AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yoga Benefits: ಬೆಳಗ್ಗೆ ಬೇಗ ಎದ್ದು ಮಾಡುವ ಯೋಗ ಭಂಗಿಗಳಿವು

ಆರೋಗ್ಯದ ಕುರಿತಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ಜತೆಗೆ ಯೋಗಾಸನಗಳನ್ನು ಮಾಡುವಾಗ ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ಯೋಗಾಸನ ಮಾಡುವ ಮುಂಚೆ ಆರೋಗ್ಯ ಸುಧಾರಿಸುವ ಯಾವ ಯೋಗ ಭಂಗಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತಾಗಿ ವೈದ್ಯರಲ್ಲಿ ಸಲಹೆ ಪಡೆದುಕೊಳ್ಳುವುದು ಉತ್ತಮ.

Yoga Benefits: ಬೆಳಗ್ಗೆ ಬೇಗ ಎದ್ದು ಮಾಡುವ ಯೋಗ ಭಂಗಿಗಳಿವು
ಸಾಂದರ್ಭಿಕ ಚಿತ್ರ
TV9 Web
| Updated By: Skanda|

Updated on: Jun 22, 2021 | 6:45 AM

Share

ಯೋಗ ಭಂಗಿಗಳನ್ನು ಪ್ರತಿನಿತ್ಯ ಬೆಳಗ್ಗೆ ಮಾಡುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಇಡೀ ದಿನ ಮನಸ್ಸು ಚೈತನ್ಯದಿಂದ ತುಂಬಿರುವಂತೆ ಮಾಡುತ್ತದೆ. ಬೆಳಿಗ್ಗೆ ಎದ್ದಾಕ್ಷಣದಿಂದ ಮನಸ್ಸು ನಿರಾಳವಾಗಿದ್ದರೆ ಅಥವಾ ಚಟುವಟಿಕೆಯಿಂದ ಇದ್ದರೆ ಆ ದಿನಪೂರ್ತಿ ಖುಷಿಯಾಗಿರಲು ಸಾಧ್ಯ. ಹಾಗಿದ್ದಾಗ ಪ್ರತಿನಿತ್ಯ ಬೆಳಗ್ಗೆ ಮಾಡಬಹುದಾದ ಕೆಲವು ಯೋಗ ಭಂಗಿಗಳ ಕುರಿತಾಗಿ ತಿಳಿಯೋಣ.

ಯೋಗ ಭಂಗಿಗಳು ದೇಹವನ್ನು ಮಾತ್ರವಲ್ಲ ಮಾನಸಿಕ ಚಿಂತೆಯನ್ನೂ ದೂರ ಮಾಡುತ್ತವೆ. ಆರೋಗ್ಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ. ಬೆಳಗ್ಗೆ ಬೇಗ ಏಳುವ ಅಭ್ಯಾಸ ರೂಢಿಯಲ್ಲಿರಲಿ. ಜತೆಗೆ ದೇಹವನ್ನು ಸದೃಢವಾಗಿರಿಸುವ ಕೆಲವೊಂದಿಷ್ಟು ಯೋಗಾಸನಗಳನ್ನು ಅಭ್ಯಾಸ ಮಾಡುವ ಬಗ್ಗೆ ಗಮನವಿರಲಿ.

ಸೂರ್ಯ ನಮಸ್ಕಾರ ಬೆಳಗ್ಗೆ ಎದ್ದಾಕ್ಷಣ ಸೂರ್ಯ ದೇವನಿಗೆ ನಮಸ್ಕಾರ ಮಾಡುವುದು ಉತ್ತಮ. 12 ಆಸನಗಳ ಸಂಯೋಜನೆಯನ್ನು ಹೊಂದಿರುವ ಸೂರ್ಯ ನಮಸ್ಕಾರ ಸ್ನಾಯುಗಳನ್ನು ಬಲಪಡಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬೆನ್ನು, ಸೊಂಟ ನೋವಿಗೆ ಪರಿಹಾರ ನೀಡುತ್ತದೆ. ಜತೆಗೆ ಚಯಾಪಚಯ ಕ್ರಿಯೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ಭುಜಂಗಾಸನ ಈ ಯೋಗ ಭಂಗಿಯು  ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನಿನ ನೋವನ್ನು ಸುಧಾರಿಸುತ್ತದೆ ಹಾಗೂ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಲು ಈ ಆಸನ ಸಹಾಯ ಮಾಡುತ್ತದೆ. ತಲೆಭಾರ, ಕುತ್ತಿಗೆ, ಕಾಲುನೋವು, ಕೈ ನೋವುಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮುದ್ರಾಸನ ಜೀರ್ಣಕ್ರಿಯೆ ಸರಿಯಾದ ಕ್ರಮದಲ್ಲಿ ಆಗುವಂತೆ ನೋಡಿಕೊಳ್ಳುವ ಆಸನವಿದು. ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುವುದರ ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜತೆಗೆ ಮಾನಸಿಕ ಚಿಂತೆಯನ್ನು ದೂರ ಮಾಡಿಕೊಳ್ಳಲು ಈ ಯೋಗ ಭಂಗಿ ಸಹಾಯಕವಾಗಿದೆ.

ಪಾರ್ಶ್ವ ಸುಖಾಸನ ಮಾನಸಿಕ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳಲು ಈ ಯೋಗ ಭಂಗಿ ಸಹಾಯಕ. ಮನಸ್ಸನ್ನು ಶಾಂತವಾಗಿರಿಸಲು ಮತ್ತು ಅನಗತ್ಯ ಚಿಂತೆಗಳಿಂದ ದೂರವಿರಲು ಈ ಯೋಗ ಭಂಗಿ ಸಹಾಯಕವಾಗಿದೆ. ಜತೆಗೆ ಸೊಂಟ ನೋವು ನಿವಾರಣೆಗೆ ಸಹಾಯಕವಾಗಿದೆ.

ಕುಂಭಾಸನ ಈ ಯೋಗ ಭಂಗಿಯಿಂದ ದೇಹ ಸಡಿಲವಾಗುತ್ತದೆ. ಬೆನ್ನು, ಹೊಟ್ಟೆಯ ಭಾಗವನ್ನು ಸುಧಾರಿಸುತ್ತದೆ. ಕೈಕಾಲುಗಳು ಸಡಿಲವಾಗುವುದರಿಂದ ಕಾಲು ಸೆಳೆತ, ಮೈ-ಕೈ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಯೋಗ ಭಂಗಿ ಇದಾಗಿದೆ.

ಸೂಚನೆ: ಆರೋಗ್ಯದ ಕುರಿತಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ಜತೆಗೆ ಯೋಗಾಸನಗಳನ್ನು ಮಾಡುವಾಗ ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ಯೋಗಾಸನ ಮಾಡುವ ಮುಂಚೆ ಆರೋಗ್ಯ ಸುಧಾರಿಸುವ ಯಾವ ಯೋಗ ಭಂಗಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತಾಗಿ ವೈದ್ಯರಲ್ಲಿ ಸಲಹೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

International Yoga Day 2021: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ M Yoga App ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

International Yoga Day 2021: ಕೊರೊನಾ ಸೋಂಕಿತರೊಂದಿಗೆ ಕೊವಿಡ್​ ಕೇಂದ್ರದಲ್ಲೇ ಯೋಗ ದಿನಾಚರಣೆ ಆಚರಿಸಿದ ರೇಣುಕಾಚಾರ್ಯ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!