ವಿಶ್ವ ನಿದ್ರಾ ದಿನವನ್ನು ಪ್ರತಿ ವರ್ಷ ಮಾರ್ಚ್ 18 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ನಿದ್ರೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಹೀಗಾಗಿ ಈ ದಿನದಂದು ನಿದ್ರೆಗೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಕೊರೊನಾ ಸಾಂಕ್ರಾಮಿಕ ರೋಗದಿಂದ ಜನರು ನಿದ್ರೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಬಂದಿರುವ ಮುಖ್ಯ ಕಾಯಿಲೆ ಎಂದರೆ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ(Obstructive sleep apnea). ಇದು ಮೇಲ್ಭಾಗದ ಶ್ವಾಸನಾಳದ ಸಂಪೂರ್ಣ ಅಥವಾ ಭಾಗಶಃ ತಡೆಗಟ್ಟುವಿಕೆಯಿಂದ ಉಂಟಾಗುವ ಸ್ಥಿತಿಯಾಗಿದೆ. ಇದು ನಿದ್ರೆಯಲ್ಲಿ(Sleep) ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ ಮತ್ತು ದೇಹಕ್ಕೆ ಆಮ್ಲಜನಕದ ಪೂರೈಕೆಯನ್ನು ತಡೆಯುತ್ತದೆ. ಈ ರೋಗದಲ್ಲಿ ಉಸಿರಾಟವು ಸಾಮಾನ್ಯವಾಗಿ ಕೆಲವು ಸೆಕೆಂಡುಗಳ ಕಾಲ ನಿಲ್ಲುತ್ತದೆ. ಆದರೆ ದೀರ್ಘಕಾಲದವರೆಗೆ ಉಸಿರಾಟವಿಲ್ಲದಿದ್ದರೆ ಸಾವು(Death) ಸಹ ಸಂಭವಿಸಬಹುದು. ಹೀಗಾಗಿ ನಿದ್ರೆಗೆ ಸಂಬಂಧಿಸಿದ ಈ ಕಾಯಿಲೆಯ ಲಕ್ಷಣಗಳು ಮತ್ತು ಕಾರಣಗಳ ಬಗ್ಗೆ ಜನರು ತಿಳಿದಿರುವುದು ಮುಖ್ಯ.
ವೈದ್ಯರ ಪ್ರಕಾರ, ಈ ಕಾಯಿಲೆಯಿಂದಾಗಿ ವ್ಯಕ್ತಿಯ ನಿದ್ರೆಗೆ ತೊಂದರೆ ಉಂಟಾಗುತ್ತದೆ. ಇದರಿಂದ ಬಳಲುತ್ತಿರುವಾಗ ಇನ್ನೂ ಹಲವು ರೀತಿಯ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಹೃದಯ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನು ಇದು ಉಂಟುಮಾಡುತ್ತದೆ. ಈ ರೋಗವು ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ( OSA) ವಯಸ್ಸಾದವರಲ್ಲಿ ಮತ್ತು ಸ್ಥೂಲಕಾಯತೆಯಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಒಎಸ್ಎಯ ರೋಗಲಕ್ಷಣಗಳು ದೀರ್ಘಕಾಲದವರೆಗೆ ವ್ಯಕ್ತಿಯಲ್ಲಿ ಮುಂದುವರಿದರೆ, ಅದು ಅಪಾಯಕಾರಿಯೂ ಆಗಿರಬಹುದು. ಅಪೊಲೊ ಟೆಲಿಹೆಲ್ತ್‌ನ ಸಿಇಒ ವಿಕ್ರಮ್ ಥಾಪ್ಲು ಪ್ರಕಾರ, 93 ಪ್ರತಿಶತದಷ್ಟು ಭಾರತೀಯ ಜನರು ಸಾಕಷ್ಟು ನಿದ್ರೆಯಿಂದ ವಂಚಿತರಾಗಿದ್ದಾರೆ ಮತ್ತು ಅವರಲ್ಲಿ 65 ಪ್ರತಿಶತದಷ್ಟು ಜನರು ನಿದ್ರಾ ಉಸಿರುಕಟ್ಟುವಿಕೆಗೆ ಗುರಿಯಾಗುತ್ತಾರೆ ಎಂದು ಹೇಳಿದ್ದಾರೆ.
ಒಎಸ್ಎ ದೇಹದ ಇತರ ಭಾಗಗಳ ಮೇಲೆ ಸಹ ಪರಿಣಾಮ ಬೀರುತ್ತವೆ
ಅಪೊಲೊ ಟೆಲಿಹೆಲ್ತ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಆಯೇಶಾ ನಜ್ನೀನ್ ಅವರು ಸ್ಲೀಪ್ ಅಪ್ನಿಯ ಗಂಭೀರ ದೀರ್ಘಕಾಲದ ಸ್ಥಿತಿಯಾಗಿದೆ ಎಂದು ಹೇಳಿದ್ದಾರೆ. ಈ ಸ್ಥಿತಿಯು ನಿದ್ರೆಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಜೀವನದ ಗುಣಮಟ್ಟ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆದ್ದರಿಂದ ನಿಮಗೆ ಸಾಕಷ್ಟು ನಿದ್ರೆ ಬರದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
ನಿದ್ರೆಯ ಕೊರತೆಯಿಂದ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ
ನಿದ್ರೆಯ ಕೊರತೆಯಿಂದ ಮಾನಸಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ. ಈ ಕಾಯಿಲೆಗೆ ಸಂಬಂಧಿಸಿದಂತೆ ಅನೇಕರು ನನ್ನ ಬಳಿಗೆ ಬರುತ್ತಾರೆ. ನಿದ್ರೆಯ ಕೊರತೆ ಮತ್ತು ಇದರಿಂದಾಗಿ ಅವರು ಮಾನಸಿಕ ಉದ್ವೇಗ ಹಾಗೂ ಆತಂಕವನ್ನು ಅನುಭವಿಸುತ್ತಾರೆ ಎಂದು ಹಿರಿಯ ಮನೋವೈದ್ಯ ಡಾ.ರಾಜ್ ಕುಮಾರ್ ಹೇಳಿದ್ದಾರೆ.
ನಿದ್ರೆಯಲ್ಲಿ ಉಸಿರುಕಟ್ಟುವಿಕೆಯ ಲಕ್ಷಣಗಳು ಯಾವುವು?
ಒಎಸ್ಎ ರೋಗದ ಆರಂಭಿಕ ಲಕ್ಷಣವೆಂದರೆ ಗೊರಕೆ. ಇದಲ್ಲದೆ, ರಾತ್ರಿಯಲ್ಲಿ ಉಸಿರುಗಟ್ಟುವಿಕೆ, ಹಠಾತ್ ನಿದ್ರೆಯಿಂದ ಎಚ್ಚರಗೊಳ್ಳುವುದು, ರಾತ್ರಿ ಮಲಗುವಾಗ ಬೆವರುವುದು, ನಿದ್ರೆಯಿಂದ ಎದ್ದ ನಂತರ ಬಾಯಿಯಲ್ಲಿ ಶುಷ್ಕತೆಯ ಭಾವನೆ ಇರುತ್ತದೆ. ಈ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ:
ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
Weight Loss: ಸುಖವಾದ ನಿದ್ರೆಯಿಂದಲೂ ತೂಕ ಇಳಿಸಿಕೊಳ್ಳಬಹುದೆಂದು ನಿಮಗೆ ಗೊತ್ತಾ?