ತಪ್ಪು ಕಲ್ಪನೆಗಳಿಂದ ಹೊರಬನ್ನಿ

Menstrual Hygiene Day 2022:ಋತುಸ್ರಾವ ಒಂದು ನೈಸರ್ಗಿಕ ಪ್ರಕ್ರಿಯೆ, ಈ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯದ ಅಗತ್ಯವಿದೆ. ಆದರೆ, ಅದರ ಬಗ್ಗೆ ಇರುವ ಅಜ್ಞಾನದ ಪರಿಣಾಮವಾಗಿ, ಸೋಂಕು, ಬಂಜೆತನ, ಕ್ಯಾನ್ಸರ್, ಹೆಪಟೈಟಿಸ್ ಬಿ ಮುಂತಾದ ಗಂಭೀರ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

World Menstrual Hygiene Day 2022: ಮುಟ್ಟಿನ ಕುರಿತು ಈ ತಪ್ಪು ಕಲ್ಪನೆಗಳಿಂದ ಹೊರಬನ್ನಿ
Period
TV9kannada Web Team

| Edited By: Nayana Rajeev

May 28, 2022 | 11:30 AM

ಋತುಸ್ರಾವ ಒಂದು ನೈಸರ್ಗಿಕ ಪ್ರಕ್ರಿಯೆ, ಈ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯದ ಅಗತ್ಯವಿದೆ. ಆದರೆ, ಅದರ ಬಗ್ಗೆ ಇರುವ ಅಜ್ಞಾನದ ಪರಿಣಾಮವಾಗಿ, ಸೋಂಕು, ಬಂಜೆತನ, ಕ್ಯಾನ್ಸರ್, ಹೆಪಟೈಟಿಸ್ ಬಿ ಮುಂತಾದ ಗಂಭೀರ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹಿಂದಿನ ಕಾಲದಲ್ಲಿ ಮಹಿಳೆಯರು ಮುಟ್ಟಾದ ಸಮಯದಲ್ಲಿ ಅವರನ್ನು ಅಕ್ಷರಶಃ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರು.

ಆ ಅವಧಿಯಲ್ಲಿ ಅವರು ಕೇವಲ ಒಂದು ಬಟ್ಟೆಯನ್ನು ಮಾತ್ರ ತೊಡಬೇಕಾಗಿತ್ತು. ಯಾರೊಂದಿಗೂ ಮಾತನಾಡದೆ, ತಲೆಯನ್ನು ಬಾಚದೆ, ಸರಳ ಆಹಾರವನ್ನು ಸೇವಿಸುತ್ತ, ನೆಲದ ಮೇಲೆ ಮಲಗಬೇಕಿತ್ತು.

ಇವರು ಈ ಅವಧಿಯಲ್ಲಿ ಮುಟ್ಟಿದ್ದು ಅಪವಿತ್ರ ಎಂದು ಭಾವಿಸಲಾಗುತ್ತಿತ್ತು. ಹಾಗಾಗಿ ಇವರು ಯಾವುದನ್ನು ಮುಟ್ಟುತ್ತಿರಲಿಲ್ಲ. ಇದಕ್ಕಾಗಿಯೇ ಮುಟ್ಟಾದ ಹೆಂಗಸರನ್ನು ಪೂಜೆ ಪುನಸ್ಕಾರಗಳಿಂದ ಮತ್ತು ಮನೆಯ ಕೆಲಸಗಳಿಂದ ದೂರವಿಡುತ್ತಿದ್ದರು.

ಇಂದು ಮೇ 28, ವಿಶ್ವ ಋತುಚಕ್ರ ನೈರ್ಮಲ್ಯ ದಿನ (Menstrual Hygiene Day) ಎಂದು ಆಚರಿಸಲಾಗುತ್ತದೆ. ಮಹಿಳೆಯರಲ್ಲಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜರ್ಮನ್​ ಮೂಲದ ಎನ್​​ಜಿಒ ವಾಶ್​ ಯುನೈಟೆಡ್​ 2014ರಲ್ಲಿ ಮೊದಲ ಬಾರಿಗೆ ಮುಟ್ಟು ನೈರ್ಮಲ್ಯದ ದಿನವನ್ನು ಆಚರಿಸಲು ಆರಂಭಿಸಿತು. ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಗ್ರಾಮೀಣ ಭಾಗಗಳಲ್ಲಿ ಇನ್ನೂ ಹಳೆಯ ಕ್ರಮವೇ ಮುಂದುವರಿಕೆ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮುಟ್ಟಿನ ನೈರ್ಮಲ್ಯ ನಿರ್ವಹಣೆಯಲ್ಲಿ ಇಂದಿಗೂ ಹಳೆಯ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ. ಆದರೆ, ಇದು ಅನೇಕ ರೀತಿ ಸಮಸ್ಯೆಗಳಿಗೆ ಕಾರಣವಾವಗುತ್ತದೆ.ಇಂತಹ ಮೌಢ್ಯಗಳನ್ನು ದೂರ ಮಾಡುವುದರೊಂದಿಗೆ ಮಹಿಳೆಯರನ್ನು ಮಾನಸಿಕವಾಗಿ ಸದೃಢರನ್ನಾಗಿಸುವುದೇ ಈ ದಿನದ ಉದ್ದೇಶವಾಗಿದೆ.

ಜಾಗತಿಕವಾಗಿ, ಪ್ರತಿದಿನ 800 ದಶಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಮುಟ್ಟಾಗುತ್ತಾರೆ.ಅದರಲ್ಲಿ ಸುಮಾರು 500 ದಶಲಕ್ಷದಷ್ಟು ಜನರು ಮುಟ್ಟಿನ ನೈರ್ಮಲ್ಯಕ್ಕೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವುದಿಲ್ಲ. ಅಲ್ಲದೆ, ಅವರಲ್ಲಿ ಹಲವರಿಗೆ ಮೂಲ ನೈರ್ಮಲ್ಯ ಮತ್ತು ನೈರ್ಮಲ್ಯ ಕ್ರಮಗಳ ಬಗ್ಗೆ ಸಹ ತಿಳಿದಿಲ್ಲ. ಆರೋಗ್ಯಕರವಲ್ಲದ ಪರಿಸ್ಥಿತಿಗಳಿಂದಾಗಿ, ಅನೇಕ ಹೆಣ್ಣು ಮಕ್ಕಳು ವಿವಿಧ ರೋಗಗಳು ಮತ್ತು ಸೋಂಕುಗಳಿಂದ ಬಳಲುತ್ತಿದ್ದಾರೆ.

ಮುಟ್ಟಿನ ಸಮಯದಲ್ಲಿ ಪಾಲಿಸಬೇಕಾದ ಅಂಶಗಳು:2015-2016ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದ ಸುಮಾರು 336 ಮಿಲಿಯನ್ ಮಹಿಳೆಯರಲ್ಲಿ, ಶೇಕಡಾ 36 ಅಂದರೆ, 121 ಮಿಲಿಯನ್ ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ನ್ಯಾಪ್​ಕಿನ್​ ಬಳಸುತ್ತಾರೆ.ನಮ್ಮ ದೇಶದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಟ್ಟೆಗಳನ್ನು ಬಳಸುತ್ತಾರೆ. ಮಹಿಳೆಯ ವಯಸ್ಸು ಏನೇ ಇರಲಿ, ಪ್ರತಿಯೊಬ್ಬರೂ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಈ ಸಮಯದಲ್ಲಿ, ಈ ಕೆಳಗಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಪ್ರತಿ 6 ಗಂಟೆಗಳಿಗೊಮ್ಮೆ ಪಾಡ್ಯಾಡ್​ಗಳನ್ನು ಬದಲಾಯಿಸಬೇಕು ಪ್ರತಿ 6 ಗಂಟೆಗಳ ನಂತರ ಸ್ಯಾನಿಟರಿ ನ್ಯಾಪ್​ಕಿನ್ ಅಥವಾ ಪ್ಯಾಡ್ ಅನ್ನು ಬದಲಾಯಿಸಿರಕ್ತಸ್ರಾವ ಹೆಚ್ಚು ಇದ್ದರೆ, ಅದನ್ನು ಪದೆೇಪದೆ ಬದಲಾಯಿಸಬೇಕುಪ್ಯಾಡ್‌ಗಳ ಬದಲಿಗೆ ಹಳೆಯ ಮತ್ತು ಕೊಳಕು ಬಟ್ಟೆಗಳನ್ನು ಬಳಸಬೇಡಿ, ಬಟ್ಟೆಗಳನ್ನು ಬಳಸಿದರೆ ಸೋಂಕಿನ ಅಪಾಯ ಹೆಚ್ಚುಜನನಾಂಗದ ಪ್ರದೇಶವನ್ನು (ಯೋನಿ ಮತ್ತು ಅದರ ಸುತ್ತಲಿನ ಪ್ರದೇಶ) ಕಾಲಕಾಲಕ್ಕೆ ಸ್ವಚ್ಛಗೊಳಿಸಿನಿಯಮಿತವಾಗಿ ಸ್ನಾನ, ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ಬಿಸಿನೀರಿನೊಂದಿಗೆ ಸ್ನಾನ ಮಾಡುವುದರಿಂದ ಮುಟ್ಟಿನ ನೋವಿನಿಂದ ಪರಿಹಾರ ಸಿಗುತ್ತದೆ.

ನೀವು ಪ್ರಯಾಣಿಸುತ್ತಿದ್ದರೆ ಮತ್ತು ಶೌಚಾಲಯವನ್ನು ಬಳಸಲಿದ್ದರೆ, ಈ ಸಮಯದಲ್ಲಿ ಸೋಂಕಿನ ಹೆಚ್ಚಿನ ಅಪಾಯವಿರುವುದರಿಂದ ಶೌಚಾಲಯಗಳು ಸ್ವಚ್ಛವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಿನೀವು ಏನು ಸೇವಿಸುತ್ತೀರಿ ಮತ್ತು ಕುಡಿಯುತ್ತೀರಿ ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಿಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಲು ಪ್ರಯತ್ನಿಸಿಸ್ವಚ್ಛ ಮತ್ತು ತೊಳೆದ ಒಳ ಉಡುಪುಗಳನ್ನು ಧರಿಸಿ ಮತ್ತು ಎರಡು ಪ್ಯಾಡ್‌ಗಳನ್ನು ಏಕಕಾಲದಲ್ಲಿ ಬಳಸಬೇಡಿ

ಮುಟ್ಟಿನ ಬಗ್ಗೆ ಇರುವ ಕೆಲವು ನಂಬಿಕೆಗಳು ಮುಟ್ಟು ಅಶುದ್ಧ: ಮುಟ್ಟು ಅಶುದ್ಧ ಅಲ್ಲ, ಮುಟ್ಟು ಪ್ರತಿ ತಿಂಗಳು ಸಂಭವಿಸುವ ನೈಸರ್ಗಿಕ ವಿದ್ಯಮಾನವಾಗಿದೆ. ಇದು ಗರ್ಭಾಶಯದ ಒಳಪದರದೊಂದಿಗೆ ಆವರ್ತಕ ರಕ್ತಸ್ರಾವವಾಗಿದೆ. ಶಾಲೆ, ಕಾಲೇಜು ಮತ್ತು ಕಛೇರಿಯಲ್ಲಿ ಮುಟ್ಟಿನ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಆಗ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆ ಅಭಿವೃದ್ಧಿ ಹೊಂದಲು ಸಾಧ್ಯ.

ಶುಚಿಯಾಗಿಟ್ಟುಕೊಳ್ಳಲು ಇವುಗಳನ್ನು ಬಳಸಿ: ಸ್ಯಾನಿಟರಿ ನ್ಯಾಪ್ಕಿನ್, ಮರುಬಳಕೆಯ ಪ್ಯಾಡ್​ಗಳು, ಮೆನ್ಸ್ಟ್ರಲ್ ಕಪ್​ಗಳನ್ನು ಬಳಕೆ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳಿ.

 ಮುಟ್ಟಿನ ಸಮಯದಲ್ಲಿ ದೇವರ ಧ್ಯಾನ ಮಾಡುವಂತಿಲ್ಲ: ಮಹಿಳೆಯರು ಮುಟ್ಟಿನ ಸಮಯದಲ್ಲಿ ದೇವರ ಧ್ಯಾನ ಮಾಡುವಂತಿಲ್ಲ ಎಂಬುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ, ಹೀಗಾಗಿ ಇಂತಹ ಅಪನಂಬಿಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada