Pumpkin Seeds: ಚೀನಿಕಾಯಿ ಬೀಜದ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಬೀಜವನ್ನು ಹಾಳುಮಾಡುವುದಿಲ್ಲ

Health Benefits: ಚೀನಿಕಾಯಿ ಬೀಜಗಳನ್ನು ಸೇವಿಸುವುದರಿಂದ ಮಧುಮೇಹ, ಹೃದ್ರೋಗ, ಸ್ನಾಯು ಅಥವಾ ಮೂಳೆ ನೋವು, ಕೂದಲು ಉದುರುವುದು ಮತ್ತು ಮೊಡವೆಗಳನ್ನು ನಿಯಂತ್ರಿಸಬಹುದು.

Pumpkin Seeds: ಚೀನಿಕಾಯಿ ಬೀಜದ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಬೀಜವನ್ನು ಹಾಳುಮಾಡುವುದಿಲ್ಲ
ಚೀನಿಕಾಯಿ ಬೀಜ
Follow us
TV9 Web
| Updated By: preethi shettigar

Updated on: Aug 09, 2021 | 8:42 AM

ಚೀನಿಕಾಯಿ ಬೀಜಗಳು (Pumpkin seeds) ಅನೇಕ ಅರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದು ಅಗತ್ಯವಾದ ಅಮೈನೋ ಆಮ್ಲಗಳಾದ ಕೊಬ್ಬಿನಾಮ್ಲ, ರಂಜಕ, ಪೊಟ್ಯಾಸಿಯಮ್, ಸತು ಮತ್ತು ಫೀನಾಲಿಕ್ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ಮಧುಮೇಹ, ಹೃದ್ರೋಗ, ಸ್ನಾಯು ಅಥವಾ ಮೂಳೆ ನೋವು, ಕೂದಲು ಉದುರುವುದು ಮತ್ತು ಮೊಡವೆಗಳನ್ನು ನಿಯಂತ್ರಿಸಬಹುದು.

ಕ್ಯಾನ್ಸರ್ ನಿವಾರಕ ಚೀನಿಕಾಯಿ ಬೀಜಗಳಲ್ಲಿ ಉತ್ಕರ್ಷಣ ನಿರೋಧಕ ಅಂಶಗಳಿವೆ. ಇದು ಉರಿಯೂತ, ಆಂಟಿಮೈಕ್ರೊಬಿಯಲ್, ಸಂಧಿವಾತ ಮತ್ತು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕ್ಯಾನ್ಸರ್ ಮತ್ತು ಮೂತ್ರಕೋಶದ ಸೋಂಕಿನಿಂದಲೂ ರಕ್ಷಣೆ ನೀಡುತ್ತದೆ.

ಚರ್ಮದ ಹೊಳಪು ಹೆಚ್ಚಿಸುತ್ತದೆ ಚೀನಿಕಾಯಿ ಬೀಜಗಳು ಮತ್ತು ಅದರಿಂದ ತಯಾರಿಸಿದ ಎಣ್ಣೆ ಚರ್ಮದ ಆರೈಕೆ ಮಾಡುತ್ತದೆ.  ಇದು ವಿಟಮಿನ್ ಎ ಮತ್ತು ಸಿ  ಉತ್ಪಾದನೆಯನ್ನು ಹೆಚ್ಚಿಸುತ್ತದೆ.  ಗಾಯಗಳನ್ನು ಗುಣಪಡಿಸಲು ಚೀನಿಕಾಯಿ ಬೀಜಗಳು ಸಹಾಯ ಮಾಡುತ್ತದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಚೀನಿಕಾಯಿ ಬೀಜದ ಎಣ್ಣೆಯಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ಕ್ಯಾರೋಟಿನ್ ಇರುತ್ತದೆ. ಇದು ಗುಳ್ಳೆಗಳನ್ನು, ದೀರ್ಘಕಾಲದ ಸುಟ್ಟಗಾಯಗಳನ್ನು ಗುಣಪಡಿಸುತ್ತದೆ.  ಸ್ಕ್ರಬ್, ಲೋಷನ್ ಅಥವಾ ಮಸಾಜ್ ರೂಪದಲ್ಲಿ ಈ ಬೀಜಗಳನ್ನು ಬಳಸುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ದೂರವಾಗುತ್ತದೆ.

ಹೃದ್ರೋಗ ತಡೆಗಟ್ಟುವಿಕೆ ಚೀನಿಕಾಯಿ ಬೀಜಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕೊಲೆಸ್ಟ್ರಾಲ್ ನಿಕ್ಷೇಪಗಳು ಮತ್ತು ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯಬಹುದು. ಇದು ಪರಿಧಮನಿಯ ಕಾಯಿಲೆ, ಪಾರ್ಶ್ವವಾಯು ನಂತಹ ವಿವಿಧ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯುವಲ್ಲಿ ಕೆಲಸ ಮಾಡುತ್ತದೆ.

ಕೂದಲ ಬೆಳವಣಿಗೆಗೆ ಸಹಕಾರಿ ಈ ಬೀಜಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳಿವೆ.  ಸತುವು ಸಮೃದ್ಧವಾಗಿದೆ. ಇದು ತಲೆ ಬೋಳಾಗುವುದನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ವಯಸ್ಕರಲ್ಲಿ ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ ಈ ಬೀಜಗಳಲ್ಲಿ ಮಧುಮೇಹ ವಿರೋಧಿ ಗುಣಗಳಿವೆ. ಮಧುಮೇಹವನ್ನು ನಿಯಂತ್ರಿಸಲು ಬೀಜಗಳು, ಚೀನಿಕಾಯಿ ಎಲೆಗಳು ಮತ್ತು ತಿರುಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಬೊಜ್ಜು ಕಡಿಮೆ ಮಾಡುತ್ತದೆ ಚೀನಿಕಾಯಿ ಬೀಜಗಳು ಆರೋಗ್ಯಕರ  ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಗೆ ನೆಲೆಯಾಗಿದೆ. ಇದು ತೂಕವನ್ನು ನಿಯಂತ್ರಿಸುತ್ತದೆ.  ಈ ಬೀಜಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ಫೈಟೊಸ್ಟೆರಾಲ್‌ಗಳು, ವಿಟಮಿನ್ ಇ ಉತ್ಪನ್ನಗಳು ಮತ್ತು ಕ್ಯಾರೋಟಿನ್ ಇರುತ್ತದೆ. ಸ್ಥೂಲಕಾಯದ ಬೆಳವಣಿಗೆಯನ್ನು ತಡೆಯುವಲ್ಲಿ ಇವು ಬಹಳ ಸಹಾಯಕವಾಗಿವೆ.

ಇದನ್ನೂ ಓದಿ: Left Side Sleeping: ಎಡಭಾಗಕ್ಕೆ ತಿರುಗಿ ಮಲಗುವುದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ?

Udalu Benefits: ಊದಲು ಸಿರಿಧಾನ್ಯದ ಬಗ್ಗೆ ನಿಮಗೆಷ್ಟು ಗೊತ್ತು? ಪಿತ್ತಜನಕಾಂಗದ ಸ್ವಚ್ಛತೆಗೆ ವಾರಕ್ಕೊಮ್ಮೆ ಸೇವಿಸಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ