ನೇರಳೆ ಹಣ್ಣಿನ ವಿನೆಗರ್ ಸೇವಿಸಿದ್ದೀರಾ? ಇದರಲ್ಲಿನ ಆರೋಗ್ಯಯುತ ಪ್ರಯೋಜನಗಳ ಬಗ್ಗೆ ನೀವು ತಿಳಿಯಲೇಬೇಕು

| Updated By: preethi shettigar

Updated on: Feb 28, 2022 | 7:13 AM

ನೇರಳೆ ಹಣ್ಣಿನ ವಿನೆಗರ್ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಮುಂತಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.

ನೇರಳೆ ಹಣ್ಣಿನ ವಿನೆಗರ್ ಸೇವಿಸಿದ್ದೀರಾ? ಇದರಲ್ಲಿನ ಆರೋಗ್ಯಯುತ ಪ್ರಯೋಜನಗಳ ಬಗ್ಗೆ ನೀವು ತಿಳಿಯಲೇಬೇಕು
ನೇರಳೆ ಹಣ್ಣಿನ ವಿನೆಗರ್
Follow us on

ಅನೇಕ ಪೌಷ್ಟಿಕತಜ್ಞರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೇರಳೆ ಹಣ್ಣಿನ ವಿನೆಗರ್(jamun vinegar)  ಸೇವನೆಯನ್ನು ಶಿಫಾರಸು ಮಾಡುತ್ತಾರೆ. ಇದು ಮಧುಮೇಹ ರೋಗಿಗಳಿಗೆ ಮಾತ್ರ ಪ್ರಯೋಜನಕಾರಿಯಲ್ಲ. ಇನ್ನೂ ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಚಿಕಿತ್ಸೆ(Treatment) ನೀಡಲಾಗುತ್ತದೆ. ನೇರಳೆ ಕಬ್ಬಿಣದ ಉತ್ತಮ ಮೂಲವಾಗಿದೆ. ಇದು ಮಧುಮೇಹ, ಹೃದಯ ಮತ್ತು ಯಕೃತ್ತಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ವಿಟಮಿನ್ ಎ, ವಿಟಮಿನ್ ಸಿ(Vitamin C), ಕಬ್ಬಿಣ, ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಮುಂತಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಧುಮೇಹವನ್ನು ನಿಯಂತ್ರಿಸಲು

ನೇರಳೆ ಹಣ್ಣಿನ ವಿನೆಗರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದರ ನಿಯಮಿತ ಸೇವನೆಯು ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಪಿಷ್ಟ ಮತ್ತು ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಕ್ಕರೆ ರೋಗಿಗಳು ಇದನ್ನು ರಾತ್ರಿ ಮಲಗುವ ಮುನ್ನ ಸೇವಿಸಬಹುದು.

ಚರ್ಮಕ್ಕೆ ಪ್ರಯೋಜನಕಾರಿ

ನೇರಳೆ ಹಣ್ಣಿನ ವಿನೆಗರ್ ಸಹ ನಿಮ್ಮ ಮುಖದ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ. ವಿನೆಗರ್‌ನಲ್ಲಿರುವ ವಿಟಮಿನ್ ಸಿ ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ

ನೇರಳೆ ಹಣ್ಣಿನ ವಿನೆಗರ್ ಕಬ್ಬಿಣ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಪಿರಿಯಡ್ಸ್ ಸಮಯದಲ್ಲಿ ರಕ್ತಹೀನತೆ ಇರುವ ಮಹಿಳೆಯರು ರಕ್ತಹೀನತೆಯ ಸಮಸ್ಯೆಯನ್ನು ತಪ್ಪಿಸಲು ಇದನ್ನು ಸೇವಿಸಬಹುದು. ಕಾಮಾಲೆಯಿಂದ ಬಳಲುತ್ತಿರುವ ಜನರು ನೇರಳೆ ಹಣ್ಣಿನ ವಿನೆಗರ್ ಅನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ಮೂತ್ರಪಿಂಡದ ಸಮಸ್ಯೆ

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಇದು ಪ್ರಯೋಜನಕಾರಿಯಾಗಿದೆ. ನೀವು ಮೂತ್ರಪಿಂಡದಲ್ಲಿ ಕಲ್ಲು ಹೊಂದಿದ್ದರೆ, ಅದನ್ನು ನಿಮ್ಮ ದೇಹದಿಂದ ತೆಗೆದುಹಾಕಲು ನೇರಳೆ ಹಣ್ಣಿನ ವಿನೆಗರ್​ ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ಕಿಬ್ಬೊಟ್ಟೆಯ ನೋವು, ಮೂತ್ರಪಿಂಡದ ಕಲ್ಲುಗಳ ನೋವಿನ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ.

ಕಣ್ಣುಗಳಿಗೆ ಪ್ರಯೋಜನಕಾರಿ

ಜಾಮೂನ್ ವಿನೆಗರ್ ಕೂಡ ನಿಮ್ಮ ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ದೃಷ್ಟಿ ಹೆಚ್ಚಿಸಲು ಅಥವಾ ಕಣ್ಣಿನ ನೋವನ್ನು ನಿವಾರಿಸಲು ಸಹ ಕೆಲಸ ಮಾಡುತ್ತದೆ. ನೇರಳೆ ಹಣ್ಣಿನ ವಿನೆಗರ್​ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಕಣ್ಣುಗಳ ತುರಿಕೆ, ಕೆಂಪು ಮತ್ತು ನೋವಿನಂತಹ ಸಮಸ್ಯೆಗಳನ್ನು ದೂರವಿಡುತ್ತದೆ.

ಇದನ್ನೂ ಓದಿ:

ಗರ್ಭಾವಸ್ಥೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ; ಇಲ್ಲಿದೆ ತಜ್ಞರ ಸಲಹೆ

Matcha tea: ಮಚ್ಚಾ ಚಹಾ ಎಂದರೇನು? ಇದರ ಆರೋಗ್ಯಯುತ ಗುಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ