Yoga Benefits: ಯೋಗದಿಂದ ನಿಮ್ಮ ದೇಹದ ಎತ್ತರವನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ?

| Updated By: ರಮೇಶ್ ಬಿ. ಜವಳಗೇರಾ

Updated on: Nov 17, 2022 | 10:18 PM

ಅದರಂತೆ ಯೋಗದ ಕೆಲವೊಂದು ಭಂಗಿಗಳು ದೇಹದ ಎತ್ತರವನ್ನು ಸಹ ಹೆಚ್ಚಿಸಲು ಸಹಾಯಕವಾಗಿವೆ. ಹಾಗಾದ್ರೆ ಯಾವೆಲ್ಲ ಆಸನಗಳನ್ನು ಮಾಡಿದ್ರೆ ದೇಹದ ಎತ್ತರವನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.

Yoga Benefits: ಯೋಗದಿಂದ ನಿಮ್ಮ ದೇಹದ ಎತ್ತರವನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ?
Yoga Benifits
Image Credit source: PiPa News
Follow us on

ನೀವು ಕುಳ್ಳರಿದ್ದೀರಿ ಎನ್ನುವ ಚಿಂತೆಯೇ? ಇನ್ನಷ್ಟು ನಿಮ್ಮ ದೇಹದ ಎತ್ತರವನ್ನು ಹೆಚ್ಚಿಸಿಕೊಳ್ಳಲು ಚಿಂತೆ ಮಾಡ್ತಿದ್ದೀರಾ? ಆ ಎಲ್ಲಾ ಚಿಂತನೆಗಳಿಗೆ ಗುಡ್​ ಬೈ ಹೇಳಿ.  ಯಾವುದೇ ರಾಸಾಯನಿಕ ಔಷಧಿಗಳನ್ನು ಬಳಸದೇ ನೈಸರ್ಗಿಕವಾಗಿ ಸೆಂಟಿ ಮೀಟರ್​ನಷ್ಟು ನಿಮ್ಮ ದೇಹದ ಎತ್ತರವನ್ನು ಹೆಚ್ಚಿಸಿಕೊಳ್ಳಬಹುದು.  ಹಾಗಾಗಿ ಪ್ರತಿದಿನ  ಈ ಯೋಗಾಭ್ಯಾಸವನ್ನು  ರೂಢಿಸಿಕೊಳ್ಳುವುದು ಅಗತ್ಯ.

ಯೋಗ ಮಾಡುವುದು ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ ಎಂಬುದು ಈಗಾಗಲೇ ಹಲವು ವರದಿಗಳು ದೃಢಪಡಿಸಿವೆ.  ಹಾಗಾಗಿ ಪ್ರತಿ ದಿನ ಕೆಲವೊಂದು ಯೋಗಾಸನಗಳನ್ನು ರೂಢಿಸಿಕೊಂಡಾಗ ದೇಹದಲ್ಲಿನ ಬೆಳವಣಿಗೆಯ ಹಾರ್ಮೋನ್‌ಗೆ ಮೃದುವಾದ ತಳ್ಳುವಿಕೆಯನ್ನು ನೀಡುತ್ತದೆ. ಇದರಿಂದ ನಿಮ್ಮ ದೇಹದ ಎತ್ತರದ ಬೆಳವಣಿಗೆಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದು.

ಅದರಂತೆ ಯೋಗದ ಕೆಲವೊಂದು ಭಂಗಿಗಳು ದೇಹದ ಎತ್ತರವನ್ನು ಸಹ ಹೆಚ್ಚಿಸಲು ಸಹಾಯಕವಾಗಿವೆ. ಹಾಗಾದ್ರೆ ಯಾವೆಲ್ಲ ಆಸನಗಳನ್ನು ಮಾಡಿದ್ರೆ ದೇಹದ ಎತ್ತರವನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.

ನಿಮ್ಮ ಎತ್ತರವನ್ನು ಹೆಚ್ಚಿಸಲು ಸಹಾಯಕವಾಗುವ ಐದು ಯೋಗ ಭಂಗಿಗಳು ಇಂತಿವೆ.

1.ತಾಡಾಸನ:

ನೇರವಾಗಿ ನಿಂತು ನಿಮ್ಮ ಭುಜಗಳು ಮತ್ತು ಕುತ್ತಿಗೆಯನ್ನು ಜೋಡಿಸಿಕೊಳ್ಳಿ. ನಂತರ ಎರಡು ಕೈಗಳನ್ನು ನಿಧಾನವಾಗಿ ಮೇಲೇತ್ತುತ್ತಾ ದೀರ್ಘ ಉಸಿರು ತೆಗೆದುಕೊಳ್ಳಿ. ನಂತರ ಎರಡುಗಳನ್ನು ನಮಸ್ಕರಿಸಿದ ಭಂಗಿಯಲ್ಲಿ ಇಟ್ಟುಕೊಳ್ಳಿ. ಬಳಿಕ ನಿಧಾನವಾಗಿ ನಿಮ್ಮ ಹಿಮ್ಮಡಿಗಳನ್ನು ಮೇಲಕ್ಕೆತ್ತಿ ಹಾಗೂ ಕಾಲ್ಬೆರಳುಗಳ ಮೇಲೆ ನಿಂತುಕೊಳ್ಳಿ. ನಿಮ್ಮ ದೇಹವನ್ನು ಸಾಧ್ಯವಾದಷ್ಟು ಹಿಗ್ಗಿಸಿ ಮತ್ತು ನಿಮ್ಮ ಕಾಲುಗಳು ಹಾಗೂ ತೋಳುಗಳನ್ನು ನೇರವಾಗಿ ಇರಿಸಬೇಕು. ಹೀಗೆಯೇ ಈ ಭಂಗಿಯನ್ನು ಮಾಡುತ್ತಿದ್ರೆ, ಇದು ನಿಮ್ಮ ದೇಹದ ಎತ್ತರವಾಗಲು ಸಹಾಯಕವಾಗಿದೆ.

2. ಉಷ್ಟ್ರಾಸನ :
ಈ ಉಷ್ಟ್ರಾಸಹ ದೇಹದ ಎತ್ತರಕ್ಕೆ ಸಹಾಯವಾಗಿದೆ.  ಪ್ರಾರಂಭದಲ್ಲಿ ನಿಮ್ಮ ಕಾಲುಗಳನ್ನು ಹಿಂದಕ್ಕೆ ಚಾಚಿ ನೆಲದ ಮೇಲೆ ಮಂಡಿಯೂರಿ ಕುಳಿತು ಕೊಳ್ಳಿ. ನಿಮ್ಮ ಹೊಟ್ಟೆಯ ಭಾಗ ಮೇಲ್ಭಾಗಕ್ಕೆ ಮುಖ ಮಾಡಿರಲಿ. ನಂತರ ನಿಮ್ಮ ಎರಡೂ ಕೈಗಳನ್ನು ನಿಮ್ಮ ಸೊಂಟದ ಮೇಲೆ ಇರಿಸಿಕೊಂಡು  ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ಹೀಗೆಯೇ ನಿಧಾನವಾಗಿ ಕಮಾನಿನ ರೀತಿಯಲ್ಲಿ ಹಿಂದಕ್ಕೆ ಬಾಗಿ, ಬೆಂಬಲಕ್ಕಾಗಿ ನಿಮ್ಮ ಅಂಗೈಗಳನ್ನು ನಿಮ್ಮ ಕಾಲುಗಳ ಮೇಲೆ ಇಟ್ಟುಕೊಳ್ಳಿ.  ಮತ್ತು ನಿಮ್ಮ ತಲೆಯನ್ನು ಹಿಂದಕ್ಕೆ ಬಾಗಿಸಿ. ಸುಮಾರು 10 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿರಿ.

3.ಪಶ್ಚಿಮೋತ್ತನಾಸನ:
ಮೊದಲಿಗೆ ಎರಡು ಕಾಲುಗಳನ್ನು ಆದಷ್ಟು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು. ನಿಧಾನವಾಗಿ ಉಸಿರು ತೆಗೆದುಕೊಂಡು ಮುಂದಕ್ಕೆ ಬಾಗಬೇಕು. ಬಳಿಕ ಕೈಗಳಿಂದ ನಿಮ್ಮ ಕಾಲ್ಬೆರಳುಗಳನ್ನು ಹಿಡಿಯಲು ಪ್ರಯತ್ನಿಸಬೇಕು, ಈ ವೇಳೆ ಬೆನ್ನು ನೇರವಾಗಿರಬೇಕು. ಮತ್ತು ಸಾಧ್ಯವಾದಷ್ಟು ಹಣೆಯನ್ನು ಮೊಣಕಾಲುಗಳಿಗೆ ತಾಗುವಂತೆ ಪ್ರಯತ್ನಿಸಬೇಕು. ಆದ್ರೆಮ ಯಾವುದೇ ಕಾರಣಕ್ಕೂ ಮೊಣಕಾಲು ಬಗ್ಗಿಸಬಾರದು.

4. ವೃಕ್ಷಾಸನ :

ನೇರವಾಗಿ ನಿಂತು ಪಾದಗಳನ್ನು ಜೋಡಿಸಿ. ನಂತರ ಕೈಗಳನ್ನು ಬದಿಯಲ್ಲಿ ಇರಿಸಿ. ಈಗ ನಿಮ್ಮ ಬಲಗಾಲನ್ನು  ಎಡ ಮೊಣಕಾಲಿನ ಕಡೆಗೆ ಮಡಚಿ ಬಳಿಕ ಎಡ ಕಾಲಿನ ಮೇಲೆ ನಿಂತುಕೊಳ್ಳಿ. ನಿಮ್ಮ ಬಲ ಪಾದದ ಅಡಿಭಾಗವು ಎಡ ತೊಡೆಯ ಒಳಭಾಗವನ್ನು ಸ್ಪರ್ಶಿಸಬೇಕು. ನಂತರ ನಿಮ್ಮ ಕೈಗಳನ್ನು ಮೇಲಕೆತ್ತಿ ಹಾಗೂ ನಿಮ್ಮ ಕೈಗಳು ನಮಸ್ಕಾರ ಭಂಗಿಯಲ್ಲಿ ಇರಲಿ. ಕೆಲವು ಸೆಕೆಂಡುಗಳ ಕಾಲ ಈ ಭಂಗಿಯನ್ನು ಹಿಡಿದುಕೊಳ್ಳಿ.

ಇದನ್ನು ಓದಿ: ಬಾಯಿ ಹುಣ್ಣು ನಿಮಗೆ ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿದೆಯೇ? ಆಯುರ್ವೇದ ತಜ್ಞರ ಸಲಹೆಯನ್ನು ಪಾಲಿಸಿ

5.ಧನುರಾಸನ:

ಈ ಆಸನವನ್ನು ಪ್ರಾರಂಭಿಸುವಾಗ ಮೊದಲಿಗೆ ನೆಲದ ಕಡೆ ಮುಖ ಮಾಡಿ ಮಲಗಬೇಕು. ಬಳಿಕ ಹಾಗೇ ಹಿಂದಿನಿಂದ ಎರಡು  ಕಾಲುಗಳನ್ನು ಮೇಲಕ್ಕೆತ್ತಿ. ನಂತರ ಮುಖ ಮೇಲಕ್ಕೆತ್ತಿ ಹಿಂದೆಯಿಂದ ಎರಡು ಕೈಗಳಿಂದ ಗಟ್ಟಿಯಾಗಿ ಪಾದ ಹಿಡಿದುಕೊಂಡು ನಿಧಾನವಾಗಿ ಉಸಿರು ತೆಗೆದು ಕೊಳ್ಳಬೇಕು. ಹೀಗೆ ಕೆಲವು ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 7:17 pm, Thu, 17 November 22