Billa Ganneru: ಮನೆಯಂಗಳದಲ್ಲಿ ನಿತ್ಯ ಪುಷ್ಪ ಗಿಡ ಬಾಡುವ ಮುನ್ನ ಅದರ ಆರೋಗ್ಯಕರ ಗುಣಗಳನ್ನು ತಿಳಿಯಿರಿ

| Updated By: ಆಯೇಷಾ ಬಾನು

Updated on: Aug 11, 2021 | 7:47 AM

Health benefits: ನಿತ್ಯ ಪುಷ್ಪ ಅಥವಾ ನಿತ್ಯ ಕಣಗಿಲೆ ಅನೇಕ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಬೆಲಿ ಬದಿಯಲ್ಲಿ ಕಾಣುವು ಈ ಗಿಡದ ಎಲೆಗಳು, ಹೂವು ಮತ್ತು ಬೇರು ಅನೇಕ ರೋಗಗಳನ್ನು ಗುಣಪಡಿಸುತ್ತವೆ.

Billa Ganneru: ಮನೆಯಂಗಳದಲ್ಲಿ ನಿತ್ಯ ಪುಷ್ಪ ಗಿಡ ಬಾಡುವ ಮುನ್ನ ಅದರ ಆರೋಗ್ಯಕರ ಗುಣಗಳನ್ನು ತಿಳಿಯಿರಿ
ನಿತ್ಯ ಪುಷ್ಪ
Follow us on

ಮನುಷ್ಯ ಪ್ರಕೃತಿಯ ಒಂದು ಭಾಗ. ಅದರಂತೆ ಮನುಷ್ಯ ಬದುಕಲು ಬೇಕಾಗಿರುವುದೆಲ್ಲವನ್ನೂ ಈ ಪ್ರಕೃತಿ ನೀಡುತ್ತದೆ. ನೈಸರ್ಗಿಕ ಔಷಧಿಗಳಿಂದ ಮನುಷ್ಯನ ದೈಹಿಕ ಕಾಯಿಲೆಗಳೆಲ್ಲವು ದೂರವಾಗುತ್ತದೆ. ಪರಿಸರದಲ್ಲಿ ಸಿಗುವ ಸಸ್ಯ, ಹಣ್ಣು, ಹೂವು, ಬೀಜಗಳು ನಾನಾ ರೀತಿಯಲ್ಲಿ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಅದೆ ರೀತಿ  ಅತ್ಯಂತ ಸುಂದರವಾದ ಸಸ್ಯವೆಂದು ಕರೆಯಲ್ಪಡುವ ನಿತ್ಯ ಪುಷ್ಪ ಅಥವಾ ನಿತ್ಯ ಕಣಗಿಲೆ (Billa Ganneru)ಅನೇಕ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಬೇಲಿ ಬದಿಯಲ್ಲಿ ಕಾಣುವು ಈ ಗಿಡದ ಎಲೆಗಳು, ಹೂವು ಮತ್ತು ಬೇರು ಅನೇಕ ರೋಗಗಳನ್ನು ಗುಣಪಡಿಸುತ್ತವೆ. ಈ ಸಸ್ಯವು ಕ್ಯಾನ್ಸರ್ ಮತ್ತು ಮಧುಮೇಹದಂತಹ ರೋಗಗಳನ್ನು ದೂರ ಮಾಡುತ್ತದೆ.

ಮಧುಮೇಹ ತಡೆಗಟ್ಟುತ್ತದೆ
ನಿತ್ಯ ಪುಷ್ಪ ಸಸ್ಯದ ಬೇರುಗಳನ್ನು ಸಂಗ್ರಹಿಸಿ ಅದನ್ನು ಶುದ್ಧ ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ನಂತರ ಬೇರುಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಹೀಗೆ ದಿನನಿತ್ಯ ಬೆಳಿಗ್ಗೆ ಒಂದು ಚಮಚ ಜೇನುತುಪ್ಪದೊಂದಿಗೆ ನಿತ್ಯ ಪುಷ್ಪ ಸೇವಿಸಿ. ಅದೆ ರೀತಿ ನಿತ್ಯ ಪುಷ್ಪದ ಎಲೆ ಮತ್ತು ಹೂವನ್ನು ಜಗಿದು ರಸ ನುಂಗಿ. ಇದರಿಂದ ಮಧುಮೇಹ ದೂರವಾಗುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ
ನಿತ್ಯ ಪುಷ್ಪ ಗಿಡದ ಎಲೆಗಳ ರಸದೊಂದಿಗೆ ಬೇರುಗಳಿಂದ ತಯಾರಿಸಿದ ಪುಡಿ ಸೇರಿಸಿ ತಿನ್ನುವುದರಿಂದ ಕ್ಯಾನ್ಸರ್ ದೂರವಾಗುತ್ತದೆ. ವಿಜ್ಞಾನಿಗಳು ಹೇಳುವಂತೆ ಅವುಗಳಲ್ಲಿರುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.

ತೀವ್ರ ರಕ್ತದೊತ್ತಡ ದೂರವಾಗುತ್ತದೆ
ನಿತ್ಯ ಪುಷ್ಪ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ಬೆಳಿಗ್ಗೆ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಮುಟ್ಟಿನ ಸಮಸ್ಯೆಗೆ ರಾಮಬಾಣ
ಮುಟ್ಟಿನ ಸಮಸ್ಯೆಗಳನ್ನು ನಿವಾರಿಸಲು ಈ ಗಿಡದಲ್ಲಿನ ಎಲೆಗಳು ಪ್ರಮುಖ ಪಾತ್ರ ವಹಿಸುತ್ತದೆ. 8 ಎಲೆಗಳನ್ನು 2 ಕಪ್ ನೀರಿನಲ್ಲಿ ಹಾಕಿ ಮತ್ತು ಅರ್ಧ ಕಪ್ ನೀರು ಆಗುವವರೆಗೆ ಚೆನ್ನಾಗಿ ಕುದಿಸಿ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಈ ನೀರನ್ನು ಕುಡಿಯುವುದರಿಂದ ತೀವ್ರವಾದ ರಕ್ತಸ್ರಾವವನ್ನು ತಡೆಯುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

ಉರಿಯುತ ಕಡಿಮೆ ಮಾಡುತ್ತದೆ
ಗಾಯ, ಹುಣ್ಣುಗಳು ಇರುವ ಸ್ಥಳದಲ್ಲಿ ಈ ಎಲೆಗಳನ್ನು ಪುಡಿಮಾಡಿ ಪೇಸ್ಟ್ ರೂಪದಲ್ಲಿ ಹಚ್ಚಿದರೆ ಬೇಗ ಗುಣವಾಗುತ್ತದೆ. ಉರಿಯುತದ ಸಮಸ್ಯೆ ಕೂಡ ಇದರಿಂದ ದೂರವಾಗುತ್ತದೆ.

ಚರ್ಮದ ಸೌಂದರ್ಯ ಹೆಚ್ಚಿಸಲು
ಮೊಡವೆಯ ಸಮಸ್ಯೆಯಿಂದ ಮುಕ್ತಿ ನೀಡಲು ಇದು ಸಹಾಯಕವಾಗಿದೆ. ನಿತ್ಯ ಪುಷ್ಪ ಎಲೆಯನ್ನು ಒಣಗಿಸಿ ಹಚ್ಚುವುದರಿಂದ ಕಲೆಗಳು ಕೂಡ ಕಡಿಮೆಯಾಗುತ್ತದೆ. ಅಲ್ಲದೆ ಚರ್ಮದ ಹೊಳಪನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಮಾನಸಿಕ ಸಮಸ್ಯೆಗೆ ಪರಿಹಾರ
ಒತ್ತಡ, ಆತಂಕ, ಖಿನ್ನತೆಗೆ ಒಳಗಾಗಿದ್ದರೆ ಮತ್ತು ನಿದ್ರಾಹಿನತೆಯಿಂದ ಬಳಲುತ್ತಿದ್ದರೆ ಈ ಗಿಡದ ಎಲೆಗಳ ರಸವನ್ನು ಪ್ರತಿದಿನ ಸೇವಿಸುವುದು ಸೂಕ್ತ. ನಿತ್ಯ ಪುಷ್ಪ ಗಿಡದ ರಸವನ್ನು ಸೇವಿಸುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಮತ್ತು ಒತ್ತಡ ದೂರವಾಗುತ್ತದೆ.

ಇದನ್ನೂ ಓದಿ:
Aloe Vera Benefits: ಚರ್ಮದ ಕಾಂತಿಯನ್ನು ಹೆಚ್ಚಿಸಲು ಅಲೋವೆರಾ ಬಳಸಿ

Pumpkin Seeds: ಚೀನಿಕಾಯಿ ಬೀಜದ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಬೀಜವನ್ನು ಹಾಳುಮಾಡುವುದಿಲ್ಲ