ಉಗುರು ಬೆಳೆಯುವ ಮುನ್ನವೇ ತುಂಡಾಗುತ್ತಿದೆಯೇ? ನಿರ್ಲಕ್ಷ್ಯ ಬೇಡ, ಇದು ಈ ಕಾಯಿಲೆಗಳ ಸಂಕೇತ
ಕೆಲವು ಮಹಿಳೆಯರ ಉಗುರುಗಳು ಸ್ವಲ್ಪ ಉದ್ದ ಬಂದ ಕೂಡಲೇ ಮುರಿಯುತ್ತವೆ. ಅವುಗಳಲ್ಲಿ ಬಿಳಿ ಗೆರೆಗಳು ಕೂಡ ಬರುತ್ತವೆ. ಈ ಎಲ್ಲಾ ವಿಷಯಗಳನ್ನು ನೀವು ಸಾಮಾನ್ಯ ಎಂದು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹದಲ್ಲಿನ ಪೋಷಕಾಂಶಗಳ ಕೊರತೆಯ ಸಂಕೇತವಾಗಿರಬಹುದು. ಹೀಗಾಗಿ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.
ಮಹಿಳೆಯರು ಉದ್ದನೆಯ ಉಗುರುಗಳನ್ನು ಇಷ್ಟಪಡುತ್ತಾರೆ. ಇದು ಅವರ ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬುವುದು ಅನೇಕರ ನಂಬಿಕೆ. ಇದಲ್ಲದೇ ತಮ್ಮ ಉಗುರುಗಳಿಗೆ ಉತ್ತಮ ಆಕಾರ ನೀಡಿ, ನೇಲ್ ಪಾಲಿಶ್ ಇತ್ಯಾದಿಗಳನ್ನು ಹಚ್ಚಿ ಸುಂದರವಾಗಿಸುತ್ತಾರೆ. ಆದರೆ ಕೆಲವೊಮ್ಮೆ ಉಗುರುಗಳು ಸರಿಯಾಗಿ ಬೆಳೆಯುವುದಿಲ್ಲ. ಮತ್ತೊಂದೆಡೆ, ಕೆಲವು ಮಹಿಳೆಯರ ಉಗುರುಗಳು (Nails) ಸ್ವಲ್ಪ ಉದ್ದ ಬಂದ ಕೂಡಲೇ ಮುರಿಯುತ್ತವೆ. ಅವುಗಳಲ್ಲಿ ಬಿಳಿ ಗೆರೆಗಳು ಕೂಡ ಬರುತ್ತವೆ. ಈ ಎಲ್ಲಾ ವಿಷಯಗಳನ್ನು ನೀವು ಸಾಮಾನ್ಯ ಎಂದು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹದಲ್ಲಿನ ಪೋಷಕಾಂಶಗಳ ಕೊರತೆಯ ಸಂಕೇತವಾಗಿರಬಹುದು. ಹೀಗಾಗಿ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.
ಆಗಾಗ ಉಗುರು ತುಂಡಾಗುವುದು ಈ ಕಾಯಿಲೆಗಳ ಲಕ್ಷಣ ನರಗಳಿಗೆ ಸಂಬಂಧಿಸಿದ ಕಾಯಿಲೆಯ ಸಂಕೇತ ಉಗುರುಗಳು ಆಗಾಗ ತುಂಡಾಗುವುದು ಜೀವಕೋಶ ಮತ್ತು ನರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಸೂಚಿಸುತ್ತದೆ. ದೇಹದಲ್ಲಿ ವಿಟಮಿನ್ ಬಿ-12 ಕೊರತೆ ಉಂಟಾದಾಗ ಜೀವಕೋಶಗಳು ಸರಿಯಾಗಿ ರಚನೆಯಾಗದೆ ನರಮಂಡಲವು ಆರೋಗ್ಯಕರವಾಗಿ ಉಳಿಯಲಾರದು ಮತ್ತು ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಉಗುರು ತುಂಡಾಗುತ್ತವೆ. ವಿಟಮಿನ್ ಬಿ-12 ಕೊರತೆಯನ್ನು ನೀಗಿಸಲು ಮೀನು, ಮೊಟ್ಟೆ, ಮಾಂಸ, ಹಾಲು, ಮೊಸರು, ಗಿಣ್ಣು, ಜೊತೆಗೆ ವಿಟಮಿನ್ ಬಿ-12 ಪೂರಕಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಸೂಕ್ತ.
ಕಬ್ಬಿಣಾಂಶದ ಕೊರತೆ ಹೆಚ್ಚಿನ ಮಹಿಳೆಯರಲ್ಲಿ ಕಬ್ಬಿಣದ ಕೊರತೆ ಕಂಡುಬರುತ್ತದೆ. ಕಬ್ಬಿಣದ ಕೊರತೆಯಿಂದ ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ. ಅನೇಕ ಬಾರಿ ಉಗುರುಗಳು ರಕ್ತಹೀನತೆಯಿಂದ ದುರ್ಬಲವಾಗುತ್ತವೆ ಮತ್ತು ಬೇಗನೆ ತುಂಡಾಗುತ್ತದೆ. ಬೀಟ್ರೂಟ್, ದಾಳಿಂಬೆ, ಸೇಬು, ಪಾಲಕ್ ಸೊಪ್ಪು, ಮೆಂತೆ, ಅಂಜೂರ, ಪೇರಲೆ, ಬಾಳೆಹಣ್ಣು ಮತ್ತು ಒಣದ್ರಾಕ್ಷಿ ಇತ್ಯಾದಿಗಳನ್ನು ತಿನ್ನುವುದರಿಂದ ಕಬ್ಬಿಣದ ಕೊರತೆಯನ್ನು ಸುಲಭವಾಗಿ ನಿವಾರಿಸಬಹುದು.
ಪ್ರೋಟೀನ್ ಕೊರತೆ ದೇಹದಲ್ಲಿ ಪ್ರೋಟೀನ್ ಕೊರತೆ ಉಂಟಾದಾಗ ಉಗುರುಗಳು ತುಂಡಾಗಲು ಪ್ರಾರಂಭಿಸುತ್ತವೆ. ಉಗುರುಗಳು ಉಬ್ಬುತ್ತವೆ ಅಥವಾ ಬಿಳಿ ಗೆರೆಗಳು ರೂಪುಗೊಳ್ಳಲು ಕೂಡ ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ ಮೂಳೆ, ಸ್ನಾಯುಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪಡೆಯುವ ಅಪಾಯವು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರದಲ್ಲಿ ಮೊಳಕೆಯೊಡೆದ ಧಾನ್ಯಗಳಾದ ಜೋಳ, ಓಟ್ಸ್, ಸಿಹಿ ಗೆಣಸು, ಹಾಲು, ಮೊಸರು, ಚೀಸ್, ಮೊಟ್ಟೆ ಮತ್ತು ಮೀನುಗಳನ್ನು ಸೇರಿಸುವ ಮೂಲಕ ಪ್ರೋಟೀನ್ ಕೊರತೆಯನ್ನು ನೀಗಿಸಬಹುದು.
ಪಿತ್ತಜನಕಾಂಗದ ಕಾಯಿಲೆ ಪಿತ್ತಜನಕಾಂಗದ ಕಾಯಿಲೆ ಇದ್ದರೂ ಕೆಲವೊಮ್ಮೆ ಉಗುರು ತುಂಡಾಗುವುದು ಮತ್ತು ಉಗುರಿನ ಬಣ್ಣ ಬದಲಾಗುವ ಲಕ್ಷಣಗಳು ಕಂಡುಬರುತ್ತವೆ. ಮತ್ತೊಂದೆಡೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೂ ಸಹ ಉಗುರುಗಳು ದುರ್ಬಲವಾಗುತ್ತವೆ. ಹೀಗಿರುವಾಗ ತಜ್ಞರ ಸಲಹೆ ಪಡೆದುಕೊಳ್ಳಿ. ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ಹಾಲು, ಮೊಸರು, ಚೀಸ್, ಬಾಳೆಹಣ್ಣು ಇತ್ಯಾದಿಗಳನ್ನು ಸೇವಿಸಿ.
ಮಸಾಜ್ ಮಾಡಿ ಇದಲ್ಲದೆ ಉಗುರುಗಳನ್ನು ಎಣ್ಣೆಯಿಂದ ಮಸಾಜ್ ಮಾಡಿ. ಇದು ಉಗುರುಗಳನ್ನು ಬಲಪಡಿಸುತ್ತದೆ. ಮಸಾಜ್ ಮಾಡಲು ನೀವು ಆಲಿವ್ ಎಣ್ಣೆ, ಕ್ಯಾಸ್ಟರ್ ಆಯಿಲ್ ಅಥವಾ ಬಾದಾಮಿ ಎಣ್ಣೆಯನ್ನು ಬಳಸಬಹುದು. ಜೊತೆಗೆ ಸಾಕಷ್ಟು ನೀರು ಕುಡಿಯಿರಿ. ಕುಡಿಯುವ ನೀರು ದೇಹದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಉಗುರುಗಳನ್ನು ಬಲವಾಗಿರಿಸುತ್ತದೆ.
ಇದನ್ನೂ ಓದಿ: Dance Benefits: ನೃತ್ಯ ಮಾಡುವುದು ಕೇವಲ ಮನರಂಜನೆಗಲ್ಲ; ಆರೋಗ್ಯಕರ ಬದಲಾವಣೆಯಲ್ಲೂ ಇದರ ಪಾತ್ರವಿದೆ ಗಮನಿಸಿ
Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು