ನುಗ್ಗೆಕಾಯಿಯನ್ನು ಸಾಮಾನ್ಯವಾಗಿ ಮನೆಯಲ್ಲಿ ಅಡುಗೆ ಮಾಡುವಾಗ ಬಳಸುತ್ತಾರೆ ಮತ್ತು ನುಗ್ಗೆಕಾಯಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ನುಗ್ಗೆ ಸೊಪ್ಪಿನ ಸೇವನೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ನುಗ್ಗೆ ಕಾಯಿ ಜತೆ ನುಗ್ಗೆ ಸೊಪ್ಪಿನ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಿ. ನುಗ್ಗೆ ಸೊಪ್ಪು ಅನೇಕ ಪೋಷಕಾಂಶಗಳ ಜತೆಗೆ ವಿಟಮಿನ್ ಬಿ 6, ವಿಟಮಿನ್ ಎ, ವಿಟಮಿನ್ ಬಿ 2, ಕಬ್ಬಿಣಾಂಶ, ಮೆಗ್ನೀಸಿಯಮ್ ಮತ್ತು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ನುಗ್ಗೆ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯ ಅಭ್ಯಾಸ. ಹಾಗಿದ್ದರೆ ನುಗ್ಗೆ ಸೊಪ್ಪು ಸೇವನೆಯಿಂದ ಯಾವೆಲ್ಲಾ ಸಮಸ್ಯೆಗಳಿಂದ ದೂರವಿರಬಹುದು ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.
ಮೂಳೆಗಳನ್ನು ಬಲಗೊಳಿಸುತ್ತದೆ
ನುಗ್ಗೆ ಸೊಪ್ಪನ್ನು ಯಾವುದೇ ರೂಪದಲ್ಲಿ ಸೇವಿಸಬಹುದು. ಪಲ್ಯ, ಜ್ಯೂಸ್ ಮೂಲಕವಾದರೂ ಸರಿ. ಪ್ರತಿದಿನ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ದೊರಕುತ್ತದೆ. ಇದರಿಂದ ಮೂಳೆಗಳು ಬಲವಾಗುತ್ತವೆ. ಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಹುದು.
ಮೈಗ್ರೇನ್ ಸಮಸ್ಯೆಗೆ ರಾಮಬಾಣ
ಮೈಗ್ರೇನ್ ಅಥವಾ ಅರೆ ತಲೆನೋವಿನ ಸಮಸ್ಯೆಯಿಂದ ಬಳುತ್ತಿರುವವರು ನುಗ್ಗೆ ಸೊಪ್ಪನ್ನು ಸೇವಿಸುವುದು ಸೂಕ್ತ. ನುಗ್ಗೆ ಸೊಪ್ಪಿನ ಮರದ ಬೇರುಗಳು ಕೂಡ ಮೈಗ್ರೋನ್ನಿಂದ ರಕ್ಷಣೆ ನೀಡುತ್ತದೆ. ಬೆಲ್ಲದೊಂದಿಗೆ ನಿಯಮಿತವಾಗಿ ನುಗ್ಗೆ ಸೊಪ್ಪಿನ ರಸವನ್ನು ತೆಗೆದುಕೊಂಡರೆ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.
ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ
ನುಗ್ಗೆ ಸೊಪ್ಪಿನ ಎಲೆಗಳಿಂದ ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚುವುದರಿಂದ ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ ಹಾಗೂ ದೃಷ್ಟಿ ದೋಷ ಇದ್ದರೆ ಬೇಗ ಗುಣವಾಗುತ್ತದೆ. ನುಗ್ಗೆ ಸೊಪ್ಪು ಕಣ್ಣಿನ ನರಗಳಿಗೆ ಹೆಚ್ಚು ಶಕ್ತಿ ನೀಡುತ್ತದೆ. ಆ ಮೂಲಕ ಕಣ್ಣು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.
ಕ್ಯಾನ್ಸರ್ ತಡೆಯುತ್ತದೆ
ನುಗ್ಗೆ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ದೇಹದಲ್ಲಿ ರೂಪುಗೊಳ್ಳುವ ರಾಡಿಕಲ್ಗಳನ್ನು ನಿವಾರಿಸುತ್ತದೆ. ಆ ಮೂಲಕ ಇದು ಕ್ಯಾನ್ಸರ್ ಅನ್ನು ತಡೆಯುತ್ತದೆ. ವಿಟಮಿನ್ ಸಿ ಅಂಶ ಇದರಲ್ಲಿ ಇರುವುದರಿಂದ ಕಾರ್ಸಿನೋಜೆನಿಕ್ ವಸ್ತುಗಳನ್ನು ಸಹ ನಾಶಪಡಿಸುತ್ತದೆ.
ಮಧುಮೇಹ ನಿವಾರಿಸುತ್ತದೆ
ನುಗ್ಗೆ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಬಳಿಕ ಅದನ್ನು ಪುಡಿಯ ರೂಪದಲ್ಲಿ ಮಾಡಿ ಇಟ್ಟುಕೊಳ್ಳಬೇಕು. ಹೀಗೆ ತಯಾರಿಸಿದ ಪುಡಿಯನ್ನು ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಇದು ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
ಚರ್ಮ ರೋಗ ನಿವಾರಕ
ನುಗ್ಗೆ ಸೊಪ್ಪು ನೈಸರ್ಗಿಕವಾಗಿ ಪ್ರತಿಜೀವಕ ಗುಣಗಳನ್ನು ಹೊಂದಿದೆ. ಈ ಎಲೆಯ ರಸವನ್ನು ನೀವು ನಿಯಮಿತವಾಗಿ ಕುಡಿಯುತ್ತಿದ್ದರೆ, ರಕ್ತ ಶುದ್ಧವಾಗುತ್ತದೆ. ಆ ಮೂಲಕ ಚರ್ಮ ರೋಗ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ. ದೇಹದ ಮೇಲಿನ ಸುಕ್ಕುಗಳು ಮಾಯವಾಗಲೂ ಸಹ ನುಗ್ಗೆ ಸೊಪ್ಪಿನ ರಸದ ಸೇವನೆ ಸೂಕ್ತ.
ಇದನ್ನೂ ಓದಿ:
Neem Leaves: ಕಹಿ ಬೇವಿನ ಸೇವನೆ ಕಷ್ಟವಾದರೂ, ಆರೋಗ್ಯಕರ ಗುಣಗಳ ದೃಷ್ಟಿಯಿಂದ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ