ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಹಾಲು ಎಲ್ಲಾ ವಯಸ್ಸಿನವರಿಗೂ ಉಪಯುಕ್ತವಾಗಿದೆ. ಅನಾರೋಗ್ಯದ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಯವರೆಗೆ ಎಲ್ಲರೂ ಹಾಲು ಕುಡಿಯುವುದು ಒಳ್ಳೆಯದು. ಆದರೆ ಹಾಲನ್ನು ಕೆಲವು ಪದಾರ್ಥಗಳೊಂದಿಗೆ ಬೆರೆಸದೆ ಸೇವಿಸುವುದು ಉತ್ತಮ. ಏಕೆಂದರೆ ಈ ಆಹಾರಗಳು ಹಾಲಿನೊಂದಿಗೆ ಹೊಂದಿಕೊಳ್ಳುವುದಿಲ್ಲ. ಇದರಿಂದಾಗಿ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು, ಆಯಾಸ ಇತ್ಯಾದಿಗಳಿಗೆ ಕಾರಣವಾಗಬಹುದು. ಹೀಗಾಗಿ ದಿನನಿತ್ಯ ಹಾಲನ್ನು ಕುಡಿಯುವವರು ಈ ಕೆಳಕಂಡ ಪದಾರ್ಥಗಳ ಬಗ್ಗೆ ಗಮನಹರಿಸಿ ಮತ್ತು ಹಾಲಿನೊಂದಿಗೆ ಅವುಗಳನ್ನು ಸೇವಿಸುವ ಅಭ್ಯಾಸವನ್ನು ಬಿಟ್ಟುಬಿಡಿ.
1. ಮೊಟ್ಟೆ, ಮಾಂಸ ಮತ್ತು ಮೀನು
ಹಾಲನ್ನು ಎಂದಿಗೂ ಮಾಂಸದೊಂದಿಗೆ ಕುಡಿಯಬಾರದು. ಮೀನು ಮತ್ತು ಮಾಂಸದ ಜತೆಗೆ ಹಾಲು ಕುಡಿಯುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗುವ ಸಾಧ್ಯತೆಗಳಿವೆ.
2. ಹುಳಿ ಪದಾರ್ಥಗಳು
ಹಾಲಿನೊಂದಿಗೆ ಹುಳಿ ಅಥವಾ ಸಿಟ್ರಿಕ್ ಆಮ್ಲ ಸಮೃದ್ಧವಾಗಿರುವ ಆಹಾರವನ್ನು ಎಂದಿಗೂ ಸೇವಿಸಬೇಡಿ. ಹಾಲನ್ನು ವಿಟಮಿನ್ ಸಿ ಅಧಿಕವಾಗಿರುವ ಆಹಾರದ ಜತೆಗೆ ತೆಗೆದುಕೊಳ್ಳಬಾರದು. ಹಾಲು ಸಾಮಾನ್ಯವಾಗಿ ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನೀವು ಹಾಲು, ನಿಂಬೆ ಅಥವಾ ಇತರ ಸಿಟ್ರಸ್ ಹಣ್ಣುಗಳನ್ನು ಒಟ್ಟಿಗೆ ಸೇವಿಸಿದರೆ ಹಾಲು ಹೊಟ್ಟೆಯಲ್ಲಿ ಹುಳಿಯಾಗುತ್ತದೆ. ಇದು ಎದೆಯುರಿಗೆ ಕಾರಣವಾಗಬಹುದು.
3. ಬಾಳೆಹಣ್ಣು
ಬಾಳೆಹಣ್ಣು ಮತ್ತು ಹಾಲು ಒಟ್ಟಿಗೆ ತಿನ್ನುವುದು ಸಾಮಾನ್ಯವಾಗಿದೆ. ಆದರೆ ಈ ಆಹಾರ ಸಂಯೋಜಕವು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಈ ಎರಡನ್ನು ಒಟ್ಟಿಗೆ ತೆಗದುಕೊಳ್ಳುವುದರಿಂದ ದೇಹಕ್ಕೆ ಆಯಾಸವಾದಂತೆ ಭಾಸವಾಗುತ್ತದೆ. ಒಂದು ವೇಳೆ ನೀವು ಬಾಳೆಹಣ್ಣಿನ ಮಿಲ್ಕ್‌ಶೇಕ್ ಕುಡಿಯಲು ಬಯಸಿದರೆ ಅದರೊಂದಿಗೆ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಇದರಿಂದ ಜೀರ್ಣಕ್ರಿಯೆಯಲ್ಲಿ ಎದುರಾಗುವ ಸಮಸ್ಯೆ ಕಡಿಮೆಯಾಗುತ್ತದೆ.
4. ಮೊಸರು
ಮೊಸರನ್ನು ಹಾಲಿನೊಂದಿಗೆ ಕುಡಿಯಬಾರದು. ಹಾಲಿಗೆ ಹುದುಗುವ ಪದಾರ್ಥಗಳನ್ನು ಎಂದಿಗೂ ಸೇರಿಸಬೇಡಿ. ಏಕೆಂದರೆ ಇದು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.
5. ಮೂಲಂಗಿ
ಹಾಲು ಸಂಪೂರ್ಣ ಪೌಷ್ಠಿಕ ಆಹಾರವಾಗಿದೆ. ಇದನ್ನು ಇತರ ಆಹಾರಗಳ ಸಂಯೋಜನೆಯಲ್ಲಿ ಎಂದಿಗೂ ತೆಗೆದುಕೊಳ್ಳಬಾರದು. ವಿಶೇಷವಾಗಿ ನೀವು ಮೂಲಂಗಿಯೊಂದಿಗೆ ಹಾಲನ್ನು ತೆಗೆದುಕೊಂಡರೆ ಅದು ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ಹೀಗಾಗಿ ಹಾಲಿನೊಂದಿಗೆ ಇತರ ಆಹಾರ ಪದಾರ್ಥಗಳನ್ನು ಸೇವಿಸುವಾಗ ಎಚ್ಚರಿಕೆಯಿಂದ ಇರುವುದು ಸೂಕ್ತ.
ಇದನ್ನೂ ಓದಿ:
Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಸೇವಿಸುವ ಸಮಯದ ಬಗ್ಗೆ ತಿಳಿಯವುದನ್ನು ಮರೆಯಬೇಡಿ