World Thalassemia Day 2025: ತಂದೆ- ತಾಯಿಗೆ ಥಲಸ್ಸೆಮಿಯಾ ಇದ್ದರೆ ಮಕ್ಕಳಿಗೂ ಬರುತ್ತೆ ಎಚ್ಚರ!

ವಿಶ್ವ ಥಲಸ್ಸೆಮಿಯಾ ದಿನ: ಆನುವಂಶಿಕ ಬರುವ ರಕ್ತದ ಅಸ್ವಸ್ಥತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಥಲಸ್ಸೇಮಿಯಾ ದಿನವನ್ನು ಪ್ರತಿವರ್ಷ ಮೇ 8ರಂದು ಆಚರಣೆ ಮಾಡಲಾಗುತ್ತದೆ. ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಬದುಕಿಗೆ ಬೆಂಬಲವಾಗಿ ನಿಂತು, ನೈತಿಕ ಸ್ಥೈರ್ಯ ತುಂಬುವ ಕೆಲಸದ ಜೊತೆಗೆ ಸೂಕ್ತ ಚಿಕಿತ್ಸೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ.

World Thalassemia Day 2025: ತಂದೆ- ತಾಯಿಗೆ ಥಲಸ್ಸೆಮಿಯಾ ಇದ್ದರೆ ಮಕ್ಕಳಿಗೂ ಬರುತ್ತೆ ಎಚ್ಚರ!
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 08, 2025 | 9:08 AM

ಥಲಸ್ಸೆಮಿಯಾ (Thalassemia) ರೋಗದ ಬಗ್ಗೆ ಕೇಳಿರಬಹುದು. ಇದೊಂದು ಅನುವಂಶಿಕವಾಗಿ (Genetic Disorder) ತಂದೆ- ತಾಯಿಯಿಂದ ಮಕ್ಕಳಿಗೆ ಬರುವ ರಕ್ತದ ಕಾಯಿಲೆಯಾಗಿದ್ದು ದೇಹವು ಹಿಮೋಗ್ಲೋಬಿನ್ (Hemoglobin) ಎಂಬ ಪ್ರೋಟೀನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸದಿದ್ದಾಗ ಉಂಟಾಗುವ ರಕ್ತದ ಅಸ್ವಸ್ಥತೆಯಾಗಿದೆ. ಈ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿ ಇರದ ಕಾರಣ, ಕಾಯಿಲೆಯ ಲಕ್ಷಣ ಅದರ ಚಿಕಿತ್ಸೆಯ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 8ರಂದು ವಿಶ್ವ ಥಲಸ್ಸೆಮಿಯಾ ದಿನವನ್ನು (World Thalassemia Day) ಆಚರಿಸಲಾಗುತ್ತದೆ. ಹಾಗಾದರೆ ಇದರ ಲಕ್ಷಣಗಳೇನು? ಈ ಕಾಯಿಲೆ ಕಂಡು ಬಂದಾಗ ಮಗುವಿನ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಈ ರೋಗದ ಪರಿಣಾಮ ಮಗುವಿನ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಸರಿಯಾಗಿ ಆಗದೆ ಈ ಜೀವಕೋಶಗಳ ಜೀವಿತಾವಧಿಯೂ ಬಹಳ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಮಕ್ಕಳಿಗೆ ಪ್ರತಿ 21 ದಿನಗಳ ನಂತರ ಕನಿಷ್ಠ ಒಂದು ಯೂನಿಟ್ ರಕ್ತದ ಅಗತ್ಯವಿರುತ್ತದೆ. ಆದರೆ ಈ ಕಾಯಿಲೆ ಇರುವ ಮಕ್ಕಳು ಬಹಳ ದಿನ ಬದುಕುವುದಿಲ್ಲ. ಕೆಲವರು ಬದುಕುಳಿದರೂ, ಅನೇಕ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿ ಈ ರೀತಿ ಆರೋಗ್ಯ ಸಮಸ್ಯೆ ಇರುವ ಮಕ್ಕಳು ಬೇರೆಯವರಂತೆ ಸಂತೋಷದಿಂದ ತಮ್ಮ ಬಾಲ್ಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ.

ಥಲಸ್ಸೆಮಿಯಾ ಲಕ್ಷಣಗಳು?

ಅರೆನಿದ್ರಾವಸ್ಥೆ, ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ, ತಲೆ ಸುತ್ತುವಿಕೆ, ಮೂರ್ಛೆ ಹೋಗುವುದು, ಮಸುಕಾದ ಚರ್ಮ, ಕಾಮಾಲೆ ಮತ್ತು ರಕ್ತಹೀನತೆಯ ರೋಗಲಕ್ಷಣಗಳನ್ನು ಅನುಭವಿಸಬಹುದು. ತೀವ್ರ ಪ್ರಕರಣಗಳಲ್ಲಿ, ಥಲಸ್ಸೆಮಿಯಾ ಮೂಳೆ ವಿರೂಪಗೊಳ್ಳುವುದು, ಹಿಗ್ಗಿರುವ ಗುಲ್ಮ ಮತ್ತು ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು. ಈ ರೋಗನಿರ್ಣಯವು ಕ್ಲಿನಿಕಲ್ ರೋಗಲಕ್ಷಣಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳನ್ನು ಆಧರಿಸಿರುತ್ತದೆ.

ಇದನ್ನೂ ಓದಿ
ಮಾಂಸಾಹಾರ ಸೇವನೆ ಮಾಡಲು ಸಾಧ್ಯವಾಗದಿದ್ದರೆ ಈ ಹಣ್ಣನ್ನು ತಿನ್ನಿ
ಒಂದು ಗ್ಲಾಸ್​​​ ಬಿಸಿ ನೀರು ನಿಮ್ಮ ಜೀವನವನ್ನೇ ಬದಲಾವಣೆ ಮಾಡುತ್ತೆ
ಬೆಳಿಗ್ಗೆ ಅಥವಾ ರಾತ್ರಿ ಯಾವ ಸಮಯದಲ್ಲಿ ಸ್ನಾನ ಮಾಡುವುದು ಉತ್ತಮ
ಯಾವುದೇ ರೀತಿಯ ಕ್ಯಾನ್ಸರ್‌ ಬರಬಾರದು ಎಂದರೆ ಈ ಹಣ್ಣನ್ನು ತಿಂದು ನೋಡಿ

ಇದನ್ನೂ ಓದಿ: ಮಾಂಸಾಹಾರ ಸೇವನೆ ಮಾಡುವ ಬದಲು ಈ ಒಂದು ಹಣ್ಣನ್ನು ತಿನ್ನಿ

ಥಲಸ್ಸೆಮಿಯಾಗೆ ಚಿಕಿತ್ಸೆ ಹೇಗೆ?

ರಕ್ತಹೀನತೆ ತಪಾಸಣೆ ಥಲಸ್ಸೆಮಿಯಾ ವಾಹಕಗಳನ್ನು ಪತ್ತೆ ಮಾಡುತ್ತದೆ. ಇದಲ್ಲದೆ ಈ ಕಾಯಿಲೆಯ ಚಿಕಿತ್ಸೆಯು ಪರಿಸ್ಥಿತಿಯ ವಿಧ ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ. ಈ ಕಾಯಿಲೆ ಇರುವ ಮಕ್ಕಳಿಗೆ ಜೀವಿತಾವಧಿಯಲ್ಲಿ ಎರಡು ಮೂರು ವಾರಗಳಿಗೊಮ್ಮೆ ರಕ್ತ ವರ್ಗಾವಣೆಯನ್ನು ಮಾಡಲಾಗುತ್ತದೆ. ರೋಗದ ತೀವ್ರತೆಯ ಆಧಾರದ ಮೇಲೆ ಅಸ್ಥಿಮಜ್ಜೆ ಕಸಿಗಳು, ಜೀನ್ ಚಿಕಿತ್ಸೆ, ಜಿಂಟೆಗ್ಲೋ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದರೆ ಈ ರೋಗಕ್ಕೆ ಮತ್ತಷ್ಟು ಸಂಶೋಧನೆಗಳ ಅವಶ್ಯಕತೆ ಇದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡ