Noni Benefits: 450ಕ್ಕೂ ಹೆಚ್ಚಿನ ರೋಗಗಳ ನಿವಾರಣೆ ಮಾಡುವ ಶಕ್ತಿ ಈ ಹಣ್ಣಿನ ರಸದಲ್ಲಿದೆ
ನೋನಿ ಹಣ್ಣನ್ನು ಸಾಂಪ್ರದಾಯಿಕ ಔಷಧದಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಇದನ್ನು ನಯನ ಎಂದು ಕರೆಯುತ್ತಾರೆ. ಈ ಹಣ್ಣಿಗೆ ನೋನಿ ಎಂದು ಹೆಸರು ಬರಲು ಕಾರಣ ನೋ ಇಂಜೆಕ್ಷನ್ ನೋ ಆಪರೇಷನ್ ಅಂದರೆ ಇವೆರಡು ಇಲ್ಲದೆಯೇ ಇದರಲ್ಲಿರುವ ಔಷಧೀಯ ಗುಣಗಳು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಹಾಗಾಗಿ ಈ ಹಣ್ಣಿಗೆ ನೋನಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ
ನೋನಿ ಹಣ್ಣಿನ ಬಗ್ಗೆ ನೀವು ಕೇಳಿರಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಉಷ್ಣವಲಯದ ಹಣ್ಣನ್ನು ಸಾಂಪ್ರದಾಯಿಕ ಔಷಧದಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಇದನ್ನು ನಯನ ಎಂದು ಕರೆಯುತ್ತಾರೆ. ಈ ಹಣ್ಣಿಗೆ ನೋನಿ ಎಂದು ಹೆಸರು ಬರಲು ಕಾರಣ ನೋ ಇಂಜೆಕ್ಷನ್ ನೋ ಆಪರೇಷನ್ ಅಂದರೆ ಇವೆರಡು ಇಲ್ಲದೆಯೇ ಇದರಲ್ಲಿರುವ ಔಷಧೀಯ ಗುಣಗಳು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಹಾಗಾಗಿ ಈ ಹಣ್ಣಿಗೆ ನೋನಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ನೋನಿ ರಸವನ್ನು ನೋನಿ ಮರದ ಮಾಗಿದ ಹಣ್ಣಿನಿಂದ ತಯಾರಿಸಲಾಗುತ್ತದೆ. ಇದು ಬಲವಾದ, ಕಟುವಾದ ವಾಸನೆ ಮತ್ತು ಕಹಿ ರುಚಿಯನ್ನು ಹೊಂದಿರುತ್ತದೆ. ಈ ಹಣ್ಣುಗಳಲ್ಲಿ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ವಿವಿಧ ಆರೋಗ್ಯ ಪ್ರಯೋಜನಗಳ ಸಂಭಾವ್ಯ ಮೂಲವಾಗಿದೆ. ಈ ಹಣ್ಣಿನ ರಸವನ್ನು ಪ್ರತಿನಿತ್ಯ ಮೂರರಿಂದ ನಾಲ್ಕು ಚಮಚ ಸೇವನೆ ಮಾಡುವುದರಿಂದ ಮನುಷ್ಯನಿಗೆ ಒಂದು ಊಟದಲ್ಲಿ ಸಿಗದಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಇದು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹಳೆಕಾಲದಲ್ಲಿ ಆಫ್ರಿಕಾದ ಗುಡ್ಡಗಾಡಿನ ಜನರು ಇದನ್ನು ಬಳಸುತ್ತಿದ್ದರು. ಅವರು ಇದನ್ನು ಸೇವನೆ ಮಾಡಲು ಮತ್ತು ಗಾಯಗಳನ್ನು ಗುಣಪಡಿಸುವುದಕ್ಕೂ ಬಳಕೆ ಮಾಡುತ್ತಿದ್ದರು ಹಾಗಾಗಿ ಅಲ್ಲಿಯ ಜನರು 120 ರಿಂದ 150 ವರ್ಷ ಗಟ್ಟುಮುಟ್ಟಾಗಿ ಇರುತ್ತಿದ್ದರು ಅಂದರೆ ಈ ಹಣ್ಣಿನ ರಸದಲ್ಲಿ ಅಷ್ಟು ಶಕ್ತಿಯಿದೆ ಎಂದು ಹೇಳಲಾಗುತ್ತದೆ.
ಮತ್ತಷ್ಟು ಓದಿ: ಚರ್ಮದ ಆರೋಗ್ಯದಿಂದ ಹಿಡಿದು ಮಧುಮೇಹದವರೆಗೆ ಎಲ್ಲದಕ್ಕೂ ಕರಿಬೇವಿನ ಎಲೆ!
ಆರೋಗ್ಯ ಪ್ರಯೋಜನಗಳೇನು? ಕಾನ್ಸರ್ ರೋಗಕ್ಕೂ ಇದು ರಾಮಬಾಣವಾಗಿದೆ. ಮಲಬದ್ಧತೆ, ನಿದ್ರಾಹೀನತೆ ಹೀಗೆ ಪ್ರತಿಯೊಂದು ಸಮಸ್ಯೆಯನ್ನು ನಿವಾರಣೆ ಮಾಡುವ ಶಕ್ತಿ ಇದರಲ್ಲಿದೆ. ಅಲ್ಲದೆ ಸಂಧಿವಾತ, ಬಿಪಿ, ಋತುಚಕ್ರಕ್ಕೆ ಸಂಬಂಧ ಪಟ್ಟ ಸಮಸ್ಯೆ ಸೇರಿದಂತೆ 450ಕ್ಕೂ ಹೆಚ್ಚಿನ ರೋಗವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆದರೆ ಮಾರುಕಟ್ಟೆಗಳಲ್ಲಿ ಇದರ ಹೆಸರಿನಲ್ಲಿ ಹಲವಾರು ರೀತಿಯ ಔಷಧಿಗಳು ಬಂದಿದ್ದು ಯಾವುದು ನೈಸರ್ಗಿಕ ಎಂಬುದನ್ನು ನೀವೇ ಆಯ್ಕೆ ಮಾಡಬೇಕಾಗಿದೆ. ಇದರ ಹೊರತಾಗಿ ಈ ಹಣ್ಣುಗಳು ಮನೆಯಲ್ಲಿ ಇದ್ದಲ್ಲಿ ದಿನನಿತ್ಯ ಇದರ ಹಣ್ಣಿನ ಈಸವನ್ನು ಯಾವುದೇ ಕಲಬೆರಕೆಗಳಿಲ್ಲದೆಯೇ ಕುಡಿಯಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ