Health Tips: ವಿಟಮಿನ್​ ಬಿ12 ಕೊರತೆಯ ಲಕ್ಷಣಗಳು, ಅಪಾಯಗಳು ಮತ್ತು ಆರೋಗ್ಯ ಸಮಸ್ಯೆಗೆ ಪರಿಹಾರ ತಿಳಿಯಿರಿ

Vitamin B12 Deficiency: ಮುಖ್ಯವಾಗಿ ಗಮನಿಸುವ ಅಂಶವೆಂದರೆ ಗರ್ಭಿಣಿಯರಿಗೆ ಆರೋಗ್ಯದಲ್ಲಿ ವಿಟಮಿನ್ ಬಿ12 ಪೋಷಕಾಂಶದ ಕುರಿತಾಗಿ ಹೆಚ್ಚು ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಈ ಪೋಷಕಾಂಶದ ಕೊರತೆಯು ಮಗುವಿನ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡಹುದು.

Health Tips: ವಿಟಮಿನ್​ ಬಿ12 ಕೊರತೆಯ ಲಕ್ಷಣಗಳು, ಅಪಾಯಗಳು ಮತ್ತು ಆರೋಗ್ಯ ಸಮಸ್ಯೆಗೆ ಪರಿಹಾರ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jul 05, 2021 | 10:54 AM

ದೇಹದ ಆರೋಗ್ಯವನ್ನು ಸುಧಾರಿಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮುಖ್ಯ. ಜತೆಗೆ ಪ್ರೋಟೀನ್​, ನ್ಯೂಟ್ರಿಷಿಯನ್​ ಹೊಂದಿರುವ ಆಹಾರ ಪದಾರ್ಥಗಳು ಆರೋಗ್ಯವನ್ನು ಹೆಚ್ಚು ಸುಧಾರಿಸುತ್ತದೆ. ದೇಹದಲ್ಲಿ ಸೇರಿಕೊಂಡ ಕೆಟ್ಟ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ವಿಟಮಿನ್​ ಬಿ12 ಕೂಡಾ ಆರೋಗ್ಯಕ್ಕೆ ಅತ್ಯವಶ್ಯಕವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ದೇಹದಲ್ಲಿ ವಿಟಮಿನ್​ ಬಿ12 ಉತ್ಪತ್ತಿಯಾಗದಿದ್ದರೂ ಆಹಾರ ಪೂರೈಕೆಯ ಮೂಲಕ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸಬಹುದಾಗಿದೆ.

ಮುಖ್ಯವಾಗಿ ಗಮನಿಸುವ ಅಂಶವೆಂದರೆ ಗರ್ಭಿಣಿಯರಿಗೆ ಆರೋಗ್ಯದಲ್ಲಿ ವಿಟಮಿನ್ ಬಿ12 ಪೋಷಕಾಂಶದ ಕುರಿತಾಗಿ ಹೆಚ್ಚು ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಈ ಪೋಷಕಾಂಶದ ಕೊರತೆಯು ಮಗುವಿನ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡಹುದು.

ವಿಟಮಿನ್​ ಬಿ12 ಕೊರತೆಯ ಅಪಾಯಗಳು ಮತ್ತು ಲಕ್ಷಣಗಳು ವಿಟಮಿನ್​ ಬಿ12 ಕೊರತೆಯು ಆರೋಗ್ಯದಲ್ಲಿ ಏರು-ಪೇರು ಉಂಟು ಮಾಡುತ್ತವೆ. ಅಸ್ವಸ್ಥತೆ, ರಕ್ತಹೀನತೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ವಿಟಮಿನ್​ ಬಿ12 ಕೊರತೆಯ ಸಾಮನ್ಯ ಲಕ್ಷಣಗಳು ಹೀಗಿವೆ.

ಸ್ನಾಯುಗಳು ಮರಗಟ್ಟುವಿಕೆ ದುರ್ಬಲತೆ ದೃಷ್ಟಿ ಹೀನತೆ ಉಸಿರಾಟದ ತೊಂದರೆ ಆಯಾಸ ಹಸಿವಿನ ಕೊರತೆ ಜೀರ್ಣಕ್ರಿಯೆ ತೊಂದರೆ ತೆಳುವಾದ ಚರ್ಮದ ಕೊರತೆ

ದೈನಂದಿನ ಅವಶ್ಯಕತೆಗಳಲ್ಲಿ ವಿಟಮಿನ್​ ಬಿ12 ಪೂರೈಕೆ ಸಾಲ್ಮನ್​: ಬಿ ಜೀವಸತ್ವಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಾಗಿ ಸಾಲ್ಮನ್​ಗಳಲ್ಲಿ ಸಿಗುತ್ತವೆ. ಮಾಂಸಾಹಾರಿಗಳು ಇದನ್ನು ಸೇವಿಸುವುದರ ಮೂಲಕ ಆರೋಗ್ಯದಲ್ಲಿ ವಿಟಮಿನ್​ ಬಿ12 ಪೋಷಕಾಂಶದ ಕೊರತೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಮೊಟ್ಟೆಗಳು: ಮೊಟ್ಟೆಗಳು ವಿಟಮಿನ್​ ಬಿ12 ಮತ್ತು ಪ್ರೋಟೀನ್​ಗಳ ಸಮೃದ್ಧವಾಗಿರುವ ಆಹಾರದ ಮೂಲಗಳಾಗಿವೆ. ಮೊಟ್ಟೆಯಲ್ಲಿರುವ ಹಳದಿಯಲ್ಲಿ ವಿಟಮಿನ್​ ಬಿ12 ಪೋಷಕಾಂಶಗಳಿರುವುದರಿಂದ ಇಡೀ ಮೊಟ್ಟೆಯನ್ನು ಸೇವಿಸುವುದರ ಮೂಲಕ ವಿಟಮಿನ್​ ಬಿ12 ಕೊರತೆಯನ್ನು ನಿವಾರಿಸಿಕೊಳ್ಳಬಹುದು.

ಟ್ಯೂನ್​ ಮೀನು: ಸಾಮಾನ್ಯವಾಗಿ ಟ್ಯೂನ್​ ಮೀನುಗಳಲ್ಲಿ ಹೆಚ್ಚು ಪೌಷ್ಟಿಕ ಮತ್ತು ವಿಟಮಿನ್​ ಬಿ12 ಕಂಡು ಬರುತ್ತದೆ. ಸುಮಾರು 100 ಗ್ರಾಂ ಬೇಯಿಸಿದ ಟ್ಯೂನ್​ ಮೀನುಗಳ ಸುಮಾರು 10.9mcg ವಿಟಮಿನ್​ ಬಿ12 ಪೋಷಕಾಂಶವನ್ನು ನೀಡಬಲ್ಲದು. ಇದು ಪ್ರೋಟೀನ್​ ಸಮೃದ್ಧವಾಗಿರುವ ಆಹಾರವೂ ಆಗಿದೆ.

ಹಾಲು: ಹಾಲು ಮತ್ತು ಡೈರಿ ಉತ್ಪನ್ನಗಳಾದ ಮೊಸರು, ಬೆಣ್ಣೆಯಲ್ಲಿ ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಜತೆಗೆ ವಿಟಮಿನ್​ ಬಿ12 ಸಮೃದ್ಧವಾಗಿರುತ್ತದೆ. ಜತೆಗೆ ಇದರಲ್ಲಿರುವ ಪೌಷ್ಟಿಕ ಗುಣಗಳು ಆರೋಗ್ಯವನ್ನು ಸುಧಾರಿಸುತ್ತವೆ.

ಸೂಚನೆ: ಅತಿಯಾದ ಆಹಾರವು ಆರೋಗ್ಯಕ್ಕೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಅದೇ ರೀತಿ ಕಡಿಮೆ ಆಹಾರ ಸೇವಿಸಿ ಪೌಷ್ಟಿಕಾಂಶದ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಬಹುಬೇಗ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಿಯಮಿತವಾಗಿ ಪೌಷ್ಟಿಕಾಂಶಯುಕ್ತ ಹಾಗೂ ಪ್ರೋಟೀನ್​ಯುಕ್ತ ಆಹಾರವನ್ನು ಸೇವಿಸುವುದು ಒಳಿತು.

ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ಇರಲಿ. ಜತೆಗೆ ಆರೋಗ್ಯದಲ್ಲಿ ಏನೇ ಏರು-ಪೇರು ಉಂಟಾದರೂ ಸಹ ಹತ್ತಿರದ ವೈದ್ಯರ ಬಳಿ ಸಲಹೆ ಪಡೆಯಿರಿ. ಯಾವುದೇ ಒಂದು ಸಣ್ಣ ಸಮಸ್ಯೆಯ ನಿರ್ಲಕ್ಷ್ಯವೂ ಸಹ ನಿಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಬಹುದು. ಹಾಗಾಗಿ ಆರೋಗ್ಯದ ಕುರಿತಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ.

ಇದನ್ನೂ ಓದಿ:

Peanut and Jaggery Benefits: ಶೇಂಗಾ ಚಿಕ್ಕಿ ತಿನ್ನಲು ಎಷ್ಟು ರುಚಿಯೋ ಆರೋಗ್ಯಕ್ಕೆ ಅಷ್ಟೇ ಪ್ರಯೋಜನವೂ ಇದೆ!

Immunity Booster: ವಿಟಮಿನ್ ಹೊಂದಿರುವ ಪದಾರ್ಥಗಳು ಯಾವುವು? ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಏನೆಲ್ಲಾ ಸೇವಿಸಬೇಕು ಎನ್ನುವುದನ್ನು ತಿಳಿಯಿರಿ