ದೇಶದಲ್ಲಿ ಅಧಿಕ ರಕ್ತದೊತ್ತಡದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದೇ ತಜ್ಞರು ಕರೆಯುತ್ತಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಯುನಿವರ್ಸಿಟಿಯೊಂದು ಕೈಗೊಂಡ ಅಧ್ಯಯದಲ್ಲಿ ಅಧಿಕ ರಕ್ತದೊತ್ತಡದಿಂದಲೇ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ ಎನ್ನುವ ಅಂಶ ಬಹಿರಂಗವಾಗಿದೆ. ಜತಗೆ ಮೊಸರಿನ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎನ್ನುವುದನ್ನು ಕಂಡುಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಾಗತಿಕವಾಗಿ 30-79 ವಯಸ್ಸಿನ ಶೇ1.28 ಬಿಲಿಯನ್ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದ್ದರಿಂದ ಜಾಗತಿಕವಾಗಿಯೂ ಅಧಿಕ ರಕ್ತದೊತ್ತಡ ದೊಡ್ಡ ಕಾಯಿಲೆಯಾಗಿ ಮಾರ್ಪಾಡಾಗಿದೆ ಎನ್ನಬಹುದು. ಹೈಪರ್ ಟೆನ್ಷನ್ ಮಾನಸಿಕ ಆರೋಗ್ಯವನ್ನೂ ಹಾಳು ಮಾಡುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡದ ನಿಯಂತ್ರಣ ಮಾಡಿಕೊಳ್ಳುವುದು ಅಥವಾ ಸಣ್ಣ ಸಣ್ಣ ವಿಷಯಗಳಿಗೂ ಟೆನ್ಷನ್ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು. ಈ ರೀತಿಯ ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಮೊಸರು ಸಹಕಾರಿಯಾಗಿದೆ.
ಮೊಸರಿನಲ್ಲಿನಲ್ಲಿ ಯಥೇಚ್ಛವಾಗಿರುವ ಮೈಕ್ರೋ ನ್ಯೂಟ್ರಿಯಂಟ್ಸ್ ಗಳಾದ ಕ್ಯಾಲ್ಸಿಯಂ, ಮಾಗ್ನಿಶಿಯಂ ಹಾಗೂ ಪೊಟ್ಯಾಷಿಯಂನಂತಹ ಅಂಶಗಳು ದೇಹವನ್ನು ತಂಪಾಗಿರಿಸಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೆ ನಿಮ್ಮ ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ಅಲ್ಲದೆ ಮೊಸರಿನಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ ಎನ್ನುವುದು ಮೊಸರಿನ ವಿಶೇಷ ಗುಣ ಎಂದು ದಕ್ಷಿಣ ಆಫ್ರಿಕಾ ಯುನಿವರ್ಸಿಟಿಯೊಂದು ಕೈಗೊಂಡ ಅಧ್ಯಯದಲ್ಲಿ ಸಾಬೀತಾಗಿದೆ.
ಮೊಸರಿನ ಉಪಯೋಗಗಳು
ಮೊಸರು ಕರುಳಿನ ಆರೋಗ್ಯಕ್ಕೆ ಬೇಕಾದ ಪ್ರೋಬಯಾಟಿಕ್ ಅಂಶಗಳನ್ನು ಸಮೃದ್ಧವಾಗಿ ಹೊಂದಿರುತ್ತದೆ. ಹೀಗಾಗಿ ಕರುಳಿನ ಸಮಸ್ಯೆ ಇರುವವರಿಗೆ ಮೊಸರು ಉತ್ತಮ ಆಹಾರವಾಗಲಿದೆ.
ಮೊಸರು ಒಬ್ಬರ ದೇಹಕ್ಕೆ ಒಂದು ದಿನಕ್ಕೆ ಬೇಕಾಗುವಷ್ಟು ಪ್ರೋಟೀನ್ ಅಂಶವನ್ನು ನೀಡುತ್ತದೆ. ಅಲ್ಲದೆ ಮೊಸರು ಸಸ್ಯಾಹಾರಿಗಳಿಗೆ ಉತ್ತಮ ಪ್ರೋಟೀನ್ಯುಕ್ತ ಆಹಾರವಾಗಿದೆ.
ಮೊಸರಿನಲ್ಲಿರುವ ಪ್ರೊಬಯಾಟಿಕ್ ಅಂಶಗಳು ಹೊಟ್ಟೆ ಉಬ್ಬರಿಸುವಿಕೆ ಹಾಗೂ ಅಜೀರ್ಣದಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ. ಅಲ್ಲದೆ ಕೆಲವೊಮ್ಮೆ ಮಸಾಲೆ ಪದಾರ್ಥಗಳ ಸೇವನೆಯಿಂದ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಆಗ ಮೊಸರನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ಪರಿಹಾರವಾಗುತ್ತದೆ.
ಮೊಸರಿನಲ್ಲಿರುವ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಅಂಶಗಳು ನಿಮ್ಮ ಮೂಳೆಗಳನ್ನು ಬಲಗೊಳಿಸುತ್ತದೆ. ಹೀಗಾಗಿ ಮೊಸರು ನಿಮ್ಮ ದೇಹದ ಸುರಕ್ಷತೆಗೆ ಉತ್ತಮ ಆಹಾರವಾಗಿದೆ.
ಮೊಸರು ನಿಮ್ಮ ದೇಹದ ತೂಕ ನಿರ್ಹವಣೆಯಲ್ಲಿಯೂ ಬಹುಮುಖ್ಯ ಪಾತ್ರವಹಿಸುತ್ತದೆ. ಹೀಗಾಗಿ ಪ್ರತಿದಿನ ಮೊಸರಿನ ಸೇವನೆ ನಿಮ್ಮ ರಕ್ತದೊತ್ತಡವನ್ನು ಕಡಿಮೆಗೊಳಿಸುವುದಲ್ಲದೆ ನಿಮ್ಮ ದೇಹದ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ.
ಇದನ್ನೂ ಓದಿ:
ಈ ಆಹಾರಗಳ ಸೇವನೆಯಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗಬಹುದು
Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು
Published On - 4:58 pm, Mon, 13 December 21