Yoga for Men’s Reproductive Health: ಈ ಆಸನಗಳು ಪುರುಷರ ವೀರ್ಯಾಣುವಿನ ಸಂಖ್ಯೆಯನ್ನು ಹೆಚ್ಚಿಸುತ್ತೆ

ಪುರುಷರಲ್ಲಿಯೂ ಬಂಜೆತನ ಸಮಸ್ಯೆ ಇರುತ್ತದೆ. ಧೂಮಪಾನ, ಮದ್ಯಪಾನ, ಅತ್ಯಧಿಕ ಮಾನಸಿಕ ಒತ್ತಡ ಇವುಗಳಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗಿ ಸಂತಾನೋತ್ಪತ್ತಿ ಉಂಟಾಗುವುದಿಲ್ಲ ಅದಕ್ಕಾಗಿ ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ವೀರ್ಯ, ಸಂತಾನೋತ್ಪತ್ತಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಹಾಗಾದರೆ ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಯಾವ ಆಸನ ಮಾಡಬೇಕು? ಇಲ್ಲಿದೆ ಮಾಹಿತಿ.

Yoga for Mens Reproductive Health: ಈ ಆಸನಗಳು ಪುರುಷರ ವೀರ್ಯಾಣುವಿನ ಸಂಖ್ಯೆಯನ್ನು ಹೆಚ್ಚಿಸುತ್ತೆ
ಪ್ರಾತಿನಿಧಿಕ ಚಿತ್ರ
Edited By:

Updated on: Jul 15, 2024 | 7:02 PM

ದಂಪತಿಗೆ ಮಕ್ಕಳಾಗದಿದ್ದರೆ ಅದಕ್ಕೆ ಮಡದಿಯಲ್ಲಿರುವ ಸಮಸ್ಯೆಯೇ ಕಾರಣವಲ್ಲ. ಪುರುಷರಲ್ಲಿಯೂ ಬಂಜೆತನ ಸಮಸ್ಯೆ ಇರುತ್ತದೆ. ಧೂಮಪಾನ, ಮದ್ಯಪಾನ, ಅತ್ಯಧಿಕ ಮಾನಸಿಕ ಒತ್ತಡ ಇವುಗಳಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗಿ ಸಂತಾನೋತ್ಪತ್ತಿ ಉಂಟಾಗುವುದಿಲ್ಲ ಅದಕ್ಕಾಗಿ ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ವೀರ್ಯ, ಸಂತಾನೋತ್ಪತ್ತಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಹಾಗಾದರೆ ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಯಾವ ಆಸನ ಮಾಡಬೇಕು? ಇಲ್ಲಿದೆ ಮಾಹಿತಿ.

ಪುರುಷರ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಂಜುಳಾಯೋಗ (manjulayoga.in) ಎಂಬ ಇನ್ಸ್ಟ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಳ್ಳಲಾಗಿದ್ದು ಇಲ್ಲಿ ತಿಳಿಸಿರುವ ಯೋಗ ದಿನಚರಿಯನ್ನು ಪುರುಷರು ಪಾಲನೆ ಮಾಡುವುದರಿಂದ ಸಂತಾನೋತ್ಪತ್ತಿ ಅಂಗಗಳ ಆರೋಗ್ಯವೂ ಹೆಚ್ಚಾಗುತ್ತದೆ. ಈ ವೀಡಿಯೊದಲ್ಲಿ, ನೌಕಾಸನ ರೂಪಾಂತರಗಳು, ಬದ್ದ ಕೋನಾಸನ, ಪಶ್ಚಿಮೋತ್ಥಾನಾಸನ ಮತ್ತು ಚಿಟ್ಟೆ ಭಂಗಿಗಳ ಬಗ್ಗೆ ಮತ್ತು ಅವುಗಳನ್ನು ಯಾವ ರೀತಿ ಮಾಡಬೇಕು ಎಂಬುದನ್ನು ವಿವರವಾಗಿ ತಿಳಿಸಲಾಗಿದ್ದು ಈ ನಾಲ್ಕು ಆಸನಗಳು ಕೂಡ ಉತ್ತಮ ಫಲಿತಾಂಶ ನೀಡುತ್ತದೆ. ಈ ಆಸನಗಳನ್ನು ಬೆಳಿಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಅಭ್ಯಾಸ ಮಾಡುವುದು ಉತ್ತಮ.

ಇದನ್ನೂ ಓದಿ: Men Health:ಪುರುಷರೇ ಎಚ್ಚರ, ಅತಿಯಾದ ಮೊಬೈಲ್ ಬಳಕೆಯಿಂದ ನಿಮ್ಮ ವೀರ್ಯ ಗುಣಮಟ್ಟದ ಮೇಲೆ ನೇರ ಪರಿಣಾಮ

ಮತ್ತಿತರ ಪ್ರಯೋಜನಗಳೇನು?

ನೌಕಾಸನ, ಬದ್ದ ಕೋನಾಸನ, ಪಶ್ಚಿಮೋತ್ಥಾನಾಸನ ಮತ್ತು ಚಿಟ್ಟೆ ಭಂಗಿ ನಿಯಮಿತವಾಗಿ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ಒತ್ತಡ ಕಡಿಮೆಯಾಗುತ್ತದೆ, ಅಲ್ಲದೆ ಈ ಆಸನಗಳು ಸ್ನಾಯುಗಳನ್ನು ಶಕ್ತಿಯುತವನ್ನಾಗಿ ಮಾಡುತ್ತದೆ. ತೊಡೆಗಳಿಗೆ ಹಾಗೂ ಕಾಲುಗಳಿಗೆ ದೃಢತೆಯನ್ನು ಕೊಡುತ್ತದೆ, ಮುಖ್ಯವಾಗಿ ಮನಸ್ಸಿಗೆ ಆರಾಮ ಕೊಡುತ್ತದೆ. ಈ ಭಂಗಿಗಳನ್ನು ನಿಮ್ಮ ದೈನಂದಿನ ದಿನಚರಿಯ ಭಾಗವಾಗಿ ಮಾಡಿಕೊಂಡು ವ್ಯತ್ಯಾಸ ಗಮನಿಸಿ. ಆದರೆ ಯಾವುದೇ ಹೊಸ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ನಿಮ್ಮ ಆರೋಗ್ಯ ತಜ್ಞರನ್ನು ಸಂಪರ್ಕಿಸಿ ಆ ಬಳಿಕವೇ ಆಸನವನ್ನು ಪ್ರಯತ್ನಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ