ಸಕ್ಕರೆಯನ್ನು ಪ್ರತಿ ಮನೆಯಲ್ಲಿಯೂ ಬಳಸಲಾಗುತ್ತದೆ. ನಿತ್ಯ ಕುಡಿಯುವ ಚಹಾ, ಹಾಲು, ಕಾಫಿ, ಜ್ಯೂಸ್ ಸೇರಿದಂತೆ ಸಿಹಿತಿಂಡಿಗಳಲ್ಲೂ ಸಕ್ಕರೆಯನ್ನು ಬಳಸಲಾಗುತ್ತದೆ. ಸಿಹಿತಿಂಡಿಗಳನ್ನು ಇಷ್ಟಪಡುವವರು ಮತ್ತು ಸಿಹಿತಿಂಡಿ ಇಷ್ಟಪಡದವರು ಸಕ್ಕರೆಯನ್ನು ಸೇವಿಸುತ್ತಾರೆ. ಆದರೆ ಸಕ್ಕರೆಯಿಂದ ಅನೇಕ ಅಡ್ಡಪರಿಣಾಮಗಳಿವೆ. ಸಕ್ಕರೆ ಸೇವನೆಯಿಂದ ದೇಹದ ತೂಕ ವೇಗವಾಗಿ ಹೆಚ್ಚಾಗುತ್ತದೆ, ಮೂಳೆಗಳು ದುರ್ಬಲವಾಗುತ್ತದೆ. ಅಲ್ಲದೆ ಮಧುಮೇಹಕ್ಕೆ ಸಕ್ಕರೆ ಪ್ರಮುಖ ಕಾರಣವಾಗಿದೆ. ಅದಕ್ಕಾಗಿಯೇ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಸದಾ ದೇಹವು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು.
1. ಅನಾರೋಗ್ಯಕ್ಕೆ ಕಾರಣವಾಗಿದೆ
ಚರ್ಮದ ಕಾಂತಿ ಹಾಳಾಗಲು ಸಕ್ಕರೆ ಮುಖ್ಯ ಕಾರಣವಾಗಿದೆ. ವಾಸ್ತವವಾಗಿ ಸಿಹಿತಿಂಡಿಗಳನ್ನು ಸೇವಿಸಿದ ನಂತರ, ನಮ್ಮ ದೇಹದಲ್ಲಿನ ಸಕ್ಕರೆ ಕಾಲಜನ್ ಪ್ರೋಟೀನ್‌ಗೆ ಅಂಟಿಕೊಳ್ಳುತ್ತದೆ. ಇದು ನಮ್ಮಲ್ಲಿನ ಪ್ರೋಟೀನ್ ಅಂಶವನ್ನು ಕಡಿಮೆ ಮಾಡುತ್ತದೆ. ಅಕಾಲಿಕ ಸುಕ್ಕುಗಳು ಚರ್ಮದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗೆ ಸಕ್ಕರೆ ಕಾರಣವಾಗುತ್ತದೆ.
2. ಬೊಜ್ಜು ಹೆಚ್ಚಾಗುವಂತೆ ಮಾಡುತ್ತದೆ
ಇತ್ತೀಚಿನ ದಿನಗಳಲ್ಲಿ ದೇಹದಲ್ಲಿನ ಬೊಜ್ಜು ದೊಡ್ಡ ಸಮಸ್ಯೆಯಾಗಿದೆ. ಬೊಜ್ಜು ಎಲ್ಲಾ ರೋಗಗಳಿಗೆ ಕಾರಣವಾಗಿದೆ. ಕೆಲವೊಮ್ಮೆ ನಾವು ಸಿಹಿತಿಂಡಿಗಳನ್ನು ಸೇವಿಸದಿದ್ದರೂ ಸಹ ಸಕ್ಕರೆಯುಕ್ತ ಪಾನೀಯಾ, ಚಾಕೊಲೇಟ್ ಇತ್ಯಾದಿಗಳನ್ನು ಇಷ್ಟಪಡುತ್ತೇವೆ. ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ ಮತ್ತು ಬೊಜ್ಜಿನಂತಹ ಸಮಸ್ಯೆಗೆ ದಾರಿ ಮಾಡಿ ಕೊಡುತ್ತದೆ.
3. ಯಕೃತ್ತಿನ ಸಮಸ್ಯೆ
ಸಕ್ಕರೆ ಸೇವಿಸಿದಾಗಲೆಲ್ಲಾ ಯಕೃತ್ತಿನ ಕಾರ್ಯ ಹೆಚ್ಚಾಗುತ್ತದೆ. ಈ ರೀತಿ ಹೆಚ್ಚಾಗುವ ಪ್ರಕ್ರಿಯೆಯಿಂದ ಯಕೃತ್ತಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ದೇಹವು ಲಿಪಿಡ್ಗಳನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಇದು ಯಕೃತ್ತಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
4. ಬುದ್ಧಿಶಕ್ತಿ ಕಡಿಮೆಯಾಗುತ್ತದೆ
ಹೆಚ್ಚು ಸಕ್ಕರೆ ಸೇವಿಸುವುದರಿಂದ ಬುದ್ಧಿಶಕ್ತಿ ಕಡಿಮೆಯಾಗುವ ಅಪಾಯ ಹೆಚ್ಚಿರುತ್ತದೆ. ಹೆಚ್ಚು ಸಕ್ಕರೆ ಸೇವನೆಯು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಗ್ಲೂಕೋಸ್ ಮೆದುಳನ್ನು ಸಂಪೂರ್ಣವಾಗಿ ತಲುಪುವುದಿಲ್ಲ. ಅಗ ಬುದ್ಧಿ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ.
5. ಹೃದಯಾಘಾತದ ಅಪಾಯ
ಹೆಚ್ಚಿನ ಸಕ್ಕರೆ ಸೇವನೆಯು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ವಾಸ್ತವವಾಗಿ, ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ಬಿಪಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಅಲ್ಲದೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ:
ಇವು ಮಧುಮೇಹಿಗಳ ಮಾವಿನಹಣ್ಣುಗಳು..; ಮೂರು ವಿಧದ ಸಕ್ಕರೆ ರಹಿತ ಮಾವು ಪರಿಚಯಿಸಿದ ಪಾಕಿಸ್ತಾನ ಕೃಷಿ ತಜ್ಞ