Aloe Vera Benefits: ಚರ್ಮದ ಕಾಂತಿಯನ್ನು ಹೆಚ್ಚಿಸಲು ಅಲೋವೆರಾ ಬಳಸಿ

Skin Care: ಆಯುರ್ವೇದದ ಪ್ರಕಾರ ಅಲೋವೆರಾ ಚರ್ಮಕ್ಕೆ ಕಾಂತಿಯನ್ನು ನೀಡಲು ಸಹಾಯ ಮಾಡುತ್ತದೆ. ಇದು ಚರ್ಮಕ್ಕೆ ಸಂಬಂಧಿಸಿದ ಈ ನಾಲ್ಕು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

Aloe Vera Benefits: ಚರ್ಮದ ಕಾಂತಿಯನ್ನು ಹೆಚ್ಚಿಸಲು ಅಲೋವೆರಾ ಬಳಸಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Aug 10, 2021 | 7:57 AM

ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಅವುಗಳಿಂದ ತಯಾರಿಸಿದ ತೈಲಗಳು ಚರ್ಮವನ್ನು ಕಾಂತಿಯುತವಾಗಿಸಲು ಮತ್ತು ಸುಂದರಗೊಳಿಸಲು ಸಹಾಯಮಾಡುತ್ತದೆ. ಹೀಗೆ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳಲ್ಲಿ ಅಲೋವೆರಾ (Aloe Vera) ಪ್ರಮುಖ ಪಾತ್ರ ವಹಿಸುತ್ತದೆ. ಆಯುರ್ವೇದದ ಪ್ರಕಾರ ಅಲೋವೆರಾ ಚರ್ಮಕ್ಕೆ ಕಾಂತಿಯನ್ನು ನೀಡಲು ಸಹಾಯ ಮಾಡುತ್ತದೆ. ಇದು ಚರ್ಮಕ್ಕೆ ಸಂಬಂಧಿಸಿದ ಈ ನಾಲ್ಕು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

1. ಚರ್ಮ ಕಪ್ಪಾಗುವಿಕೆ ಅಲೋವೆರಾದ ರಸವು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಚರ್ಮದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಮತ್ತು ಜೀವಕೋಶಗಳನ್ನು ಪೋಷಿಸಲು ಇದು ಕೆಲಸ ಮಾಡುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸಲು ಅಲೋವೆರಾ ಸಹಾಯಕವಾಗಿದೆ.

2. ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ ಸೌಂದರ್ಯ ಉತ್ಪನ್ನಗಳಲ್ಲಿ ಅಲೋವೆರಾ ರಸ ಅಥವಾ ಜಲ್ ಸೇರಿಸುವುದರಿಂದ ಹಲವು ಪ್ರಯೋಜನಗಳಿವೆ. ಮಲಗುವ ಮುನ್ನ ನಿಯಮಿತವಾಗಿ ಚರ್ಮಕ್ಕೆ ಅಲೋವೆರಾ ರಸ ಹಾಕಿ ನಿಧಾನವಾಗಿ ಮಸಾಜ್ ಮಾಡಿ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಸುಕ್ಕುಗಟ್ಟುವ ಸಮಸ್ಯೆಯನ್ನು ನಿವಾರಿಸುತ್ತದೆ.

3. ಉರಿಯೂತವನ್ನು ಕಡಿಮೆ ಮಾಡುತ್ತದೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಅಲೋವೆರಾ ಹೊಂದಿದೆ. ತುರಿಕೆ, ಉರಿಯೂತ ಮತ್ತು ದದ್ದುಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದರ ರಸವನ್ನು ನಿಯಮಿತವಾಗಿ ಚಹಾ ಮರದ ಎಣ್ಣೆಯೊಂದಿಗೆ ಬಳಸುವುದರಿಂದ ಮುಖದ ಮೇಲಿನ ಉರಿಯೂತ ಮತ್ತು ಕಲೆಗಳು ಕಡಿಮೆಯಾಗುತ್ತವೆ.

4. ಮೊಡವೆಗಳನ್ನು ತೆಗೆದುಹಾಕುತ್ತದೆ ಮುಖದಲ್ಲಿನ ಮೊಡವೆಗಳನ್ನುಅಲೋವೆರಾ ತೆಗೆದುಹಾಕುತ್ತದೆ. ಅಲ್ಲದೆ ಇದು ಚರ್ಮದಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಸ್ವಚ್ಛಗೊಳಿಸುವಲ್ಲಿ ಕೆಲಸ ಮಾಡುತ್ತದೆ. ಅಲೋವೆರಾ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸತ್ತ ಚರ್ಮವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಇನ್ನಿತರ ಪ್ರಯೋಜನಗಳು:

ತೂಕ ನಷ್ಟಕ್ಕೆ ಅಲೋವೆರಾ ಒಂದು ಗ್ಲಾಸ್​ ನೀರಿಗೆ ನೈಸರ್ಗಿಕವಾಗಿ ಸಿಗುವ ಅಲೋವೆರಾ ಜೆಲ್​ಅನ್ನು ವಿಶ್ರಣ ಮಾಡಿ. ಆ ನೀರನ್ನು ಕುದಿಸಿ, ಅದಕ್ಕೆ ಒಂದು ಚಮಚ ನಿಂಬೆ ರಸ ಬೆರೆಸಿ ಸೇವಿಸಿದರೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಲಾಡಿಸಲು ಸಹಾಯಕವಾಗುತ್ತದೆ.

ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ನೈಸರ್ಗಿಕವಾಗಿ ಸಿಗುವ ಅಲೋವೆರಾವನ್ನು ಚೆನ್ನಾಗಿ ತೊಳೆದು ಕಟ್​ ಮಾಡಿಕೊಳ್ಳಿ. ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಬಿಸಿ ಆರುವವರೆಗೆ ಪಾತ್ರೆಯನ್ನು ತೆರೆದಿಡಿ. ಬಳಿಕ ತಯಾರಿಸಿದ ತೈಲವನ್ನು ಸೋಸಿದರೆ ಅಲೋವೆರಾ ತೈಲ ಸಿದ್ಧವಾಗುತ್ತದೆ. ಇದನ್ನು ತಲೆ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಬೇಕು. ಎಣ್ಣೆಯ ಅಂಶ ಕೂದಲಿನ ಬುಡ ಭಾಗಕ್ಕೆ ತಾಗಬೇಕು. ವಾರದಲ್ಲಿ ಎಡು ಬಾರಿಯಾದರೂ ಹೀಗೆ ಮಾಡಿದರೆ ಕೂದಲು ಉದ್ದವಾಗಿ ಬೆಳೆಯುವುದರ ಜೊತೆಗೆ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ:

Health Tips: ತಲೆಹೊಟ್ಟಿನ ಸಮಸ್ಯೆಗೆ ಮನೆಯಲ್ಲಿಯೇ ಇದೆ ಮದ್ದು; ನೈಸರ್ಗಿಕ ಪದಾರ್ಥಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಿ

Health Tips: ಕೊತ್ತಂಬರಿ ನೆನೆಸಿದ ನೀರು ಕುಡಿದ್ರೆ ಸಿಗುವ ಆರೋಗ್ಯಕರ ಪ್ರಯೋಜನ ಒಂದಾ ಎರಡಾ..!

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್