ಹೆಚ್ಚು ಹೊತ್ತು ಟಾಯ್ಲೆಟ್ನಲ್ಲಿ ಕುಳಿತರೆ ನಿಮಗೆ ಈ ಕಾಯಿಲೆ ಬರಬಹುದು
ಇತ್ತೀಚಿನ ದಿನಗಳಲ್ಲಿ ಅನೇಕರು ಶೌಚಾಲಯದಲ್ಲಿ ಗಂಟೆಗಟ್ಟಲೆ ಕಳೆಯುತ್ತಾರೆ, ಈ ಮೊದಲು ಕೆಲವರು ನ್ಯೂಸ್ ಪೇಪರ್ ಹಿಡಿದು ಕುಳಿತರೆ ಈಗ ಜನರು ಮೊಬೈಲ್ ಹಿಡಿದು ಕೂರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಅನೇಕರು ಶೌಚಾಲಯದಲ್ಲಿ ಗಂಟೆಗಟ್ಟಲೆ ಕಳೆಯುತ್ತಾರೆ, ಈ ಮೊದಲು ಕೆಲವರು ನ್ಯೂಸ್ ಪೇಪರ್ ಹಿಡಿದು ಕುಳಿತರೆ ಈಗ ಜನರು ಮೊಬೈಲ್ ಹಿಡಿದು ಕೂರುತ್ತಾರೆ. ಕೆಲವರು ಮನೆಯಲ್ಲಿ ತಿಳಿಯದೆ ಬಾತ್ ರೂಮಿಗೆ ಹೋಗಿ ಅಲ್ಲಿಂದಲೇ ಗೆಳತಿ/ಗೆಳೆಯ ಜೊತೆ ಮಾತನಾಡುತ್ತಾರೆ.
ಕಮೋಡ್ ಮೇಲೆ ಹೆಚ್ಚು ಹೊತ್ತು ಕುಳಿತರೆ ಮೂಲವ್ಯಾಧಿ ಬರುವ ಅಪಾಯ ಹೆಚ್ಚಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಟಾಯ್ಲೆಟ್ ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು, ಹಾಗೆ ಕುಳಿತರೆ.. ಗುದನಾಳದಲ್ಲಿ ರಕ್ತ ಸಂಗ್ರಹವಾಗಿ ಪೈಲ್ಸ್ ಸಮಸ್ಯೆಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಸಮಸ್ಯೆ ಹೆಚ್ಚಾದರೆ ಆಪರೇಷನ್ ಮಾಡಬೇಕಾಗುತ್ತದೆ, 10 ನಿಮಿಷಕ್ಕಿಂತ ಹೆಚ್ಚು ಕಾಲ ಶೌಚಾಲಯದಲ್ಲಿ ಕುಳಿತುಕೊಳ್ಳಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಶೌಚಾಲಯದಲ್ಲಿ ಗುದನಾಳದ ಮೇಲೆ ಒತ್ತಡ ಹಾಕುವುದರಿಂದ ರಕ್ತನಾಳಗಳು ಊದಿಕೊಳ್ಳುತ್ತವೆ ಮತ್ತು ಹೆಮೊರೊಯಿಡ್ಸ್‌ಗೆ ಕಾರಣವಾಗುತ್ತವೆ.
ಟಾಯ್ಲೆಟ್ನಲ್ಲಿ ಮಾರಕ ಬ್ಯಾಕ್ಟೀರಿಯಾಗಳಿರುತ್ತವೆ. ಇಂತಹುದರಲ್ಲಿ ಮೊಬೈಲ್ ಅನ್ನು ಟಾಯ್ಲೆಟ್ಗೆ ಕೊಂಡೊಯ್ಯುವುದರಿಂದ ಈ ಬ್ಯಾಕ್ಟೀರಿಯಾಗಳು ನಿಮ್ಮ ಫೋನ್ ಗೆ ಅಂಟಿಕೊಳ್ಳಬಹುದು. ಟಾಯ್ಲೆಟ್ ನಿಂದ ಹೊರಬರುವ ವ್ಯಕ್ತಿ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುತ್ತಾರೆ ಆದರೆ. ಮೊಬೈಲ್ ಅನ್ನು ಶುಚಿಗೊಳಿಸುವುದಿಲ್ಲ ಇದರಿಂದ ಹಲವು ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ.
ಬಹುತೇಕರು ಟಾಯ್ಲೆಟ್ ಶೀಟ್ ಮೇಲೆ ಕುಳಿತು ದಿನಪತ್ರಿಕೆ ಓದುತ್ತಾರೆ ಅಥವಾ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಕ್ರೀಯರಾಗುತ್ತಾರೆ. ಇನ್ನೂ ಕೆಲವರು ವಿಡಿಯೋ (Video) ವಿಕ್ಷೀಸುತ್ತಾರೆ, ಚಾಟಿಂಗ್ ನಡೆಸುತ್ತಾರೆ. ಇದರಿಂದ ವೇಳೆ ಹೇಗೆ ಕಳೆಯುತ್ತಿದೆ ಎಂಬುದು ಅವರಿಗೆ ತಿಳಿಯುವುದೇ ಇಲ್ಲ. ತುಂಬಾ ಹೊತ್ತು ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಳ್ಳುವುದರಿಂದ ಲೋವರ್ ರೆಕ್ಟಂ (Lower Rectum) ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗಿ ಪೈಲ್ಸ್ ಕಾಯಿಲೆ ಬರುವ ಸಾಧ್ಯತೆ ಇದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ