Post Covid: ದೀರ್ಘಕಾಲಿಕ ಕೊವಿಡ್​ ಬಳಿಕ ಅನುಸರಿಸಬಹುದಾದ ವ್ಯಾಯಾಮ ಭಂಗಿಗಳು

ಯೋಗಾಸನ: ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ವೃಕ್ಷಾಸನ ಸಹಾಯಕವಾಗಿದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಜತೆಗೆ ಮಾನಸಿಕ ಅಸ್ವಸ್ಥತೆಯನ್ನು ಸುಧಾರಿಸುತ್ತದೆ.

Post Covid: ದೀರ್ಘಕಾಲಿಕ ಕೊವಿಡ್​ ಬಳಿಕ ಅನುಸರಿಸಬಹುದಾದ ವ್ಯಾಯಾಮ ಭಂಗಿಗಳು
ಸಾಂದರ್ಭಿಕ ಚಿತ್ರ
Edited By:

Updated on: Jun 27, 2021 | 1:53 PM

ದೇಶ ಕೊವಿಡ್​-19 ಸಾಂಕ್ರಾಮಿಕದಿಂದಾಗಿ ನಲುಗಿ ಹೋಗಿದೆ. ಕೊವಿಡ್​ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗುತ್ತಿದ್ದರೂ ಎರಡನೇ ಅಲೆ, ಮೂರನೇ ಅಲೆಯ ಹೆಸರು ಜನರ ತಲೆಕೆಡಿಸಿದೆ. ಹೀಗಿರುವಾಗ ಕೊವಿಡ್​ ಸೋಂಕಿನಿಂದ ಹೊರಬಂದ ಮೇಲೂ ಸಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿರಬಹುದು. ಹೀಗಿರುವಾಗ ಯೋಗಾಭ್ಯಾಸದಿಂದ ನಿಮ್ಮ ದೇಹವನ್ನು ಸದೃಢವಾಗಿರಿಸಿಕೊಳ್ಳಬಹುದು. ಹಾಗಿದ್ದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮತ್ತು ಉಸಿರಾಟ ಕ್ರಿಯೆಯನ್ನು ಸರಾಗಗೊಳಿಸುವ ಯೋಗ ಭಂಗಿಗಳ ಕುರಿತಾಗಿ ತಿಳಿಯೋಣ.

ದೀರ್ಘಕಾಲಿಕ ಕೊವಿಡ್​ ಸಮಯಲ್ಲಿ ನಿಮ್ಮ ದೇಹ ನಿಧಾನವಾಗಿ ಸದೃಢವಾಗುತ್ತಾ ಹೋಗಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಜತೆಗೆ ಮಾನಸಿಕವಾಗಿ ಸದೃಢರಾಗಬೇಕು. ಅನಗತ್ಯ ಚಿಂತೆಯು ಮನಷ್ಯನ ಆರೋಗ್ಯದ ಸ್ಥಿತಿಯನ್ನು ಹದಗೆಡಿಸುತ್ತದೆ. ಹಾಗಾಗಿ ವ್ಯಾಯಾಮ ಮತ್ತು ಯೋಗಾಸನದ ಮೂಲಕವಾಗಿ ಇಂತಹ ಸಮಸ್ಯೆಗಳಿಂದ ದೂರವಿರಬಹುದು.

ಅನುಲೋಮ- ವಿಲೋಮ ಪ್ರಾಣಾಯಾಮವನ್ನು ನೀವು ಮಾಡಬಹುದು. ಈ ಮೂಲಕ ನಿಮ್ಮ ಉಸಿರಾಟ ಕ್ರಿಯೆ ಸರಾಗವಾಗುತ್ತದೆ. ಜತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಶ್ವಾಸಕೋಶದ ಸದೃಢತೆ ಮುಖ್ಯವಾಗಿರುವುದರಿಂದ ಅನುಲೋಮ ವಿಲೋಮ ಪ್ರಾಣಾಯಾಮದ ಮೂಲಕವಾಗಿ ಉಸಿರಾಟ ಕ್ರಿಯೆ ಸರಾಗವಾಗುತ್ತದೆ.

ಭುಜಂಗಾಸನ ದೇಹದ ನರಭಾಗಗಳನ್ನು ಸದೃಢಗೊಳಿಸುತ್ತದೆ. ಬೆನ್ನಿನ ಹುರಿಯನ್ನು ಹಾಗೂ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಸಹಾಯವಾಗುತ್ತದೆ. ಶ್ವಾಸಕೋಶ ಹಿಗ್ಗುವುದರಿಂದ ಉಸಿರಾಟ ಕ್ರಿಯೆ ಸರಾಗವಾಗಲು ಸಹಾಯವಾಗುತ್ತದೆ. ಮನಸ್ಸಿನ ಶಾಂತಿಯ ಜತೆಗೆ ದೇಹ ಸಡಿಲಗೊಳ್ಳಲು ಸಹಾಯ ಮಾಡುತ್ತದೆ.

ಕಾಲು, ಸೊಂಟ ನೋವಿಗೆ ಪರಿಹಾರ ಕಂಡುಕೊಳ್ಳಲು ಪಶ್ಚಿಮೊತ್ತಾನಾಸನ ಯೋಗ ಭಂಗಿಯನ್ನು ಮಾಡುತ್ತಾರೆ. ಜತೆಗೆ ಉಸಿರಾಟ ಕ್ರಿಯೆ ಸರಾಗವಾಗಲು ಸಹಾಯ ಮಾಡುತ್ತವೆ. ರಕ್ತದೊತ್ತಡದಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಈ ಯೋಗ ಭಂಗಿ ಸಹಾಯಕವಾಗಿದೆ.

ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ವೃಕ್ಷಾಸನ ಸಹಾಯಕವಾಗಿದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಜತೆಗೆ ಮಾನಸಿಕ ಅಸ್ವಸ್ಥತೆಯನ್ನು ಸುಧಾರಿಸುತ್ತದೆ. ಉಸಿರಾಟ ಕ್ರಿಯೆಯನ್ನು ಸುಧಾರಿಸುವದರ ಜತೆಗೆ ದೇಹದ ಸದೃಢತೆಯನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ:

International Yoga Day 2021: ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುವ ಐದು ಯೋಗಾಸನ

Yoga Benefits: ಬೆಳಗ್ಗೆ ಬೇಗ ಎದ್ದು ಮಾಡುವ ಯೋಗ ಭಂಗಿಗಳಿವು